ಆಧುನಿಕ ಮೈಸೂರು ನಿರ್ಮಾಣದಲ್ಲಿ ಮಹಾರಾಣಿಯರಾದ ಲಕ್ಷ್ಮಮ್ಮಣ್ಣಿ, ಕೆಂಪನಂಜಮ್ಮಣ್ಣಿ ಕೊಡುಗೆ ಅಪಾರ

ಮೈಸೂರು: ಆಧುನಿಕ ಮೈಸೂರು ನಿರ್ಮಾಣದಲ್ಲಿ ಮಹಿಳೆಯರ ಪಾತ್ರ ಪ್ರಮುಖವಾಗಿದ್ದು, ವಿಶೇಷವಾಗಿ ಮಹಾರಾಣಿ ಲಕ್ಷ್ಮಮ್ಮಣ್ಣಿ ಹಾಗೂ ಮಹಾರಾಣಿ ಕೆಂಪನಂಜಮ್ಮಣ್ಣಿಯವರ ಕೊಡುಗೆ ಅಪಾರ ಎಂದು ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಪತ್ನಿ ತ್ರಿಷಿಕಾ ಕುಮಾರಿ ಒಡೆಯರ್ ಸ್ಮರಿಸಿದರು.

ಮೈಸೂರಿನ ಎಂಜಿ ರಸ್ತೆಯ ತೇರಾಪಂತ್ ಭವನದಲ್ಲಿ ಶ್ರೀ ಜೈನ್ ಶ್ವೇತಾಂಬರ್ ತೇರಾಪಂತ್ ಮಹಿಳಾ ಮಂಡಲ್ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಬುಧವಾರ ಹಮ್ಮಿಕೊಂಡಿದ್ದ `ಮಹಿಳಾ ಸಬಲೀಕರಣ’ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ಲಕ್ಷ್ಮಮ್ಮಣ್ಣಿ ಹಾಗೂ ವಾಣಿವಿಲಾಸ ಸನ್ನಿಧಾನ ಎಂದೇ ಜನಪ್ರಿಯರಾಗಿದ್ದ ಕೆಂಪನಂಜಮ್ಮಣ್ಣಿಯವರ ದೂರದೃಷ್ಟಿಯ ಫಲವಾಗಿ ಇಂದು ಮೈಸೂರು ಪ್ರಾಂತ್ಯ ಹಲವು ಕ್ಷೇತ್ರಗಳಲ್ಲಿ ಪ್ರಗತಿ ಕಂಡಿದೆ ಎಂದು ಹೇಳಿದರು.

ಹೈದರ್ ಹಾಗೂ ಟಿಪ್ಪು ಆಕ್ರಮಣಕ್ಕೆ ತುತ್ತಾಗಿದ್ದ ಮೈಸೂರು ರಾಜ್ಯವನ್ನು ಮರಳಿ ಪಡೆಯುವಲ್ಲಿ ಲಕ್ಷ್ಮ ಮ್ಮಣ್ಣಿ ತಮ್ಮ ದಿಟ್ಟತನವನ್ನು ಪ್ರದರ್ಶಿಸಿದ್ದರು. ಇದಕ್ಕಾಗಿ ಬ್ರಿಟಿಷರೊಂದಿಗೆ ರಾಜತಾಂತ್ರಿಕ ಸಂಧಾನ ನಡೆಸಿದ್ದಕ್ಕಾಗಿ ಸೆರೆವಾಸವನ್ನು ಅನುಭವಿಸಿದ್ದರೂ ಅಂತಿಮವಾಗಿ ಮೊಮ್ಮಗ ಮುಮ್ಮಡಿ ಕೃಷ್ಣರಾಜ ಒಡೆಯರ್‍ನ ಆಡಳಿತಕ್ಕೆ ಮರಳಿ ಮೈಸೂರು ರಾಜ್ಯ ದಕ್ಕುವಂತಾಯಿತು. ಇಂತಹ ವೀರ ವನಿತೆಯಾದ ಅವರು 1800ರ ಸಂದರ್ಭದಲ್ಲಿ ಸಿಡುಬು ನಿರೋಧಕ ಮದ್ದು ಅನ್ನು ಸ್ವೀಕರಿಸಲು ಸಾರ್ವ ಜನಿಕರು ಹಿಂದೇಟು ಹಾಕುತ್ತಿದ್ದಾಗ ರಾಜಮನೆತನದ ಮಹಿಳೆಯರಿಗೆ ಮೊದಲು ಮದ್ದು ಕೊಡಿಸಿ ಅದರಿಂದ ಯಾವುದೇ ಅಪಾಯವಿಲ್ಲ ಎಂಬ ಅರಿವು ಮೂಡಿಸು ವಲ್ಲಿ ಯಶಸ್ವಿಯಾಗಿದ್ದರು ಎಂದು ತಿಳಿಸಿದರು.

ಮೈಸೂರಿಗೆ ವಾಣಿವಿಲಾಸ ಸನ್ನಿಧಾನ ಎಂದೇ ಜನ ಪ್ರಿಯರಾಗಿದ್ದ ಕೆಂಪನಂಜಮ್ಮಣ್ಣಿಯವರ ಕೊಡುಗೆಯೂ ಅಪಾರವಾಗಿದೆ. ಮಹಾರಾಜರಾಗಿದ್ದ 10ನೇ ಚಾಮರಾಜ ಒಡೆಯರ್ ಇವರ ಪತಿಯಾಗಿದ್ದು, 10ನೇ ಚಾಮರಾಜ ಒಡೆಯರ್ 1894ರಲ್ಲಿ ನಿಧನ ಹೊಂದಿದಾಗ ಪುತ್ರ ನಾಲ್ವಡಿ ಕೃಷ್ಣರಾಜ ಒಡೆಯರ್ ಬಾಲಕರಾಗಿದ್ದರು. ಈ ಕಾರಣಕ್ಕೆ ರಾಜ್ಯಾಡಳಿತದ ಹೊಣೆಗಾರಿಕೆ ನಾಲ್ವಡಿಯವರ ತಾಯಿ ಕೆಂಪನಂಜಮ್ಮಣ್ಣಿಯವರ ಮೇಲೆಯೇ ಬೀಳುತ್ತದೆ. ಆಡಳಿತ ವಹಿಸಿಕೊಂಡ ಇವರು ಮಹಿಳಾ ಶಿಕ್ಷಣಕ್ಕೆ ಒತ್ತು ನೀಡಿ ದರು. 13 ಸಾವಿರ ಮಹಿಳೆಯರಿಗೆ ಉಚಿತ ಶಿಕ್ಷಣ ಕೊಡಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ ಎಂದು ನುಡಿದರು.

ಪ್ರಸ್ತುತ ನಮ್ಮ ಸಮಾಜದಲ್ಲಿ ಬಹುತೇಕ ಎಲ್ಲಾ ಕ್ಷೇತ್ರ ಗಳಲ್ಲಿ ಮಹಿಳೆಯರು ತಮ್ಮ ಛಾಪು ಮೂಡಿಸಿದ್ದಾರೆ. ಆದಾಗ್ಯೂ ಶೋಷಣೆ ವಿರುದ್ಧ ದನಿ ಎತ್ತದ ಮಹಿಳೆ ಯರೂ ಇದ್ದಾರೆ. ಇಂತಹವರಿಗೆ ಮುಖ್ಯವಾಹಿನಿಯಲ್ಲಿ ರುವ ಮಹಿಳೆಯರು ದನಿಯಾಗಿ ನಿಲ್ಲಬೇಕು. ಅದೇ ರೀತಿ ಪುರುಷ ಸಮುದಾಯವೂ ಮಹಿಳೆಯರ ಸಮಾನತೆಗೆ ಕೊಡುಗೆ ನೀಡಬೇಕು. ಯಾವುದೇ ಹೆಣ್ಣು ಮಗುವಿನ ಅಂತಿಮ ಗುರಿ ಕೇವಲ ಮದುವೆ ಹಾಗೂ ಸಂಸಾರಕ್ಕೆ ಸೀಮಿತಗೊಳ್ಳಬಾರದು ಎಂದು ಹೇಳಿದರು.

ಇದೇ ವೇಳೆ ಮಹಿಳಾ ಸಬಲೀಕರಣಕ್ಕೆ ಸಂಬಂಧಿಸಿದ ಕಿರು ನಾಟಕವೊಂದನ್ನು ತೇರಾಪಂತ್ ಮಹಿಳಾ ಮಂಡಲ್‍ದ ಮಹಿಳೆಯರು ಸಾದರಪಡಿಸಿದರು. ಮಹಿಳಾ ಮಂಡಲ್‍ನ ಅಧ್ಯಕ್ಷೆ ವನ್ಮಾಲ ನಹರ್, ಉಪಾಧ್ಯಕ್ಷೆ ಸುಧಾ ನೋಲ್ಕ್, ಕಾರ್ಯದರ್ಶಿ ಖಮೋಸ್ ಮೆಹರ್ ಸೇರಿ ದಂತೆ ಸಂಘ ಟನೆಯ ಮಹಿಳೆಯರು ಹಾಗೂ ವಿವಿಧ ಕಾಲೇಜುಗಳ ವಿದ್ಯಾರ್ಥಿನಿಯರು ಹಾಜರಿದ್ದರು.