ಆಸ್ಪತ್ರೆ ಸೌಲಭ್ಯ ಸದ್ಭಳಕೆಗೆ ಸಚಿವರ ಸಲಹೆ

ಪಾಂಡವಪುರ:  ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ನಿರ್ಮಿ ಸಿರುವ ವಾಣಿಜ್ಯ ಸಂಕೀರ್ಣ ಹಾಗೂ ಆಸ್ಪತ್ರೆ ಕ್ಯಾಂಟೀನ್ ಮತ್ತು ಸೈಕಲ್ ಸ್ಟ್ಯಾಂಡ್ ಅನ್ನು ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು ಉದ್ಘಾಟಿಸಿದರು.

ಆಸ್ಪತ್ರೆ ಆವರಣದಲ್ಲಿ ರೋಗಿಗಳು ಹಾಗೂ ಸಾರ್ವಜನಿಕರಿಗೆ ಎಲ್ಲಾ ರೀತಿಯ ಸೌಲಭ್ಯಗಳು ದೊರೆಯುವಂತೆ ಸಾರ್ವಜನಿಕ ವಾಣಿಜ್ಯ ಸಂಕೀರ್ಣ ತೆರೆಯಲಾಗಿದೆ. ಜೊತೆಗೆ ಆಸ್ಪತ್ರೆ ಕ್ಯಾಂಟೀನ್ ಆರಂಭಿಸಲಾಗಿದ್ದು, ರೋಗಿಗಳಿಗೆ ಕಡಿಮೆ ದರದಲ್ಲಿ ಊಟ, ತಿಂಡಿ ದೊರೆಯಲಿದೆ. ಇದನ್ನು ರೋಗಿ ಗಳು ಹಾಗೂ ಸಾರ್ವಜನಿಕರು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ವಾಣಿಜ್ಯ ಸಂಕೀರ್ಣ ಮಾಲೀಕ ಹರಳಹಳ್ಳಿ ಸುಬ್ರಮಣ್ಯ ಮಾತನಾಡಿ, ಆಸ್ಪತ್ರೆ ಕ್ಯಾಂಟೀನ್‍ನಲ್ಲಿ ಕಡಿಮೆ ದರದಲ್ಲಿ ಊಟ, ತಿಂಡಿ ದೊರೆಯಲಿದೆ. ಅನ್ನ ಸಾಂಬರ್-15 ರೂ. ಎರಡು ಇಡ್ಲಿ-15 ರೂ., ಎರಡು ಚಪಾತಿ-16 ರೂ., ಚಿತ್ರಾನ್ನ- 15, ಬಾತ್- 15 ರೂ., ಕಾಫಿ, ಟೀ, ಬಾದಾಮಿ ಹಾಲು- ತಲಾ 5 ರೂ, ಎರಡು ವಡೆ-5 ರೂ. ಗಳಿಗೆ ದೊರೆಯಲಿದೆ ಎಂದು ತಿಳಿಸಿದರು.

ಈ ವೇಳೆ ತಾಪಂ ಅಧ್ಯಕ್ಷೆ ಪೂರ್ಣಿಮಾ, ಮಾಜಿ ಅಧ್ಯಕ್ಷೆ ರಾಧಮ್ಮ, ಸದಸ್ಯರಾದ ಗೋವಿಂದಯ್ಯ, ವಿ.ಎಸ್.ನಿಂಗೇಗೌಡ, ಗಾಯಿತ್ರಿ, ಗೀತಾ, ಪುರಸಭೆ ಉಪಾಧ್ಯಕ್ಷೆ ಕೌಶಲ್ಯ, ತಾಲೂಕು ಆರೋಗ್ಯಾಧಿಕಾರಿ ಡಾ.ಅರವಿಂದ್, ಮುಖ್ಯ ವೈದ್ಯಾಧಿಕಾರಿ ಡಾ.ಜಯಂತ್, ಸುಬ್ರಮಣ್ಯ, ಎಚ್.ಎಂ. ರಾಮಕೃಷ್ಣ, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ರಾಮಕೃಷ್ಣೇಗೌಡ, ಎಂ.ಬಿ.ಶ್ರೀನಿವಾಸ್, ಪುರಸಭೆ ಸದಸ್ಯರಾದ ಗಿರೀಶ್, ಬಾಬು, ಸೋಮಶೇಖರ್, ಶ್ರೀನಿವಾಸ್, ಮಹದೇವು ಸೇರಿದಂತೆ ಹಲವರಿದ್ದರು.