ಮೈಸೂರು, ಫೆ.1(ಪಿಎಂ)- ಶೋಷಿತರ ನೋವನ್ನು ವಚನಗಳಲ್ಲಿ ಅನಾವರಣಗೊಳಿಸಿ ರುವ ಶ್ರೀ ಮಡಿವಾಳ ಮಾಚಿದೇವರು ಸಮಾಜದಲ್ಲಿದ್ದ ಅಸಮಾನತೆ, ಮೇಲು-ಕೀಳು ಎಂಬ ಕೊಳಕನ್ನು ತೊಳೆದು ಹಾಕುವ ಕಾಯಕ ಮಾಡಿದ ಮಹಾನ್ ಸಮಾಜ ಸುಧಾರಕರು ಎಂದು ಮಾಜಿ ಸಚಿವರೂ ಆದ ಶಾಸಕ ಜಿ.ಟಿ.ದೇವೇಗೌಡ ಸ್ಮರಿಸಿದರು.
ಮೈಸೂರಿನ ಕಲಾಮಂದಿರದಲ್ಲಿ ಜಿಲ್ಲಾ ಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಶ್ರೀ ಮಡಿವಾಳ ಮಾಚಿದೇವರ ಜಯಂತ್ಯುತ್ಸವ ಸಮಿತಿ ಸಂಯುಕ್ತಾಶ್ರಯ ದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮಡಿ ವಾಳ ಮಾಚಿದೇವರ ಜಯಂತಿ ಉದ್ಘಾ ಟಿಸಿ ಅವರು ಮಾತನಾಡಿದರು.
ಮಡಿವಾಳ ಮಾಚಿದೇವರ ವಚನಗಳನ್ನು ಓದಿ ಅರ್ಥೈಸಿಕೊಂಡು ಸಮಾಜದ ಸ್ವಾಸ್ಥ್ಯಕ್ಕೆ ಅನುಗುಣವಾಗಿ ನಡೆಯಬೇಕಿದೆ. 12ನೇ ಶತಮಾನದ ಬಸವಾದಿ ಶರಣರ ಇಡೀ ವಚನ ಸಾಹಿತ್ಯವನ್ನು ಸಂರಕ್ಷಿಸಿದ ಕೀರ್ತಿ ಮಡಿವಾಳ ಮಾಚಿದೇವರಿಗೆ ಸಲ್ಲುತ್ತದೆ. ಆರೋಗ್ಯಕರ ಸಮಾಜ ನಿರ್ಮಿಸುವಲ್ಲಿ ಅನುಭವ ಮಂಟಪ ಮಹತ್ತರ ಪಾತ್ರ ವಹಿಸಿದ್ದು, ಇಲ್ಲಿ ಮಾಚಿದೇವರ ಕೊಡುಗೆ ಗಳೂ ಅಗಾಧವಾಗಿವೆ ಎಂದರು.
ಬೇರೆ ಸಮುದಾಯಗಳ ಹಲವು ಮಹ ನೀಯರ ಜಯಂತಿ ಕಾರ್ಯಕ್ರಮಗಳಲ್ಲಿ ಜನರ ಹಾಜರಿ ವಿರಳವಾಗಿ ಬೇಸರಕ್ಕೆ ಕಾರಣವಾಗಿತ್ತು. ಆದರೆ, ಇಡೀ ಸಮಾಜ ವನ್ನು ಮಡಿಯಾಗಿಸುವ ಮಹತ್ವದ ಕಾಯ ಕದ ಮಡಿವಾಳ ಸಮುದಾಯ ಇಂದು ಕಲಾಮಂದಿರದಲ್ಲಿ ತುಂಬಿ ತುಳುಕುವಂತೆ ಸಮಾವೇಶಗೊಂಡಿರುವುದು ಸಂತಸ ಉಂಟು ಮಾಡಿದೆ ಎಂದರು.
ಸಣ್ಣ ಸಮುದಾಯಗಳು ಸಂಘಟಿತವಾಗ ಲೆಂಬ ಉದ್ದೇಶದಿಂದ ಸರ್ಕಾರ ಆಯಾಯ ಸಮುದಾಯದ ಮಹನೀಯರ ಜಯಂತಿ ಆಚರಿಸುತ್ತಿದೆ. ಇದನ್ನು ಅರ್ಥ ಮಾಡಿ ಕೊಂಡು ಸಮುದಾಯಗಳು ಸಂಘಟಿತ ರಾಗಬೇಕು. ಮಡಿವಾಳ ಸಮುದಾಯ ಮುಖ್ಯವಾಹಿನಿಗೆ ಬರಬೇಕು. ಅದಕ್ಕಾಗಿ ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸ ಬೇಕು. ಜತೆಗೆ ಸರ್ಕಾರದಿಂದ ದೊರೆ ಯುವ ಸೌಲಭ್ಯಗಳನ್ನು ಪಡೆಯಲು ಜಾಗೃತ ರಾಗಬೇಕು. ಸಮುದಾಯದ ಮುಖಂ ಡರು ಈ ಬಗ್ಗೆ ಜಾಗೃತಿ ಮೂಡಿಸ ಬೇಕು ಎಂದು ಗಮನ ಸೆಳೆದರು.
ಶಾಸಕ ಎಲ್.ನಾಗೇಂದ್ರ ಅಧ್ಯಕ್ಷತೆ ವಹಿಸಿ ದ್ದರು. ಸಾಹಿತಿ ಡಿ.ಮಹದೇವಕುಮಾರ್ ಮುಖ್ಯ ಭಾಷಣ ಮಾಡಿದರು. ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಎಂ.ಚಂದ್ರಶೇಖರ್, ಮೈಸೂರು ತಹಸಿಲ್ದಾರ್ ರಕ್ಷಿತ್, ಕನ್ನಡ-ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಹೆಚ್.ಚೆನ್ನಪ್ಪ, ಸಂಘದ ಅಧ್ಯಕ್ಷ ಚಂದ್ರ ಶೇಖರ್, ಉಪಾಧ್ಯಕ್ಷ ಎಸ್.ಜೆ.ಪ್ರಶಾಂತ್, ಖಜಾಂಚಿ ರಮೇಶ್, ಮೈಸೂರು ತಾಲೂಕು ಅಧ್ಯಕ್ಷ ಶಿವಣ್ಣ ದುದ್ದಗೆರೆ, ಗೌರವಾಧ್ಯಕ್ಷ ಸಿದ್ದಪ್ಪಾಜಿ ಆಲನಹಳ್ಳಿ ಮತ್ತಿತರರಿದ್ದರು.
ವಿಳಂಬ-ಬೇಸರ: ಬೆಳಿಗ್ಗೆ 9ಕ್ಕೆ ನಿಗದಿ ಯಾಗಿದ್ದ ಮೆರವಣಿಗೆ ಶುರುವಾಗಿದ್ದು ಬೆಳಿಗ್ಗೆ 11.40ಕ್ಕೆ. ಕಲಾಮಂದಿರದಲ್ಲಿ ಬೆಳಿಗ್ಗೆ 11.30ಕ್ಕೆ ನಿಗದಿಯಾಗಿದ್ದ ಸಭಾ ಕಾರ್ಯಕ್ರಮ ಆರಂಭಗೊಂಡಿದ್ದು ಮಧ್ಯಾಹ್ನ 2.10ಕ್ಕೆ. ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ನಡೆ ಯುವ ಮಹನೀಯರ ಜಯಂತಿಗಳಲ್ಲಿ ಬಹುತೇಕ ಸಂದರ್ಭ ಸಮಯ ಪಾಲನೆ ಯಾಗದು ಎಂಬ ಬೇಸರದ ನುಡಿಗಳು ಸಭಿಕರಿಂದ ಕೇಳಿಬಂದವು.