ಸದ್ದು ಗದ್ದಲವಿಲ್ಲದೇ ವಧು-ವರರು ಸಪ್ತಪದಿ ತುಳಿದರು!

ಮೈಸೂರು: ಮದುವೆ ಎಂದರೆ ಸಾಕು, ಸಂಭ್ರಮ-ಸಡಗರ ಕಣ್ಮುಂದೆ ತೆರೆದುಕೊಳ್ಳುತ್ತದೆ. ಆದರೆ ಆ ವಿವಾಹ ಮಹೋತ್ಸವದಲ್ಲಿ ಇರಬೇಕಾದಷ್ಟು ಸಂಭ್ರಮವೇ ಇರಲಿಲ್ಲ. ಸದ್ದು ಗದ್ದಲವಿಲ್ಲದೇ ವಧು-ವರರು ಸಪ್ತ ಪದಿ ತುಳಿದರು. ಹೌದು, ಪೊಲೀಸ್ ಬಿಗಿ ಬಂದೋಬಸ್ತ್ ಹಿನ್ನೆಲೆಯಲ್ಲಿ ಆ ವಿವಾಹ ಮಹೋತ್ಸವದಲ್ಲಿ ಮದುವೆ ಸಂಭ್ರ ಮವೇ ಮರೆಯಾಗಿತ್ತು! ಅರೇ ಮದುವೆ ಗೇಕೆ? ಅಷ್ಟು ಬಿಗಿ ಪೊಲೀಸ್ ಬಂದೋ ಬಸ್ತ್ ಎಂದು ಅಚ್ಚರಿಗೊಳ್ಳಬೇಡಿ. ಇದು ಮತ ಎಣಿಕೆಯ ಎಫೆಕ್ಟ್!

ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಮತ ಎಣಿಕೆ ಕೇಂದ್ರಕ್ಕೆ ಕಲ್ಪಿಸಿದ್ದ ಪೊಲೀಸ್ ಬಂದೋಬಸ್ತ್ ಈ ಮದು ವೆಗೂ ಸಾಕಷ್ಟು ಅಡೆತಡೆ ಉಂಟು ಮಾಡಿತು. ಈ ಎಲ್ಲಾ ಅಡಚಣೆಗಳ ಇದ್ದರೂ ಹೇಗೋ ಬಂದ ಒಂದಿಷ್ಟು ಅತಿಥಿ ಹಾಗೂ ಸಂಬಂಧಿಕರ ನಡುವೆ ವಿವಾಹ ಮಹೋತ್ಸವವಂತೂ ನೆರವೇರಿತು.

ಇಷ್ಟಕ್ಕೆಲ್ಲಾ ಕಾರಣ ಎಣಿಕೆ ಕೇಂದ್ರ ವಾದ ಮೈಸೂರಿನ ವಾಲ್ಮೀಕಿ ರಸ್ತೆಯ ಮಹಾರಾಣಿ ವಾಣಿಜ್ಯ ಮತ್ತು ನಿರ್ವ ಹಣಾ ಮಹಿಳಾ ಕಾಲೇಜು ಸನಿಹದಲ್ಲೇ ಈ ಕಲ್ಯಾಣ ಮಂಟಪ ಇದ್ದದ್ದು. ವಾಲ್ಮೀಕಿ ರಸ್ತೆಯ ಶ್ರೀಮತಿ ಲೀಲ ಶ್ರೀ ಹೆಚ್. ಚನ್ನಯ್ಯ ಕಲ್ಯಾಣ ಮಂಟಪದಲ್ಲಿ ಗುರು ವಾರ ನಡೆದ ಮೈಸೂರಿನ ಎಸ್.ನಾಗಶ್ರೀ ಮತ್ತು ಬೆಂಗಳೂರಿನ ಎಂ.ಡಿ.ಅರುಣ್ ಮದುವೆಯ ಕಥೆ ಇದು.

ಎಣಿಕೆ ಹಿನ್ನೆಲೆಯಲ್ಲಿ ಮಹಾರಾಣಿ ವಾಣಿಜ್ಯ ಮತ್ತು ನಿರ್ವಹಣಾ ಮಹಿಳಾ ಕಾಲೇಜು ಸುತ್ತಲೂ ಬಿಗಿ ಪೊಲೀಸ್ ಬಂದೋ ಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಹೀಗಾಗಿ ಕಲ್ಯಾಣ ಮಂಟಪದ ಮುಖ್ಯ ದ್ವಾರ ವಿರುವ ವಾಲ್ಮೀಕಿ ರಸ್ತೆಯಲ್ಲಿ ವಾಹನ ಸಂಚಾರ ನಿಷೇಧ ಮಾಡಲಾಗಿತ್ತು. ಅಲ್ಲದೆ, ಕಲ್ಯಾಣ ಮಂಟಪದ ಎಡಭಾಗದ ಆದಿ ಪಂಪ ರಸ್ತೆಯಲ್ಲೂ ಪಡುವಾರಹಳ್ಳಿ ಮಲೆ ಮಹದೇಶ್ವರ ದೇವಸ್ಥಾನದ ದ್ವಾರದವ ರೆಗೂ ವಾಹನ ಸಂಚಾರಕ್ಕೆ ನಿಷೇಧ ಹೇರ ಲಾಗಿತ್ತು. ಹೀಗಾಗಿ ಸಹಜವಾಗಿಯೇ ಕಲ್ಯಾಣ ಮಂಟಪದ ಆವರಣದಲ್ಲಿ ಮದುವೆ ಸಂಭ್ರಮ ಬಹುತೇಕ ಮರೆಯಾಗಿತ್ತು. ಲಕ್ಷಾಂ ತರ ರೂಪಾಯಿ ಹಣ ವ್ಯಯಿಸಿ ಏರ್ಪಡಿ ಸಿದ್ದ ವಿವಾಹ ಮಹೋತ್ಸವ ಸಂಭ್ರಮ-ಸಡಗರವಿಲ್ಲದೆ, ಭಣಗುಡುವಂತಾಗಿತ್ತು. ವಾಲ್ಮೀಕಿ ರಸ್ತೆಯಲ್ಲಿರುವ ಕಲ್ಯಾಣ ಮಂಟ ಪದ ಮುಖ್ಯ ದ್ವಾರಕ್ಕೆ ಬೀಗ ಜಡಿಸಲಾ ಗಿತ್ತು. ಕಲ್ಯಾಣ ಮಂಟಪದ ಎಡಭಾಗ ದಲ್ಲಿನ ಗೇಟ್‍ನಿಂದ ಮಾತ್ರವೇ ಓಡಾ ಡಲು ಅವಕಾಶ ನೀಡಲಾಗಿತ್ತು. ಹುಣ ಸೂರು ರಸ್ತೆ ಮೂಲಕ ಕಲ್ಯಾಣ ಮಂಟ ಪಕ್ಕೆ ತೆರಳಲು ಬಂದಿದ್ದ ಅನೇಕರು ಪೊಲೀ ಸರು ಹಾಕಿದ್ದ ಬ್ಯಾರಿಕೇಡ್ ನೋಡಿ ಯಾವ ರಸ್ತೆಯಲ್ಲಿ ಹೋಗುವುದೆಂದು ಗೊಂದಲಕ್ಕೆ ಒಳಗಾದರು. ಸುತ್ತಿ ಬಳಸಿ ಹೋಗಲು ವಾಹನ ಗಳಿಗೆ ಪ್ರವೇಶ ನಿಷೇಧವಿದ್ದ ಹಿನ್ನೆಲೆಯಲ್ಲಿ ವಿವಾಹ ಮಹೋತ್ಸವಕ್ಕೆ ಬಂದಿದ್ದ ಹಲ ವರು ಕಲ್ಯಾಣ ಮಂಟಪ ತಲುಪಲು ಹೆಣಗಾಡಬೇಕಾಯಿತು.

ವಧುವಿನ ಅಕ್ಕ ಶ್ರೀವಲ್ಲಿ ಮಾತನಾಡಿ, ವಾಹನಗಳನ್ನು ಕಲ್ಯಾಣ ಮಂಟಪದ ರಸ್ತೆಯಲ್ಲಿ ಸಂಚರಿಸಲು ಅವಕಾಶವನ್ನೇ ನೀಡಿಲ್ಲ. ಯಾವುದೇ ತೊಂದರೆ ಇಲ್ಲ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದರು. ಆದರೆ ಸಾಕಷ್ಟು ತೊಂದರೆಯಂತೂ ಆಗಿದೆ. ನಮ್ಮ ಅಜ್ಜಿಯವರಿಗೆ ಹೆಚ್ಚು ದೂರ ನಡೆ ಯಲು ಆಗುವುದಿಲ್ಲ. ಅವರನ್ನು ಕರೆ ತರಲು ಕೂಡ ಪೊಲೀಸರು ನಮ್ಮ ವಾಹನ ಬಿಟ್ಟಿಲ್ಲ. ಹೀಗಾಗಿ ಅವರನ್ನು ಕಲ್ಯಾಣ ಮಂಟ ಪಕ್ಕೆ ಕರೆತರಲು ಸಾಕಷ್ಟು ಕಷ್ಟ ಸಾಧ್ಯ ವಾಯಿತು ಎಂದು ಬೇಸರ ವ್ಯಕ್ತಪಡಿಸಿದರು.