ಜು.26ರಿಂದ ಆ.6ರವರೆಗೆ ನಡೆದ ಮ್ಯಾನ್ಯುಯಲ್ ಸ್ಕ್ಯಾವೆಂಜರ್ ಸಮೀಕ್ಷೆ

Mysuru City Corporation

ಮೈಸೂರು, ಆ. 22(ಆರ್‍ಕೆ)- ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯ 65 ವಾರ್ಡು ಗಳಲ್ಲಿ ಒಟ್ಟು 562 ಮಂದಿ ಮ್ಯಾನ್ಯು ಯಲ್ ಸ್ಕ್ಯಾವೆಂಜರ್‍ಗಳಿರುವುದಾಗಿ ಮೇಲ್ನೋಟಕ್ಕೆ ಕಂಡು ಬಂದಿದೆ.

ಮೈಸೂರು ಜಿಲ್ಲಾ ನಗರಾಭಿವೃದ್ಧಿ ಕೋಶ (District urban Development cell), ರಾಷ್ಟ್ರೀಯ ಸಫಾಯಿ ಕರ್ಮ ಚಾರಿಗಳ ಹಣಕಾಸು ಮತ್ತು ಅಭಿವೃದ್ಧಿ ಸಂಸ್ಥೆ ಸಹಯೋಗದಲ್ಲಿ ಮೈಸೂರು ಮಹಾನಗರ ಪಾಲಿಕೆಯ ಆರೋಗ್ಯ ಘಟಕದ ವತಿಯಿಂದ ಜುಲೈ 26ರಿಂದ ಆಗಸ್ಟ್ 6ರವರೆಗೆ ಮೈಸೂರು ನಗರದ ಎಲ್ಲಾ 9 ಪಾಲಿಕೆ ವಲಯ ಕಚೇರಿಗಳಲ್ಲಿ ಕೈಯ್ಯಿಂದ ಮಲ ಬಾಚುವವರ ಹಾಗೂ ತಲೆ ಮೇಲೆ ಮಲ ಹೊರುವವರ ಸಮೀಕ್ಷೆ ಗಾಗಿ ಅರ್ಜಿಗಳನ್ನು ಸ್ವೀಕರಿಸಲಾಯಿತು.

ಒಟ್ಟು 579 ಮಂದಿ ತಾವು ಮ್ಯಾನ್ಯು ಯಲ್ ಸ್ಕ್ಯಾವೆಂಜರ್‍ಗಳೆಂದು ಮಾಹಿತಿ ನೀಡಿ ಅರ್ಜಿ ಹಿಡಿದು ಬಂದರಾದರೂ, 562 ಮಂದಿಯ ಅರ್ಜಿಯನ್ನು ಸ್ವೀಕರಿ ಸಲಾಯಿತು. 17 ಮಂದಿಯ ಅರ್ಜಿ ಯನ್ನು ತಿರಸ್ಕರಿಸಲಾಯಿತು ಎಂದು ಪಾಲಿಕೆಯ ಆರೋಗ್ಯ ಶಾಖೆ ತಿಳಿಸಿದೆ.

ಒಣ ಮಲ ಸ್ವಚ್ಛತೆ, ಶೌಚಾಲಯ ದಿಂದ ಚರಂಡಿಗೆ ಬಿಟ್ಟಿರುವ ಮಲವನ್ನು ಬರಿ ಕೈನಿಂದ ಸ್ವಚ್ಛಗೊಳಿಸುವುದು, ಯಂತ್ರ ಉಪಯೋಗಿಸದೆ ಸಿಂಗಲ್ ಪಿಟ್‍ನಿಂದ ಮಲ ತೆಗೆಯುವವರನ್ನು ಮ್ಯಾನ್ಯುಯಲ್ ಸ್ಕ್ಯಾವೆಂಜರ್‍ಗಳೆಂದು ಪರಿಗಣಿಸಲಾಗುವುದು. ಅಂತಹವರನ್ನು ಗುರ್ತಿಸುವ ಸಲುವಾಗಿ ನಡೆದ ಶಿಬಿರಗ ಳಲ್ಲಿ ಹಾಜರಾಗಿ ತಮ್ಮ ಭಾವಚಿತ್ರ, ಬ್ಯಾಂಕ್ ಪಾಸ್‍ಬುಕ್, ಆಧಾರ್ ಕಾರ್ಡ್, ಮತ ದಾರರ ಗುರುತಿನ ಚೀಟಿ, ಮ್ಯಾನ್ಯುಯಲ್ ಸ್ಕ್ಯಾವೆಂಜಿಂಗ್ ವೃತ್ತಿಯಲ್ಲಿ ತೊಡಗಿರುವ ಬಗ್ಗೆ ಪ್ರಮಾಣ ಪತ್ರದ ಜೆರಾಕ್ಸ್ ಪ್ರತಿ ಯೊಂದಿಗೆ 579 ಮಂದಿ ಅರ್ಜಿ ಸಲ್ಲಿಸಿದ್ದರು.

ಆ ಪೈಕಿ ಸರಿಯಾದ ದಾಖಲೆಗಳಿಲ್ಲದ ಕಾರಣ 17 ಅರ್ಜಿಗಳನ್ನು ತಿರಸ್ಕರಿಸಲಾ ಗಿದ್ದು, ಉಳಿದ 562 ಅನ್ನು ಪಾಲಿಕೆಯು ಸ್ವೀಕರಿಸಿದೆ. ವಲಯ ಕಚೇರಿ-1ರಲ್ಲಿ 30, 2ರಲ್ಲಿ 84, 3ರಲ್ಲಿ 91, 4 ರಲ್ಲಿ 57, 5ರಲ್ಲಿ 81, 6ರಲ್ಲಿ 64, 7ರಲ್ಲಿ 57, 8ರಲ್ಲಿ 32 ಹಾಗೂ ವಲಯ ಕಛೇರಿ 9ರಲ್ಲಿ 66 ಮ್ಯಾನ್ಯುಯಲ್ ಸ್ಕ್ಯಾವೆಂಜರ್ ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಸ್ವೀಕೃತಗೊಂಡಿರುವ ಎಲ್ಲಾ ಅರ್ಜಿಗಳನ್ನು ಕ್ರೊಢೀಕರಿಸಿ ಸಮಗ್ರ ಮಾಹಿತಿಯೊಂದಿಗೆ ಜಿಲ್ಲಾಧಿಕಾರಿಗಳಿಗೆ ಕಳುಹಿಸಲಾಗಿದ್ದು, ಅವುಗಳ ನೈಜತೆ ತಿಳಿ ಯಲು ಮತ್ತೊಂದು ಪ್ರಾಯೋಗಿಕ ಸಮೀಕ್ಷೆ ನಡೆಸಲು ಜಿಲ್ಲಾಧಿಕಾರಿಗಳು ಅನುಮತಿ ನೀಡಬೇಕಾಗಿದೆ. ನಂತರ ನಿಯೋಜಿತ ಅಧಿಕಾರಿಗಳು ಅವರು ವಾಸಿಸುತ್ತಿರುವ ಸ್ಥಳಕ್ಕೆ ಖುದ್ದು ಹಾಜರಾಗಿ ನೆರೆಹೊರೆಯವರ ಹೇಳಿಕೆ ದಾಖಲಿಸಿಕೊಂಡು ಮ್ಯಾನ್ಯುಯಲ್ ಸ್ಕ್ಯಾವೆಂಜಿಂಗ್ ಕೆಲಸ ಮಾಡುತ್ತಿದ್ದರೆಂಬು ದಕ್ಕೆ ಪೂರಕ ಸಾಕ್ಷ್ಯಗಳನ್ನು ಕಲೆ ಹಾಕಲು ಮೈಸೂರು ಮಹಾನಗರ ಪಾಲಿಕೆಯು ಸಿದ್ಧತೆ ನಡೆಸುತ್ತಿದೆ.