ಡಾ.ಸಿ.ಡಿ.ಶ್ರೀನಿವಾಸಮೂರ್ತಿಯವರಿಗೆ `ಸುದೀರ್ಘ ಸೇವಾ ಪ್ರಶಸ್ತಿ’ ಪ್ರದಾನ

ಮೈಸೂರು, ಜ.29-ಮೈಸೂರಿನ ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿರುವ ಹೋಟೆಲ್ ಕಂಟ್ರಿ ಇನ್‍ನಲ್ಲಿ ಮಂಗಳವಾರ ನಡೆದ ಸಮಾರಂಭದಲ್ಲಿ ನಗರದ ಖ್ಯಾತ ವೈದ್ಯರು, ಹೃದ್ರೋಗ ತಜ್ಞರು ಹಾಗೂ ಫ್ರೀಮಾಸನ್ಸ್ ಲಾಡ್ಜ್ ಮೈಸೂರು ನಂ.34ರ ಸದಸ್ಯರೂ ಆದ ಡಾ.ಸಿ.ಡಿ.ಶ್ರೀನಿವಾಸಮೂರ್ತಿ ಅವರಿಗೆ ಗ್ರ್ಯಾಂಡ್ ಮಾಸ್ಟರ್ ಆಫ್ ದಿ ಗ್ರ್ಯಾಂಡ್ ಲಾಡ್ಜ್ ಆಫ್ ಇಂಡಿಯಾದ ಓಎಸ್‍ಎಂ ಹಾಗೂ `ಮೋಸ್ಟ್ ವರ್ಷಿಪ್‍ಫುಲ್ ಬ್ರದರ್’ ಆದ ರಾಜೀವ್ ರಾಮಕೃಷ್ಣ ಖಾಂಡೇಲ್‍ವಾಲ ಅವರು `50 ವರ್ಷಗಳ ದೀರ್ಘಾವಧಿಯ ಸೇವಾ ಪ್ರಶಸ್ತಿ’ (50 years Long Term Service Jewel) ಪ್ರದಾನ ಮಾಡಿದರು.

ಡಾ. ಸಿ.ಡಿ.ಶ್ರೀನಿವಾಸಮೂರ್ತಿಯವರು ಫ್ರೀಮಾಸನ್ ಆಗಿ ಸಲ್ಲಿಸಿದ 50 ವರ್ಷಗಳ ಕಾಲದ ಸುದೀರ್ಘ ಸೇವೆ ಮತ್ತು ಕೊಡುಗೆಯನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಿ ಗೌರವಿಸ ಲಾಗಿದೆ. ಇದೇ ಸಂದರ್ಭದಲ್ಲಿ ಡಾ.ಸಿ.ಡಿ.ಶ್ರೀನಿವಾಸಮೂರ್ತಿಯವರ ಸ್ನೇಹಿತರು, ಹಿತೈಷಿಗಳು ಹಾಗೂ ಅಭಿಮಾನಿಗಳು ಅಭಿನಂದಿಸಿದರು.

ಪ್ರಶಸ್ತಿ ನೀಡಿದ ಫ್ರೀಮಾಸನ್ಸ್ ಲಾಡ್ಜ್‍ಗೆ ಧನ್ಯವಾದ ಸಲ್ಲಿಸಿದ ಡಾ.ಸಿ.ಡಿ.ಶ್ರೀನಿವಾಸ ಮೂರ್ತಿ ಅವರು, ರೋಟರಿ ಸಭಾಂಗಣ ನಿರ್ಮಾಣಕ್ಕಾಗಿ ರೋಟರಿ ಕ್ಲಬ್ ಆಫ್ ಮೈಸೂರು ವೆಸ್ಟ್ ಅಸೋಸಿಯೇಷನ್‍ಗೆ 10 ಲಕ್ಷ ರೂ. ಕೊಡುಗೆ ನೀಡುವುದಾಗಿ ಘೋಷಣೆ ಮಾಡಿದರು.