ವಿವಿಧ ಸಂಘಟನೆಗಳಿಂದ ಮೈಸೂರಲ್ಲಿ ಮಹಾತ್ಮ ಗಾಂಧಿ ಹುತಾತ್ಮ ದಿನ ಆಚರಣೆ

ಮೈಸೂರು: ಮೈಸೂರಿನ ಗಾಂಧಿ ವೃತ್ತದಲ್ಲಿ ಸಂವಿಧಾನ ರಕ್ಷಣಾ ಸಮಿತಿ, ದಲಿತ ಸಂಘರ್ಷ ಸಮಿತಿ ಸೇರಿ ದಂತೆ ವಿವಿಧ ಸಂಘಟನೆಗಳಿಂದ ಮಹಾತ್ಮ ಗಾಂಧೀಜಿ ಹುತಾತ್ಮ ದಿನ ಆಚರಿಸಲಾಯಿತು. ಮಹಾತ್ಮ ಗಾಂಧೀಜಿಯವರ ಭಾವಚಿತ್ರ ಗಳನ್ನು ಹಿಡಿದ ನೂರಾರು ಸಂಘಟನಾಕಾ ರರು ಮೌನಾಚರಣೆ ಮೂಲಕ ರಾಷ್ಟ್ರಪಿತ ನಿಗೆ ನಮನ ಸಲ್ಲಿಸಿದರು. ಈ ವೇಳೆ ಹಿರಿಯ ರಂಗಕರ್ಮಿ ಪ್ರಸನ್ನ ಮಾತನಾಡಿ, ಸ್ವಾತಂತ್ರ್ಯ ನಂತರ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಒಂದಾದ ದೇಶವನ್ನು ನಾವಿಂದು ಕಾಣು ತ್ತಿದ್ದೇವೆ. ಎಷ್ಟೇ ಗುಂಡುಗಳನ್ನು ಹೊಡೆದು, ಹೆದರಿಸಿದರೂ ನಗೆಮುಖದಿಂದ ಒಂದು ಗೂಡಿ, ಒಕ್ಕೂಟವನ್ನು ಗಟ್ಟಿಗೊಳಿಸುವ ಮೂಲಕ ಮಹಾತ್ಮನ ಸಂದೇಶವನ್ನು ಜೀವಂತ ಗೊಳಿಸೋಣ ಎಂದು ಕರೆ ನೀಡಿದರು.

ಮಹಾತ್ಮರು ಹುತಾತ್ಮರಾಗಿ ಮತ್ತೆ ಎದ್ದು ಬಂದಂತೆ, ಮಹಾತ್ಮ ಗಾಂಧೀಜಿಯವರು ಮತ್ತೆ ಎದ್ದು ಬಂದಿದ್ದಾರೆ. ನಮ್ಮ ದೇಶದ ಜನ ಹುತಾತ್ಮರಿಂದ ಪ್ರೇರಣೆಗೊಂಡು ಒಟ್ಟಾಗಿ ನಿಂತಿದ್ದೇವೆ. ಜಾತಿ, ಧರ್ಮ, ಬಡವ-ಶ್ರೀಮಂತ ಎಂಬ ಭೇದಗಳನ್ನು ತೊರೆದು ಒಟ್ಟಾಗಿ ನಿಂತಿದ್ದಾರೆ. ಸತ್ಯದ ಪರವಾಗಿ ನಿಂತ ವರು ಯಾವತ್ತೂ ಗೆಲ್ಲುತ್ತಾರೆ ಎಂಬುದನ್ನು ಗಾಂಧೀಜಿ ಯವರೇ ತೋರಿಸಿಕೊಟ್ಟಿ ದ್ದಾರೆ ಎಂದರು.

ಗಾಂಧೀಜಿ ಎಲ್ಲಾ ರಾಜ ಕೀಯವನ್ನು ಮೀರಿ ನಿಂತ ಆಧ್ಯಾತ್ಮಿಕ ವ್ಯಕ್ತಿಯಾಗಿದ್ದು, ಸತ್ಯದ ಪರವಾಗಿ ನಿಂತವರಾಗಿದ್ದಾರೆ. ಇಂದು ಎಲ್ಲರ ಮುಖದಲ್ಲಿ ಗಾಂಧೀಜಿ ಕಾಣುತ್ತಿದ್ದಾರೆ. 1947ರ ಬಳಿಕ ಇಷ್ಟು ಒಂದಾದ ದೇಶ ವನ್ನು ನಾನು ಕಂಡಿಲ್ಲ. ನಾವು ಗಟ್ಟಿಯಾಗಿ ಹಿಡಿಯ ಬೇಕಿರುವುದು ಈ ಏಕತೆ ಯನ್ನು, ನಮ್ಮ ಸಂಸ್ಕøತಿ, ಸಮಾಜ ಹಾಗೂ ನಡೆ- ನುಡಿಗಳಲ್ಲಿ ಕಾಣುತ್ತಿ ರುವ ಏಕತೆಯನ್ನು ಮತ್ತಷ್ಟು ಗಟ್ಟಿಗೊಳಿಸ ಬೇಕಿದೆ. ಇದು ಮಹಾ ತ್ಮನ ಸಂದೇಶವಾಗಿದೆ ಎಂದು ತಿಳಿಸಿದರು.

ನಾವಿಂದು ಶತ್ರುಗಳನ್ನು ನೆನೆಯುವ ಅಗತ್ಯವಿಲ್ಲ. ಇಷ್ಟೆಲ್ಲಾ ಮಿತ್ರರೂ ಸಿಕ್ಕಿರುವಾಗ ಮಿತ್ರತ್ವ ವನ್ನು ಮಾತ್ರ ನೆನೆದು, ಮಿತ್ರತ್ವವನ್ನು ಕಟ್ಟೋಣ. ಎಷ್ಟೇ ಗುಂಡುಗಳನ್ನು ಹೊಡೆ ಯಲಿ, 144 ಸೆಕ್ಷನ್‍ಗಳನ್ನು ಹಾಕಲಿ. ಆದರೆ, ಅವೆಲ್ಲವನ್ನೂ ನಾವು ನಗೆ ಮುಖದಿಂದ ಸ್ವೀಕರಿಸಬೇಕು. ಶಾಂತ ರೀತಿಯಿಂದ ಒಕ್ಕೂಟವನ್ನೂ ಗಟ್ಟಿಗೊಳಿಸುತ್ತಾ ಹೋಗ ಬೇಕು ಎಂದು ಹೇಳಿದರು.

‘ಗಾಂಧಿ ಎಂದರೆ ಪರ್ಯಾಯ ಬೆಳಕು, ಮೋದಿ-ಷಾ ಎಂದರೆ ವಿನಾಶದ ಕತ್ತಲು, ಗಾಂಧಿ ಎಂದರೆ ಅಖಂಡ ಭಾರತ, ಮೋದಿ -ಷಾ ಒಕ್ಕೂಟದ ವಿರೋಧಿಗಳು, ಗಾಂಧಿ ಎಂದರೆ ಸತ್ಯ, ಅಹಿಂಸೆ, ಸ್ವಾತಂತ್ರ್ಯ, ಮೋದಿ -ಷಾ ಎಂದರೆ ಸುಳ್ಳು, ಹಿಂಸೆ ಮತ್ತು ಕುತಂತ್ರ’ ಎಂಬ ಘೋಷಣೆಗಳನ್ನು ಕೂಗಿ ಕೇಂದ್ರ ಸರ್ಕಾರದ ಆಡಳಿತದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಸಮಾಜವಾದಿ ಪ.ಮಲ್ಲೇಶ್, ಜಿ.ಪಿ.ಬಸವರಾಜು, ಜನಾ ರ್ಧನ್(ಜನ್ನಿ), ಪಂಡಿತಾರಾದ್ಯ, ಹೊಸ ಕೋಟೆ ಬಸವರಾಜು, ಪ್ರೊ.ರಾಮೇಶ್ವರಿ ವರ್ಮ, ಕೃಷ್ಣಪ್ರಸಾದ್, ಡಾ.ಸಾರಾ, ಪ್ರೊ.ಶಬೀರ್ ಮುಸ್ತಾ ತನ್ವೀರ್ ಪಾಷ, ಲಕ್ಷ್ಮಿನಾರಾಯಣ್, ಉಮಾದೇವಿ, ಸಂದ್ಯಾ ಮತ್ತಿತರರು ಭಾಗವಹಿಸಿದ್ದರು.