ಕೃಷಿ, ಶಿಕ್ಷಣ ಕ್ಷೇತ್ರಕ್ಕೆ ಶ್ರೀಮಠದ ಕೊಡುಗೆ ಅಪಾರ: ಡಿಸಿಎಂ

ನಂಜನಗೂಡು: ಜಾತ್ರಾ ಮಹೋ ತ್ಸವದ ಭಜನಾಮೇಳದಲ್ಲಿ ಸಮಾರೋಪ ನುಡಿಗಳನ್ನಾಡಿದ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರು, ಸುತ್ತೂರು ಮಠವು ಕೃಷಿ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಅಪಾರವಾದ ಕೊಡುಗೆಯನ್ನು ನೀಡಿದೆ ಎಂದರು. ಶ್ರೀಕ್ಷೇತ್ರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಸಂತೋಷದ ವಿಚಾರ. ನಾನು ಅಧಿಕಾರ ದಲ್ಲಿ ಇಲ್ಲದಿದ್ದಾಗಲೂ ಸುತ್ತೂರು ಜಾತ್ರೆಯಲ್ಲಿ ಭಾಗವಹಿಸಿದ್ದೆ.

ಸುತ್ತೂರು ಮಠಕ್ಕೆ ಸಾವಿರ ವರ್ಷಗಳ ಇತಿಹಾಸ ವಿದ್ದು ಸಾಮಾಜಿಕವಾಗಿ ಮತ್ತು ಧಾರ್ಮಿ ಕವಾಗಿ ಸೇವೆಯನ್ನು ಮಾಡುತ್ತಾ ಧರ್ಮದ ಪರಂಪರೆಯನ್ನು ಸಾರುತ್ತಿದೆ. ಇಂದಿನ ವರೆಗೂ ಸಮಾಜಕ್ಕೆ ಉತ್ತಮ ಸಂದೇಶ ಗಳನ್ನು ನೀಡುತ್ತಾ ಬಂದಿದೆ. ಜೆಎಸ್‍ಎಸ್ ಶಿಕ್ಷಣ ಸಂಸ್ಥೆಗಳ 50,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿ ದ್ದಾರೆ. ಈ ಸಂಸ್ಥೆಯ ವಿದ್ಯಾರ್ಥಿಗಳು ಬಳಿಕ ವಿಶ್ವದಾದ್ಯಂತ ಉತ್ತಮ ಬದುಕನ್ನು ಕಟ್ಟಿಕೊಂಡಿದ್ದಾರೆ. 1947ರಲ್ಲಿ ನಮ್ಮ ದೇಶ ದಲ್ಲಿ ಸಾಕ್ಷರತೆ ಶೇ.12 ಇತ್ತು. ಈಗ ಸಾಕ್ಷ ರತೆಯ ಪ್ರಮಾಣ ಶೇ.78ರಷ್ಟು ಹೆಚ್ಚಾ ಗಿದ್ದು, ಇದಕ್ಕೆ ಸರ್ಕಾರಗಳು ಮಾತ್ರ ವಲ್ಲದೇ ದೇಶದಲ್ಲಿರುವ ಶ್ರೀಮಠಗಳ ಸ್ವಾಮೀಜಿಗಳು ಸಹ ಕಾರಣರಾಗಿರುತ್ತಾರೆ ಎಂದು ಹೇಳಿದರು. ಇಲ್ಲಿ ವಿದ್ಯಾಭ್ಯಾಸ ಮಾಡಿದ ಪ್ರತಿಯೊಬ್ಬ ವಿದ್ಯಾರ್ಥಿಯು ಮುಂದೆ ಒಬ್ಬ ಪ್ರಜ್ಞಾವಂತ ಪ್ರಜೆಯಾಗಿ ಬಾಳುವುದರಲ್ಲಿ ಸಂಶಯವಿಲ್ಲ. 60ರ ದಶಕದಲ್ಲಿ ಕೃಷಿಯ ಕ್ಷೇತ್ರದಲ್ಲಿ ಕುಂಠಿತ ಗೊಂಡಿದ್ದ ಭಾರತವು 80ರ ದಶಕದ ನಂತರ ಹೊಸ ಕ್ರಾಂತಿಯನ್ನೇ ಸೃಷ್ಟಿಸಿದೆ. ಹೊರ ರಾಷ್ಟ್ರಗಳಿಗೂ ಆಹಾರ ಧಾನ್ಯ ಗಳನ್ನು ರಫ್ತು ಮಾಡುವಷ್ಟರ ಮಟ್ಟಿಗೆ ಭಾರತ ಬಲಿಷ್ಠವಾಗಿ ಇಂದು ಬೆಳೆದಿದೆ.

ಸುತ್ತೂರು ಜಾತ್ರೆಯು ಕೃಷಿಯ ಬಗ್ಗೆ ಚರ್ಚಿಸಲು ಒಂದು ದಿನವನ್ನೇ ಮೀಸಲಾ ಗಿರಿಸಿ ಅನಕ್ಷರಸ್ಥ ರೈತರನ್ನು ಕೃಷಿಯ ವಿಚಾರ ದಲ್ಲಿ ವಿದ್ಯಾವಂತರನ್ನಾಗಿ ಮಾಡುತ್ತಿದೆ. ಹಾಗೆಯೇ ಜಾತ್ರೆಯ ಮೂಲಕ ಸಾರ್ವಜ ನಿಕರಿಗೆ ಮಠದ ಪರಂಪರೆ, ಇತಿಹಾಸ ವನ್ನು ತಿಳಿಸಿ ಧರ್ಮದಿಂದ ಬಾಳುವಂತೆ ಸಂದೇಶವನ್ನು ನೀಡುತ್ತಿದೆ. ಇಂತಹ ಕಾರ್ಯಕ್ರಮಗಳಿಗೆ ಸರ್ಕಾರವು ಬೆಂಬಲ ವಾಗಿ ನಿಲ್ಲುತ್ತದೆ ಎಂದು ನುಡಿದರು.