* ಮನೆ ಬೀಗ ಮುರಿದು 415 ಗ್ರಾಂ ಚಿನ್ನಾಭರಣ ಕದ್ದೊಯ್ದರು
* ಜಯನಗರ ಬಡಾವಣೆಯ ಶಿಕ್ಷಕ ದಂಪತಿ ಮನೆಯಲ್ಲಿ ಘಟನೆ
* ಗುರುವಾರ ಬೆಳಿಗ್ಗೆ 9.30ರ ವೇಳೆ ಕೈಚಳಕ ತೋರಿದ ಕಳ್ಳರು
* ಪೊಲೀಸರು ಹಲವು ಬಾರಿ ಜಾಗೃತಿ ಮೂಡಿಸಿದ್ದೂ ವ್ಯರ್ಥ
* ಬ್ಯಾಂಕ್ ಲಾಕರ್ ಬಿಟ್ಟು ಮನೆಯಲ್ಲೇ ಚಿನ್ನವಿಟ್ಟು ಕಳೆದುಕೊಂಡರು
ಹಾಸನ, ಜು.5- ಹಾಸನ ನಗರದಲ್ಲಿ ಹಾಡಹಗಲೇ ಭಾರೀ ಮನೆಗಳವು ನಡೆದಿದ್ದು, ಜಯನಗರ ಬಡಾವಣೆ ನಿವಾಸಿಗಳು ಬೆಚ್ಚಿಬೀಳುವಂತಾಗಿದೆ.
ಬೀಗ ಮುರಿದು ಒಳನುಗ್ಗಿರುವ ಕಳ್ಳರಿಗೆ ಅಪಾರ ಪ್ರಮಾಣದ ಚಿನ್ನಾಭರಣದ ದೊಡ್ಡ ಗಂಟೇ ಸಿಕ್ಕಿದೆ. ಕೆಲವೇ ನಿಮಿಷ ಗಳಲ್ಲಿ ಕೃತ್ಯ ಮುಗಿಸಿರುವ ಕಳ್ಳರು, ಅಂದಾಜು ಹದಿಮೂರು ಕಾಲು ಲಕ್ಷ ರೂ. ಬೆಲೆಯ ಅಪಾರ ಪ್ರಮಾಣದ ಚಿನ್ನಾಭರಣಗಳನ್ನು ಸಲೀಸಾಗಿ ಹೊತ್ತೊಯ್ದಿದ್ದಾರೆ!
ಹಾಸನದ ಜಯನಗರದಲ್ಲಿ ಜು.4ರ ಗುರುವಾರ ಬೆಳಿಗ್ಗೆ 9.30 ಗಂಟೆ ಸಮಯ ದಲ್ಲಿ ಮನೆಗಳವು ನಡೆದಿದೆ.
ಜಯನಗರದ `ಸಂಭ್ರಮ’ ನಿಲಯದಲ್ಲಿ ಸಿ.ಕೆ.ಪ್ರಶಾಂತ್ ಕುಟುಂಬ ವಾಸವಾಗಿದೆ. ಈಗ ಕಳ್ಳರ ಕಾಟದಿಂದಾಗಿ ಮನೆಯಲ್ಲಿ ಸಂಭ್ರಮವೇ ಇಲ್ಲದಂತಾಗಿದೆ.
ಪ್ರಶಾಂತ್ ಮತ್ತು ಪತ್ನಿ ಇಬ್ಬರೂ ಶಿಕ್ಷಕರು. ಇಬ್ಬರೂ ಎಂದಿನಂತೆ ಮನೆಗೆ ಬೀಗ ಹಾಕಿ ಕೊಂಡು ಕೆಲಸಕ್ಕೆ ಹೋಗಿದ್ದರು. ಮನೆಗೆ ಬೀಗ ಬಿದ್ದಿರುವುದನ್ನು ಕಂಡ ಕಳ್ಳರಿಗೆ ಮನೆಯಲ್ಲಿ ಯಾರೂ ಇಲ್ಲ ಎಂಬುದು ಖಚಿತವಾಗಿದೆ. ಕಬ್ಬಿಣದ ಸಲಾಕೆಯಿಂದ ಮನೆಯ ಬೀಗ ಮುರಿದು ಒಳಪ್ರವೇಶಿಸಿ ರುವ ಕಳ್ಳರು, ರೂಮಿನಲ್ಲಿ ಗಾಡ್ರೇಜ್ ಬೀರುವಿನಲ್ಲಿದ್ದ ಒಟ್ಟು 415 ಗ್ರಾಮ್‍ಗಳಷ್ಟು ತೂಕದ, ಈಗಿನ ಮಾರುಕಟ್ಟೆ ದರದಲ್ಲಿ 13.28 ಲಕ್ಷ ರೂ. ಬೆಲೆ ಬಾಳುವ ಹಲ ವಾರು ಚಿನ್ನಾಭರಣಗಳನ್ನು ಸುಲಭವಾಗಿ ಹೊತ್ತೊಯಿದ್ದಾರೆ. ಮನೆಯಲ್ಲಿ ಭಾರೀ ಕಳವು ನಡೆದಿರುವ ಬಗ್ಗೆ ಶಿಕ್ಷಕ ಸಿ.ಕೆ. ಪ್ರಶಾಂತ್ ಅವರು ನಗರದ ಪೆನ್‍ಷನ್ ಮೊಹಲ್ಲಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿ ರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.
* ಕಳವಾದ ಆಭರಣಗಳು
* 440 ಗ್ರಾಂನ 2 ಜೊತೆ ಚಿನ್ನದ ಬಳೆಗಳು
* 420 ಗ್ರಾಂ ತೂಕದ 1 ಚಿನ್ನದ ಕಡಗ
* 420 ಗ್ರಾಂ ತೂಗುವ ಚಿನ್ನದ ಬ್ರೇಸ್‍ಲೆಟ್
* 4ಮಹಿಳೆಯರು ಧರಿಸುವ 5 ಗ್ರಾಂನ ಬ್ರೇಸ್‍ಲೆಟ್
* 415 ಗ್ರಾಂ ತೂಕದ ಒಂದು ಚಿನ್ನದ ಸರ
* 425 ಗ್ರಾಂ ತೂಕದ 1 ಚಿನ್ನದ ಸರ
* 4ಒಟ್ಟು 29 ಗ್ರಾಂಗಳ 7 ಚಿನ್ನದುಂಗುರ
* 450 ಗ್ರಾಂ ತೂಕದ ಚಿನ್ನದ ಕರಿಮಣಿಸರ
* 480 ಗ್ರಾಂ ತೂಕದ 3 ಎಳೆ ಚಿನ್ನದ ಸರ
* 430 ಗ್ರಾಂ ತೂಕದ ಚಿನ್ನದ ನೆಕ್ಲೆಸ್
* 440 ಗ್ರಾಂಗಳ ಚಿನ್ನದ ಗುಂಡಿನ ಸರ
* 461 ಗ್ರಾಂ ತೂಕದ 8 ಜೊತೆ ಚಿನ್ನದ ಓಲೆಗಳು