ರಂಗಭೂಮಿಗೆ ವಾಣಿಜ್ಯ ಮೌಲ್ಯ ದೊರಕುವಂತೆ ಮಾಡಿ

ಮೈಸೂರು: ಸಿನಿಮಾ ಹಾಗೂ ಧಾರಾವಾಹಿಗಳಿಂದ ಬೇಸತ್ತಿರುವ ಜನರು ರಂಗಭೂಮಿಯತ್ತ ಗಮನ ಕೇಂದ್ರೀಕರಿಸುತ್ತಿ ದ್ದಾರೆ. ಈ ಹಿನ್ನೆಲೆಯಲ್ಲಿ ರಂಗಭೂಮಿಗೆ ವಾಣಿಜ್ಯ ಮೌಲ್ಯ ದೊರಕಿಸುವ ಅಗತ್ಯವಿದೆ ಎಂದು ಚಿತ್ರ ನಟ ರಮೇಶ್ ಭಟ್ ಅಭಿಪ್ರಾಯಪಟ್ಟಿದ್ದಾರೆ.

ಮೈಸೂರಿನ ರಂಗಾಯಣದಲ್ಲಿ ಇಂದು (ಜ.12) ಆರಂಭವಾದ ಬಹುರೂಪಿ ರಾಷ್ಟ್ರೀಯ ನಾಟ ಕೋತ್ಸವ ಹಿನ್ನೆಲೆಯಲ್ಲಿ ಆಯೋಜಿಸಿರುವ `ಬಹು ರೂಪಿ ಚಲನ ಚಿತ್ರೋತ್ಸವ’ವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಿನಿಮಾ ಕ್ಷೇತ್ರ ಭಾವ ನಾತ್ಮಕತೆಯನ್ನು ಕಳೆದುಕೊಂಡಿದೆ. ನಟರು ಸಿನಿಮಾದಲ್ಲಿ ರೇಟು (ಸಂಭಾವನೆ) ಮತ್ತು ಡೇಟು (ದಿನಾಂಕ) ಮಾತ್ರ ನೋಡುವಂತಾಗಿದೆ. ಭಾವನಾತ್ಮಕತೆಯಿಂದ ಅಭಿನಯ ಮಾಡು ವುದಕ್ಕೆ ನಟರು ಸಿದ್ಧತೆ ಮಾಡಿಕೊಂಡಿದ್ದರೂ ಲೈಟ್ ಆನ್ ಮಾಡುವುದಕ್ಕೆ, ಆಕ್ಷನ್ ಹೇಳುವುದಕ್ಕೆ ತಟ್ಟುವ ಚಪ್ಪಾಳೆ ನಮ್ಮ ಏಕಾಗ್ರತೆಯನ್ನು ಹಾಳು ಮಾಡುತ್ತದೆ. ಇದರಿಂದ ಸಿನಿಮಾದಲ್ಲಿ ನಟಿಸು ವಾಗ ಆ ಕ್ಷಣಕ್ಕಷ್ಟೇ ವ್ಯಕ್ತವಾಗುವ ಅಭಿನಯ ಮಾಡುತ್ತೇವೆ. ಅದು ಆಕಸ್ಮಿಕ (ಆಕ್ಸಿಡೆಂಟ್) ಅಭಿನಯ. ಆದರೆ ನಾಟಕದಲ್ಲಿ ನಮ್ಮ ನರ, ನಾಡಿ, ರಕ್ತ, ಮಾಂಸ, ಶಕ್ತಿಯನ್ನು ಬಿಗಿಯಾಗಿ ಹಿಡಿದಿಟ್ಟುಕೊಂಡ ಜೀವನಾನುಭವದಿಂದ ಅಭಿನಯಿಸುತ್ತೇವೆ ಎಂದು ವಿವರಿಸಿದರು.

ನಾಟಕ ರಂಗಕ್ಕೆ ಎಂದೂ ಸಾವಿಲ್ಲ. ಸಿನಿಮಾ ಕಲಾವಿದರಿಗೆ ಹೋಲಿಸಿದರೆ, ಹವ್ಯಾಸಿ ರಂಗ ಕಲಾವಿದರು ಆರ್ಥಿಕ ಮುಗ್ಗಟ್ಟು ಎದುರಿಸುತ್ತಿ ದ್ದಾರೆ. ಇದರಿಂದಾಗಿ ರಂಗ ಕ್ಷೇತ್ರವನ್ನು ವಾಣಿ ಜ್ಯೀಕರಣ ಮಾಡುವ ಅಗತ್ಯವಿದೆ. ಹವ್ಯಾಸಿ ರಂಗ ತಂಡಗಳು ನಾಟಕಗಳನ್ನು ಕಮರ್ಷಿಯಲ್ ಮಾಡಿ ಕಲಾವಿದರು ಅನುಭವಿಸುತ್ತಿರುವ ಹಣದ ಕೊರತೆಯನ್ನು ನೀಗಿಸಿಕೊಳ್ಳಬೇಕು. ಸಿನಿಮಾ, ಧಾರಾವಾಹಿಗಳಿಂದ ಬೇಸತ್ತಿರುವ ಜನತೆ ನಾಟಕಗಳತ್ತ ಮುಖ ಮಾಡುತ್ತಿದ್ದಾರೆ. 100, 150 ಹಾಗೂ 500 ರೂ. ನೀಡಿ ಟಿಕೆಟ್ ಖರೀ ದಿಸಿ ಸಂತೋಷ ದಿಂದ ನಾಟಕ ನೋಡುವ ಜನರಿದ್ದಾರೆ ಎಂದು ಹೇಳಿದ ಅವರು, ನನಗೆ ರಂಗ ಭೂಮಿ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿ ಕೊಳ್ಳಬೇಕೆಂಬ ಬಯಕೆಯಿದೆ. ಆದರೆ ಸಿನಿಮಾ ಕ್ಷೇತ್ರದಲ್ಲಿ ಪೆÇೀಷಕ ಪಾತ್ರ ಮಾಡುವವರ ಸಂಖ್ಯೆ ಕಡಿಮೆಯಿದೆ. ಇದರಿಂದ ಅಪ್ಪ, ಚಿಕ್ಕಪ್ಪ, ತಾತನ ಪಾತ್ರ ಮಾಡುವುದಕ್ಕೆ ನನಗೆ ಅವಕಾಶ ಸಿಕ್ಕು ತ್ತಿದೆ. ಸಿನಿಮಾದಿಂದ ಬಿಡುಗಡೆಗೊಂಡು ರಂಗ ಭೂಮಿಗೆ ಬರಬೇಕೆಂಬ ತವಕ ನನ್ನಲ್ಲಿದೆ ಎಂದರು. ರಂಗಾಯಣ ಕಟ್ಟಿದ್ದ ಬಿ.ವಿ.ಕಾರಂತರು ನನಗೆ ಗುರುಗಳಾಗಿದ್ದರು. 8 ವರ್ಷ ಅವರೊಂದಿಗೆ ಒಡನಾಟ ಹೊಂದಿದ್ದೆ. ಅನೇಕ ಬಾರಿ ಜಗಳ ವಾಡಿದ್ದೇನೆ. ಕಾರಂತರು ಹೇಳಿಕೊಟ್ಟ ಪಾಠ ನನಗೆ ಬದುಕುವುದನ್ನು ಕಲಿಸಿದೆ. ಈ ಹಿಂದೆ ನಾನು ನಾಟಕ ಮುಗಿದ ಕೂಡಲೇ ಎಲ್ಲರಿ ಗಿಂತ ಮೊದಲು ಮೇಕಪ್ ತೆಗೆದು ಹೊರಗೆ ಬಂದು ನಿಲ್ಲುತ್ತಿದ್ದೆ. ಚೆನ್ನಾಗಿ ಅಭಿನಯಿಸಿದ ಎಂದು ಗುರುತಿಸಿ ಯಾರಾದರೂ ಪ್ರಶಂಸಿಸಲಿ ಎಂಬ ಕಾರಣದಿಂದ ಮೇಕಪ್ ತೆಗೆಯುತ್ತಿದ್ದೆ. ಇದನ್ನು ಗಮನಿಸಿದ ಕಾರಂತ ಗುರುಗಳು `ಆ್ಯಕ್ಷನ್ ಇರಲಿ, ರಿಯಾಕ್ಷನ್ ಬೇಡ’ ಎಂದು ಸಲಹೆ ನೀಡಿದ್ದರು ಎಂದು ಸ್ಮರಿಸಿದ ರಮೇಶ್ ಭಟ್, ಗೀಳು ಇರು ವವನಿಗೆ ಗೋಳು ಇರುವುದಿಲ್ಲ. ನಮ್ಮ ಜೀವನ ದಲ್ಲಿ ಸಾಕಷ್ಟು ಗೋಳು ಬಂದರೂ ಗೀಳು ಇದ್ದುದ್ದ ರಿಂದ ಅಷ್ಟೇನೂ ಕಷ್ಟವಾಗಲಿಲ್ಲ ಎಂದರು.

ಇದೇ ವೇಳೆ ಚಲನಚಿತ್ರ ವಿಮರ್ಶಕ ಎನ್. ವಿದ್ಯಾಶಂಕರ್ ಮಾತನಾಡಿ, ಈ ಬಾರಿಯ ಬಹು ರೂಪಿ ಚಲನಚಿತ್ರೋತ್ಸವದಲ್ಲಿ ಆಯ್ಕೆ ಮಾಡಿ ರುವ ಎಲ್ಲಾ ಚಲನಚಿತ್ರಗಳು, ಕಿರುಚಿತ್ರ, ಸಾಕ್ಷ್ಯ ಚಿತ್ರಗಳು ಅದ್ಭುತವಾಗಿವೆ. ಲಿಂಗ ಸಮಾನತೆ ಎಂಬುದು ಕೇವಲ ಮಾತಿಗೆ ಸೀಮಿತವಾಗದೆ ಸ್ವೀಕಾರಾರ್ಹವಾಗಿರಬೇಕು. ಬಬ್ರುವಾಹನ ಚಿತ್ರದಲ್ಲಿ ಹುಣಸೂರು ಕೃಷ್ಣಮೂರ್ತಿಯವರು ಜೈಮಿನಿ ಭಾರತದಿಂದ ತೆಗೆದುಕೊಂಡ ಕಥೆ ಯಲ್ಲಿಯೇ ಬಬ್ರುವಾಹನ- ಅರ್ಜುನನ ಸಂಭಾ ಷಣೆಯಲ್ಲಿ ಪುರುಷತ್ವ' ಮತ್ತುಲಿಂಗ ಸಮಾ ನತೆ’ಯನ್ನು ಮೇಳೈಸಿದ್ದಾರೆ. ಇತ್ತೀಚೆಗೆ ಬಂದ `ನಾನು ಅವನಲ್ಲ, ಅವಳು’ ಚಿತ್ರದಲ್ಲೂ ಇದೇ ವ್ಯಕ್ತವಾಗಿದೆ. ಮಹಿಳೆಗೆ ಮೀಸಲಾತಿ ನೀಡು ವುದು, ಸಮಾನ ಅವಕಾಶ ನೀಡುವುದು ಕೇವಲ ಸಾಮಾಜಿಕ ಚಿಂತನೆಯಾಗದೆ ಪ್ರಕೃತಿದತ್ತವಾಗಿ ಸ್ವೀಕರಿಸಬೇಕು. ತೃತೀಯ ಲಿಂಗಿಗಳನ್ನೂ ಸಮಾಜ ಸ್ವೀಕರಿಸಬೇಕು ಎಂದು ಸಲಹೆ ನೀಡಿದರು.

ರಂಗಾಯಣ ನಿರ್ದೇಶಕಿ ಭಾಗೀರಥಿ ಬಾಯಿ ಕದಂ ಅಧ್ಯಕ್ಷತೆ ವಹಿಸಿದ್ದರು. ರಂಗಾ ಯಣ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿ ಕಾರ್ಜುನಸ್ವಾಮಿ, ಚಲನಚಿತ್ರೋತ್ಸ ವದ ಸಂಚಾ ಲಕ ಕೆ.ಮನು ಉಪಸ್ಥಿತರಿದ್ದರು.