ಬೇಟೆ ವೇಳೆ ವ್ಯಕ್ತಿಗೆ ಗುಂಡೇಟು: ಓರ್ವನ ಬಂಧನ

Ranjith Machaiah & Kalimada Dinesh

ಮಡಿಕೇರಿ: ಹಂದಿ ಬೇಟೆ ಯಾಡುವ ವೇಳೆ ವ್ಯಕ್ತಿಯೋರ್ವನಿಗೆ ಗುಂಡೇಟು ಬಿದ್ದು ಮೃತಪಟ್ಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಓರ್ವನನ್ನು ಬಂಧಿ ಸುವಲ್ಲಿ ಕೊಡಗು ಜಿಲ್ಲಾ ಅಪರಾಧ ಪತ್ತೆದಳದ ತಂಡ ಯಶಸ್ವಿಯಾಗಿದೆ.

ದಕ್ಷಿಣ ಕೊಡಗಿನ ವೆಸ್ಟ್‍ನೆಮ್ಮಲೆ ಗ್ರಾಮದ ಕಾಳಿಮಾಡ ದಿನೇಶ್ ದೇವಯ್ಯ (45) ಅ.18ರಂದು ಹೆಮ್ಮೆತಾಳು ಗ್ರಾಮದಲ್ಲಿರುವ ತನ್ನ ಮಾವನ ಮನೆಗೆ ಬಂದಿದ್ದು, ಅ. 21  ರಂದು ಸಂಜೆ ಕಾಳಿಮಾಡ ದಿನೇಶ್ ದೇವಯ್ಯ ಸ್ನೇಹಿತ ಅಯ್ಯಕುಟ್ಟೀರ ರಂಜಿತ್ ಮಾಚಯ್ಯ ಅವರೊಂದಿಗೆ ಹಂದಿ ಬೇಟೆಗೆಂದು ಹೋಗಿದ್ದರು ಎನ್ನಲಾಗಿದೆ. ಆದರೆ ಕತ್ತಲಿನಲ್ಲಿ ಕಾಡುಹಂದಿಗೆಂದು ಹೊಡೆದ ಗುಂಡು ಅಯ್ಯಕುಟ್ಟಿರ ರಂಜಿತ್ ಮಾಚಯ್ಯ ಅವರ ಎದೆಗೆ ತಗುಲಿ ಅವರು ಸ್ಥಳದಲ್ಲೇ ಸಾವಿಗೀಡಾಗಿದ್ದರು. ಕೃತ್ಯ ನಡೆದ ಬಳಿಕ ಆರೋಪಿ ತಲೆಮರೆಸಿಕೊಂಡಿದ್ದ.

ಕೃತ್ಯಕ್ಕೆ ಸಂಬಂಧಿಸಿದಂತೆ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆ ಪೊಲೀ ಸರು ಪ್ರಕರಣ ದಾಖಲಿಸಿಕೊಂಡಿದ್ದು, ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷಕರ ಮಾರ್ಗದರ್ಶನದಲ್ಲಿ, ಡಿಸಿಐಬಿ ಪೊಲೀಸ್ ನಿರೀಕ್ಷಕ ಎಂ. ಮಹೇಶ್, ಎಎಸ್‍ಐ ಕೆ.ವೈ. ಹಮೀದ್, ಸಿಬ್ಬಂದಿಗಳಾದ ಬಿ.ಎಲ್. ಯೋಗೇಶ್ ಕುಮಾರ್, ಎಂ.ಎನ್. ನಿರಂಜನ್, ಕೆ.ಎಸ್. ಅನಿಲ್ ಕುಮಾರ್, ಎನ್.ಟಿ. ತಮ್ಮಯ್ಯ, ಕೆ.ಆರ್. ವಸಂತ, ವಿ.ಜಿ. ವೆಂಕ ಟೇಶ್, ಚಾಲಕ ಕೆ.ಎಸ್. ಶಶಿಕುಮಾರ್ ಅವರುಗಳು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿ ವಿರುದ್ಧ ಕಲಂ 304 ಐಪಿಸಿ ಮತ್ತು 3, 27 ಭಾರತ ಶಸ್ತ್ರಾಸ್ತ್ರ ಕಾಯ್ದೆಯ ರೀತಿಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ತೀವ್ರ ವಿಚಾರಣೆಗೊಳಪಡಿಸಿದ ಬಳಿಕ ಮಡಿ ಕೇರಿ ಗ್ರಾಮಾಂತರ ವೃತ್ತ ನಿರೀಕ್ಷಕರ ಮುಂದೆ ಹಾಜರುಪಡಿಸಲಾಗಿದ್ದು, ತನಿಖೆ ಯನ್ನು ಮುಂದುವರಿಸಲಾಗಿದೆ.