ದೇಗುಲ ಆವರಣದಲ್ಲಿ ಗಂಡು ಮಗು ಪತ್ತೆ

ಚನ್ನರಾಯಪಟ್ಟಣ: ಹಿರೀಸಾವೆ ಗ್ರಾಮದ ಶ್ರೀಕಾಳಿ ಕಾಂಬ ಕಮ್ಮಟೇಶ್ವರ ದೇಗುಲ ಆವರಣದಲ್ಲಿ ಅಂದಾಜು 15 ದಿನಗಳ ಹಿಂದಷ್ಟೇ ಜನಿಸಿರುವ ಗಂಡು ಮಗುವೊಂದು ಸಿಕ್ಕಿದೆ.

ಮಗು ಅಳುವ ಶಬ್ದ ಕೇಳಿಬಂದ ಹಿನ್ನೆಲೆಯಲ್ಲಿ ಸ್ಥಳೀಯ ರಾದ ಭಾಗ್ಯಮ್ಮ ಎಂಬುವರು ದೇಗುಲ ಆವರಣಕ್ಕೆ ತೆರಳಿ, ಜಗುಲಿಯ ಮೇಲೆ ಕೈಚೀಲದಲ್ಲಿ ಮಗು ಇರುವುದನ್ನು ನೋಡಿ ತಕ್ಷಣ ಅಕ್ಕಪಕ್ಕದವರನ್ನು ಕೂಗಿದ್ದಾರೆ. ಸ್ಥಳೀಯರೆಲ್ಲ ಸೇರಿ ಬಾಟಲ್ ಮೂಲಕ ಹಾಲುಣಿಸಿ ಮಗುವಿನ ಹಾರೈಕೆ ಮಾಡಿದ್ದು, ಸ್ವಲ್ಪ ಅಸ್ವಸ್ಥಗೊಂಡಂತೆ ಕಂಡಿದ್ದರಿಂದ ತಕ್ಷಣ ಹಿರೀಸಾವೆ ಸಮು ದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದಾರೆ. ಮಗುವಿಗೆ ಅಗತ್ಯ ಚಿಕಿತ್ಸೆ ನೀಡಲಾಗಿದ್ದು ಆರೋಗ್ಯವಾಗಿದೆ.

ಪೆÇಲೀಸರು ಸ್ಥಳೀಯರಿಂದ ಮಾಹಿತಿ ಪಡೆದು, ವೈದ್ಯರ ಬಳಿ ಮಗುವಿನ ಆರೋಗ್ಯ ವಿಚಾರಿಸಿದರು. ಬಳಿಕ, ಹಾಸನದ ತವರು ಚಾರಿಟಬಲ್ ಟ್ರಸ್ಟ್ ಮುಖ್ಯಸ್ಥ ಡಾ.ಪಾಲಾಕ್ಷ ಅವರು ಮಗುವನ್ನು ತಮ್ಮ ಸಂಸ್ಥೆಗೆ ಕೊಂಡೊಯ್ದು ಆರೈಕೆಯಲ್ಲಿ ತೊಡಗಿದ್ದಾರೆ.

ಇನ್ನೆರಡು ದಿನ ಪಾಲಕರಿಗಾಗಿ ಕಾಯಲಿದ್ದು, ಬಳಿಕ ತವರು ಚಾರಿಟಬಲ್ ಟ್ರಸ್ಟ್ ಕಾನೂನು ಬದ್ಧವಾಗಿ ನೋಂದಣಿ ಮಾಡಿ ಕೊಂಡು ಮಗುವಿನ ಪಾಲನೆ ಮುಂದುವರಿಸಲಿದೆ ಎಂದು ಪೆÇಲೀಸರು ತಿಳಿಸಿದ್ದಾರೆ. ಮಂಗಳವಾರ ಸಂಜೆ ವ್ಯಕ್ತಿಯೊಬ್ಬ ಇಬ್ಬರು ಮಹಿಳೆಯರ ಜೊತೆ ಕೈಚೀಲ ಹಿಡಿದು ದೇಗುಲದ ಬಳಿ ತಿರುಗಾಡಿರುವುದನ್ನು ಸ್ಥಳೀಯರು ನೋಡಿದ್ದಾರೆ. ಆದರೆ, ಯಾರೋ ನೆಂಟರ ಮನೆಗೆ ತೆರಳುತ್ತಿರಬಹುದು ಅಂದುಕೊಂಡು ಸುಮ್ಮನಾಗಿದ್ದಾರೆ.

ಕೈಚೀಲದಲ್ಲಿ ಸ್ವಲ್ಪ ಬಟ್ಟೆಗಳನ್ನು ಜೋಡಿಸಿ, ಅದರ ನಡುವೆ ಮಗುವನ್ನು ಮಲಗಿಸಿ ದೇಗುಲದ ಜಗುಲಿ ಮೇಲೆ ಬಿಟ್ಟು ಹೋಗಿರುವುದಾಗಿ ತಿಳಿದು ಬಂದಿದೆ. ಹಿರೀಸಾವೆ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.