ಹೆಚ್‍ಡಿಡಿ, ರಾಹುಲ್ ನಾಯಕತ್ವ ವೃದ್ಧಿಗೆ ಮೈತ್ರಿ ಅಭ್ಯರ್ಥಿ ಗೆಲ್ಲಿಸಿ

ತಿ.ನರಸೀಪುರ: ರಾಷ್ಟ್ರ ಮಟ್ಟದ ರಾಜಕಾರಣದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರ ನಾಯಕತ್ವ ವನ್ನು ಬಲಪಡಿಸಲು, ರಾಜ್ಯದಲ್ಲಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ಪೂರ್ಣಾವಧಿ ಪೂರೈಸಲು ಈಗಿನ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಮುಖಂಡರು, ಕಾರ್ಯಕರ್ತರು ಚಾಮ ರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಆರ್.ಧ್ರುವನಾರಾಯಣ್ ಅವರನ್ನು ಗೆಲ್ಲಿಸಬೇಕು ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಹೇಳಿದರು.

ತಾಲ್ಲೂಕಿನ ಬೀಡನಹಳ್ಳಿ, ತುರುಗನೂರು, ಯಾಚೇನಹಳ್ಳಿಯಲ್ಲಿ ಗುರುವಾರ ಪಾದ ಯಾತ್ರೆ ನಡೆಸಿ ಚಾಮರಾಜನಗರ ಲೋಕ ಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಆರ್.ಧ್ರುವ ನಾರಾಯಣ್ ಪರ ಮತಯಾಚಿಸಿದ ಅವರು, ರಾಷ್ಟ್ರೀಯ ರಾಜಕಾರಣದಲ್ಲಿ ಜಾತ್ಯತೀತ ಶಕ್ತಿಗಳು ಒಟ್ಟಾಗಿ ಲೋಕ ಸಭೆ ಚುನಾವಣೆಯಲ್ಲಿ ಹೋರಾಡಬೇಕಾ ಗಿದೆ. ಹೆಚ್.ಡಿ.ದೇವೇಗೌಡರು ಮತ್ತು ರಾಹುಲ್ ಗಾಂಧಿ ಇಬ್ಬರ ನಾಯಕತ್ವವನ್ನು ಬೆಂಬಲಿಸಲು ಜೆಡಿಎಸ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಒಟ್ಟಾಗಿ ಮೈತ್ರಿ ಅಭ್ಯರ್ಥಿ ಯನ್ನು ಅತ್ಯಧಿಕ ಮತಗಳ ಅಂತರದಿಂದ ಗೆಲ್ಲಿಸಬೇಕೆಂದು ಮನವಿ ಮಾಡಿದರು.

ಹಳೆ ಮೈಸೂರು ಭಾಗದಲ್ಲಿ ವಿಧಾನ ಸಭೆ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಜೆಡಿಎಸ್-ಕಾಂಗ್ರೆಸ್ ಜಿದ್ದಾಜಿದ್ದಿಯಿದೆ. ನಾವುಗಳೇ ಕಾದಾಡು ತ್ತೇವೆಯಾದರೂ ಲೋಕಸಭೆ ಚುನಾವಣೆ ಎದುರಾಗಿರುವಾಗ ಬಿಜೆಪಿ ವಿರುದ್ಧ ಸಂಘ ಟಿತರಾಗಬೇಕು. ಸದಾ ಜನರೊಂದಿಗೆ ಬೆರೆಯುವ ಸರಳ, ಸಜ್ಜನಿಕೆ ವ್ಯಕ್ತಿ ಆರ್. ಧ್ರುವನಾರಾಯಣ್ ಅವರನ್ನು ಮತ್ತೊಮ್ಮೆ ಲೋಕಸಭೆಗೆ ಕಳುಹಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.

ಅಭ್ಯರ್ಥಿ ಧ್ರುವನಾರಾಯಣ್ ಮಾತ ನಾಡಿ, 1 ದಶಕದ ಅವಧಿಯಲ್ಲಿ ಸಂಸದ ನಾಗಿ ಹಲವು ಯೋಜನೆಗಳನ್ನು ತಂದು ಜನ ಒಪ್ಪುವಂತೆ ಕೆಲಸ ಮಾಡಿದ್ದೇನೆ. ಜನಸೇವೆ ತವಕದೊಂದಿಗೆ ಚುನಾವಣೆಗೆ ಸ್ಪರ್ಧಿಸಿದ್ದೇನೆ. ಅಧಿಕಾರದ ಆಸೆ ಅಥವಾ ಯಾವುದೋ ದುರುದ್ದೇಶ ನನ್ನಲ್ಲಿಲ್ಲ. ದುಡಿಯುವ ಚೈತನ್ಯ ಮತ್ತು ಉತ್ಸಾಹ ಇರುವುದರಿಂದ ಲೋಕಸಭೆಗೆ ಕಳುಹಿಸಿ ಕೊಡಿ ಎಂದು ಮನವಿ ಮಾಡಿದರು.

ಶಾಸಕ ಎಂ.ಅಶ್ವಿನ್‍ಕುಮಾರ್ ಮಾತ ನಾಡಿದರು. ಮಾಜಿ ಸಂಸದ ಕಾಗಲವಾಡಿ ಶಿವಣ್ಣ, ವಿಧಾನ ಪರಿಷತ್ ಸದಸ್ಯ ಆರ್. ಧರ್ಮಸೇನ, ಮಾಜಿ ಶಾಸಕ ಎಸ್.ಕೃಷ್ಣಪ್ಪ, ಜೆಡಿಎಸ್ ಜಿಲ್ಲಾಧ್ಯಕ್ಷ ಎನ್.ನರಸಿಂಹ ಮೂರ್ತಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯಕುಮಾರ್, ಮಾಜಿ ಅಧ್ಯಕ್ಷ ಆರ್. ಶಂಕರೇಗೌಡ, ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ವೈ.ಎನ್.ಶಂಕರೇಗೌಡ, ಜಿ.ಪಂ ಸದಸ್ಯರಾದ ಎಂ.ಸುಧೀರ್, ಎಸ್.ವಿ.ಜಯಪಾಲ್ ಭರಣಿ, ಮಂಜುನಾಥನ್, ಮಾಜಿ ಅಧ್ಯಕ್ಷ ಎಸ್.ಎನ್.ಸಿದ್ದಾರ್ಥ, ಮಾಜಿ ಸದಸ್ಯರಾದ ಎಂ.ಸುಧಾ ಮಹದೇವಯ್ಯ, ಎಂ.ಆರ್. ಸೋಮಣ್ಣ, ತಾ.ಪಂ ಅಧ್ಯಕ್ಷ ಆರ್.ಚಲುವ ರಾಜು, ಮಾಜಿ ಅಧ್ಯಕ್ಷ ಸಿ.ಚಾಮೇಗೌಡ, ದಸಂಸ ಜಿಲ್ಲಾ ಸಂಚಾಲಕ ಆಲಗೂಡು ಶಿವಕುಮಾರ್, ಕೆಪಿಸಿಸಿ ಸದಸ್ಯ ಧನಂಜಯ ಗೌಡ, ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ವೈ.ಎಸ್. ರಾಮಸ್ವಾಮಿ, ಕ್ಷೇತ್ರಾಧ್ಯಕ್ಷ ಸಿ.ಬಿ.ಹುಂಡಿ ಚಿನ್ನಸ್ವಾಮಿ, ಕಾರ್ಯಾಧ್ಯಕ್ಷ ಬಿ.ಆರ್. ಮಂಜು ನಾಥ್, ಬನ್ನೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಎಸ್.ರವೀಂದ್ರಕುಮಾರ್, ಡಿಸಿಸಿ ವೈದ್ಯರ ಜಿಲ್ಲಾಧ್ಯಕ್ಷ ಡಾ.ಬಿ.ಪ್ರದೀಪ, ಯುವ ಕಾಂಗ್ರೆಸ್ ಅಧ್ಯಕ್ಷ ಟಿ.ಎಸ್. ಲೋಕೇಶ್, ಗ್ರಾ.ಪಂ ಸದಸ್ಯ ವೈ.ಎಸ್. ಅಶೋಕ್‍ಕುಮಾರ್, ಸಿ.ಮಹದೇವು ಸೇರಿದಂತೆ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಮುಖಂಡರು, ಕಾರ್ಯಕರ್ತರು ಹಾಜರಿದ್ದರು.