ಮಾಸ್ಟರ್ ಹಿರಣ್ಣಯ್ಯರ ಮೈಸೂರು ಕಾರ್ಯಕ್ರಮದಲ್ಲಿ ನಡೆದ ದಾಂಧಲೆ ಸಾರಸ್ವತ ಲೋಕಕ್ಕೆ ಕಪ್ಪುಚುಕ್ಕೆ

ಮೈಸೂರು: ಕಳೆದ ಐದು ವರ್ಷಗಳ ಹಿಂದೆ ಮೈಸೂ ರಿನ ಸಾರ್ವಜನಿಕ ಸಮಾರಂಭವೊಂದ ರಲ್ಲಿ ಮಾಸ್ಟರ್ ಹಿರಣ್ಣಯ್ಯನವರ ಹೇಳಿP Éಯನ್ನು ವಿರೋಧಿಸಿ ನಡೆಸಿದ ದಾಂಧಲೆ, ಮೈಸೂರಿನ ಸಾರಸ್ವತ ಲೋಕಕ್ಕೊಂದು ಕಪ್ಪುಚುಕ್ಕೆ ಎಂದು ಅಂಕಣಕಾರ ಡಾ.ಗುಬ್ಬಿಗೂಡು ರಮೇಶ್ ತೀವ್ರ ಬೇಸರ ವ್ಯಕ್ತಪಡಿಸಿದರು.

ಮೈಸೂರಿನ ಕೃಷ್ಣಮೂರ್ತಿಪುರಂನ ನಮನ ಕಲಾಮಂಟಪದಲ್ಲಿ ನಾಗನವ ಕಲಾ, ಸಾಹಿತ್ಯ ವೇದಿಕೆ ವತಿಯಿಂದ ಇಂದು ಏರ್ಪಡಿಸಿದ್ದ ಹಿರಿಯ ರಂಗಕರ್ಮಿ ಮಾಸ್ಟರ್ ಹಿರಣ್ಣಯ್ಯ ನುಡಿನಮನ ಸಮಾ ರಂಭದಲ್ಲಿ ಅವರು ಮಾತನಾಡಿದರು.

ಹಲವು ವರ್ಷಗಳಿಂದ ತಮ್ಮ ಮೊನಚು ಮಾತಿನಿಂದ ರಾಜ್ಯದ ಆಡಳಿತ ವ್ಯವಸ್ಥೆಗೆ ಚುರುಕು ಮುಟ್ಟಿಸುತ್ತಿದ್ದ ಕೀರ್ತಿ ಮಾಸ್ಟರ್ ಹಿರಣ್ಣಯ್ಯನವರಿಗೆ ಸಲ್ಲುತ್ತದೆ. ವೃತ್ತಿ ರಂಗ ಭೂಮಿಗೆ ಅವರು ಹವ್ಯಾಸಕ್ಕಾಗಿ ಬಂದ ವರಲ್ಲ. ಬದಲಾಗಿ ಈ ಕ್ಷೇತ್ರದಲ್ಲಿ ಬದುಕು ಕಟ್ಟಿಕೊಂಡವರು. ಹಿಂದಿನ ಮುಖ್ಯಮಂತ್ರಿ ಗಳಾದ ಗುಂಡೂರಾವ್, ದೇವರಾಜ ಅರಸ್, ಹೆಚ್.ಡಿ.ದೇವೇಗೌಡ ಸೇರಿದಂತೆ ಅನೇಕರೆದುರು `ಲಂಚಾವತಾರ’ ನಾಟಕ ಪ್ರದರ್ಶಿ ಸುತ್ತಿದ್ದ ನಿಷ್ಠುರ ಕಲಾವಿದ ಎಂದು ಬಣ್ಣಿಸಿದರು.

ಮಾಸ್ಟರ್ ಹಿರಣ್ಣಯ್ಯನವರು ಮೈಸೂ ರಲ್ಲಿ ಹುಟ್ಟಿ, ಬೆಳೆದು ಬೆಂಗಳೂರಿನಲ್ಲಿ ನೆಲೆ ಕಂಡುಕೊಂಡವರು. ಆದರೆ, ಅವರ ಕೊನೆಯ ಸಾರ್ವಜನಿಕ ಸಮಾರಂಭದಲ್ಲಿ ಕೆಲವರು ನಡೆದುಕೊಂಡಿದ್ದು ಮಾತ್ರ ಮೈಸೂರಿನ ಸಾರಸ್ವತ ಲೋಕಕ್ಕೊಂದು ಕಪ್ಪುಚುಕ್ಕೆ. ಈ ಘಟನೆ ನಡೆದಾಗಲೇ ಸಾಹಿತಿಗಳು, ಕಲಾವಿದರು ಹಾಗೂ ಹೋರಾಟಗಾರರು ಗಟ್ಟಿ ಧ್ವನಿಯಲ್ಲಿ ಖಂಡಿಸಿ ದ್ದರೆ, ಅವರ ಕೆಲವಾರು ಅನುಭವದ ನುಡಿಗಳನ್ನು ಮತ್ತಷ್ಟು ಕೇಳುವ ಸೌಭಾಗ್ಯ ನಮ್ಮದಾಗುತ್ತಿತ್ತು ಎಂದು ತಿಳಿಸಿದರು.

ಕಳೆದ ಐದು ವರ್ಷಗಳ ಹಿಂದೆ ನಾಗ ನವ ಕಲಾ, ಸಾಹಿತ್ಯ ವೇದಿಕೆ ವತಿಯಿಂದ ಆಯೋಜಿಸಿದ್ದ ಸಮಾರಂಭವೇ ಮಾಸ್ಟರ್ ಹಿರಣ್ಣಯ್ಯನವರ ಕೊನೆಯ ಸಾರ್ವಜನಿಕ ಕಾರ್ಯಕ್ರಮ. ಅವರು ಅವರಾಡಿದ ಮಾತಿಗೆ ಬದ್ದರಾಗಿ ತದ ನಂತರ ಯಾವುದೇ ಸಭೆ-ಸಮಾರಂಭದಲ್ಲಿ ಕಾಣಿಸಿಕೊಳ್ಳಲಿಲ್ಲ. ಆದರೆ, ಆ ಕಾರ್ಯಕ್ರಮದ ಘಟನೆ ಮಾತ್ರ ಕೊನೆ ದಿನಗಳವರೆಗೂ ಅವರನ್ನು ಕಾಡಿದ್ದು ಸುಳ್ಳಲ್ಲ ಎಂದರು.

ಬಿಜೆಪಿ ಮುಖಂಡ ಹೆಚ್.ವಿ.ರಾಜೀವ ಮಾತನಾಡಿ, ಮಾಸ್ಟರ್ ಹಿರಣ್ಣಯ್ಯನವರ ಮಾತು ಎಂದರೆ, ಅದು ಭ್ರಷ್ಟರ ಪಾಲಿನ ನರಕ ದಂತಿತ್ತು. ಅವರ ನಾಟಕಗಳನ್ನು ನೋಡಿದ ಪ್ರೇಕ್ಷಕ ಅವರ ಮಾತಿಗೆ ಮನ್ನಣೆ ನೀಡುತ್ತಿದ್ದ ಹಾಗೂ ಅವರು ಅಭಿನಯಿಸಿದ ನಾಟಕವನ್ನು ಬಹು ಕಾಲದವರೆಗೂ ನೆನಪಿನಲ್ಲಿಟ್ಟುಕೊ ಳ್ಳುತ್ತಿದ್ದರು. ಇಂತಹ ಮಹಾನ್ ಚೇತನ ಮೈಸೂರಿನವರು ಎಂಬುದೇ ನಮಗೆ ಹೆಮ್ಮೆಯ ವಿಷಯ ಎಂದರು.

ವಿಪ್ರ ಮುಖಂಡ ಕೆ.ರಘುರಾಂ ಮಾತ ನಾಡಿ, ಮಾಸ್ಟರ್ ಹಿರಣ್ಣಯ್ಯನವರು ವೃತ್ತಿ ರಂಗಭೂಮಿ ಮೂಲಕ ನಾಡಿನ ಮನೆ ಮನೆ ತಲುಪಿದ್ದರು. ತುರ್ತು ಪರಿಸ್ಥಿತಿ ಯನ್ನು ರಂಗಭೂಮಿ ಮೂಲಕ ವಿರೋಧಿಸಿದವರು. ಇವರ ಮಾತುಗಳನ್ನು ರಾಜ್ಯದ ಜನತೆ ಹಾಸ್ಯವಾಗಿ ತೆಗೆದು ಕೊಂಡರೂ ಗಂಭೀರವಾಗಿ ಚಿಂತಿಸು ತ್ತಿದ್ದರು. ಇದನ್ನು ಅರಿತ ನಮ್ಮನಾಳುವ ಸರ್ಕಾರ ಗಳು ಗಂಭೀರವಾಗಿ ಪರಿಗಣಿಸುತ್ತಿದ್ದವು ಎಂದು ಉದಾಹರಣೆ ಸಮೇತ ವಿವರಿಸಿದರು.

ಹಿರಿಯ ಸಾಹಿತಿ ಬನ್ನೂರು ಕೆ.ರಾಜು ಮಾತನಾಡಿ, ಮಾಸ್ಟರ್ ಹಿರಣ್ಣಯ್ಯನವರು ಬೌದ್ಧಿಕವಾಗಿ ನಮ್ಮೊಂದಿಗೆ ಇಲ್ಲದಿರ ಬಹುದು. ಆದರೆ, ಸಾಧನೆಗಳ ಮೂಲಕ ಪ್ರತಿಯೊಬ್ಬ ಕನ್ನಡಿಗರ ಹೃದಯದಲ್ಲಿ ಮಾಸ್ಟರ್ ಹಿರಣ್ಣಯ್ಯ ಸ್ಥಾನ ಪಡೆದಿದ್ದಾರೆ. ಅವರ ನಾಟಕದಲ್ಲಿ ಅವರಾಡುತ್ತಿದ್ದ ಪ್ರತಿ ಯೊಂದು ಸಂಭಾಷಣೆ ಸ್ವಾಭಿಮಾನಿ ನಾಗರಿ ಕರನ್ನು ಎಚ್ಚರಗೊಳಿಸುತ್ತಿದ್ದವು ಎಂದರು. ಸಭೆಯಲ್ಲಿ ಹಿರಿಯ ಪತ್ರಕರ್ತ ಹೊಮ್ಮ ಮಂಜುನಾಥ್, ಶ್ರೀ ಇಳೈ ಆಳ್ವಾರ್ ಸ್ವಾಮೀಜಿ, ನಗರ ಪಾಲಿಕೆ ಸದಸ್ಯ ಮಾ.ವಿ.ರಾಮ ಪ್ರಸಾದ್ ಸೇರಿದಂತೆ ಇತರರಿದ್ದರು.