ನಾಗರಿಕರ ಅನಾಗರಿಕತೆಯಿಂದ ಸ್ವಚ್ಛತೆ ಅಸಾಧ್ಯಪ್ರಗತಿಪರ ಚಿಂತಕ ಆರ್.ಪಿ.ವೆಂಕಟೇಶ್‍ಮೂರ್ತಿ ಅಭಿಪ್ರಾಯ

ಹಾಸನ: ಮನುಷ್ಯನ ಅನಾಗ ರಿಕ ಮನಸ್ಸು ಹೋಗಲಾಡಿಸುವವರೆಗೂ ಸ್ವಚ್ಛತೆಯಲ್ಲಿ ಯಶಸ್ಸು ಕಾಣಲು ಸಾಧ್ಯ ವಿಲ್ಲ ಎಂದು ಪ್ರಗತಿಪರ ಚಿಂತಕ ಆರ್.ಪಿ. ವೆಂಕಟೇಶ್‍ಮೂರ್ತಿ ಹೇಳಿದರು.

ನಗರದ ನಗರಸಭೆ ಕುವೆಂಪು ಸಭಾಂ ಗಣದಲ್ಲಿ ಬುಧವಾರ ಪೌರ ಕಾರ್ಮಿಕ ಕ್ಷೇಮಾಭಿವೃದ್ಧಿ ಸಂಘ, ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ), ನಗರ ಸಭೆಯಿಂದ ನಡೆದ ಡಾ.ಬಿ.ಆರ್.ಅಂಬೇ ಡ್ಕರ್, ಬಾಬು ಜಗಜೀವನ್‍ರಾಮ್ ಜಯಂತಿ ಹಾಗೂ ಕಾರ್ಮಿಕರ ದಿನಾಚರಣೆಯಲ್ಲಿ ಪೌರ ಕಾರ್ಮಿಕ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತ ಪೌರ ಕಾರ್ಮಿಕರನ್ನು ಸನ್ಮಾನಿಸಿ ಅವರು ಮಾತನಾಡಿದರು.

ಪೌರಕಾರ್ಮಿಕರು ಸಾರ್ವಜನಿಕ ಸ್ಥಳಗಳ ಸ್ವಚ್ಛತೆ ಮಾತ್ರ ಮಾಡುವುದಿಲ್ಲ. ಜೊತೆಗೆ ನಾಗರಿಕರಿಗೆ ತಿಳುವಳಿಕೆ ಕೊಡುವ ಕೆಲಸ ವನ್ನು ಮಾಡಬೇಕಾಗಿದೆ. ಸಂಕಷ್ಟದ ಕೆಲಸ ವನ್ನು ಕಾರ್ಮಿಕರು ಮಾಡುತ್ತಿರುವುದು ನಾಗರಿಕರಿಗೆ ಅರ್ಥವಾಗುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಚರಂಡಿಗಳಿಗೆ ನಮ್ಮ ನಾಗರಿಕರು ಎಲ್ಲಾ ರೀತಿಯ ಕಸವನ್ನು ಹಾಕುತ್ತಿದ್ದಾರೆ. ಅದರಲ್ಲೂ ಕಲ್ಯಾಣ ಮಂಟಪ, ಅಂಗಡಿ ಮುಗ್ಗಟ್ಟು ಸೇರಿ ದಂತೆ ಇತರೆಯವರು ಮಾಡುವ ಅನಾಗರಿಕ ಕೆಲಸಕ್ಕೆ ಪೌರ ಕಾರ್ಮಿಕರು ಶ್ರಮಪಡಬೇಕಾ ಗಿದೆ. ನಾಗರಿಕತೆ ಬೆಳೆದಂತೆ ಜನ ಅನಾಗರಿಕ ರಂತೆ ವರ್ತಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ಹಾಸನ ನಗರಸಭೆ ವ್ಯಾಪ್ತಿಯಲ್ಲಿ 5.60 ಲಕ್ಷ ಜನಸಂಖ್ಯೆ ಇದ್ದು, ಅವರು ಹಾಕುವ ಕಸವನ್ನೆಲ್ಲಾ ನಗರಸಭೆಯ ಕೇವಲ 220 ಪೌರ ಕಾರ್ಮಿಕರು ಸ್ವಚ್ಛತೆ ಮಾಡಬೇಕಾ ಗಿದೆ. ಮೊದಲು ನಾಗರಿಕರ ಅನಾಗರಿಕ ಮನಸ್ಸನ್ನು ಹೋಗಲಾಡಿಸುವವರೆಗೂ ಸ್ವಚ್ಛತೆಯಲ್ಲಿ ಯಶಸ್ಸು ಕಾಣಲು ಸಾಧ್ಯ ವಿಲ್ಲ ಎಂದು ಎಚ್ಚರಿಸಿದರು.

ಪೌರ ಕಾರ್ಮಿಕರ ಬಹು ದಿನಗಳ ಕನಸಾ ಗಿರುವ ನಿವೇಶನ ಕೊಡಿಸುವ ಕೆಲಸಕ್ಕೆ ಮೊದಲ ಆದ್ಯತೆ ನೀಡಬೇಕು. ಇದೊಂದು ಹೃದಯ ಸ್ಪರ್ಶಿ ಕಾರ್ಯಕ್ರಮದಲ್ಲಿ ನಾನು ಭಾಗವಹಿಸಿರುವುದು ಸಂತೋಷ ತಂದಿದೆ ಎಂದು ಹಾರೈಸಿದರು.

ಪೌರ ಕಾರ್ಮಿಕ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ನಾಗರಾಜು ಹೆತ್ತೂರು ಮಾತನಾಡಿ, ದೇಶದಲ್ಲಿ ಮೊದಲ ಗೌರವ ಕೊಡುವುದು ಸೈನಿಕರಿಗೆ ಮತ್ತು ರೈತರಿಗೆ ಆಗಿತ್ತು. ಇದರ ಜೊತೆಗೆ ಪೌರಕಾರ್ಮಿಕ ರಿಗೂ ಕೊಡಬೇಕು ಎಂದು ವಿಲ್ಸನ್ ಎಂಬು ವರು ಧ್ವನಿ ಎತ್ತಿದ್ದಾರೆ. ಪೌರ ಕಾರ್ಮಿಕರು ಸಾವನಪ್ಪಿದರೇ ಅನಾಥವಾಗಿ ನೋಡ ಬೇಕು. ಇವರಿಗೆ ಯಾವುದೇ ಭದ್ರತೆ ಇರು ವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕಾರ್ಮಿಕರಾಗಿ ಕರ್ತವ್ಯ ನಿರ್ವಹಿಸುವ ವರಿಗೆ ಜೀವಮಾನದಲ್ಲಿ ಒಂದು ಮನೆ ಪಡೆದು ಸಾವನಪ್ಪಬೇಕು ಎಂಬುದು ಆಸೆ ಪಡುವವರು ಇದ್ದಾರೆ. ಆದರೆ, ಅವರಿಗೆ ನಿವೇಶನ ಎಂಬುದು ಗಗನ ಚುಕ್ಕಿಯಂತೆ ಆಗಿದೆ. ಇಡೀ ನಗರವನ್ನೆಲ್ಲಾ ಸ್ವಚ್ಛ ಮಾಡು ವವರಿಗೆ ಒಂದೊಂದು ನಿವೇಶನ ಕೊಡಲೇ ಬೇಕು ಎಂದು ಒತ್ತಾಯಿಸಿದರು.

ಈ ವೇಳೆ ನಗರಸಭೆಯಲ್ಲಿ ಕಾರ್ಮಿಕ ರಾಗಿ ಸ್ವಚ್ಛತೆ ಮಾಡಿ ನಿವೃತ್ತರಾದ ಮಲ್ಲಯ್ಯ, ಮಲ್ಲೇಗೌಡ, ಅಬ್ದೂಲ್ ರಹಿಮಾ, ಅಮ ಯಮ್ಮ, ಮುನಿಯಮ್ಮ ಅವರನ್ನು ಸನ್ಮಾನಿಸಿ ಆತ್ಮೀಯವಾಗಿ ಗೌರವಿಸಲಾಯಿತು. ನಂತರ ಪೌರ ಕಾರ್ಮಿಕ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಇದಕ್ಕೂ ಮೊದಲು ಡಾ.ಬಿ. ಆರ್.ಅಂಬೇಡ್ಕರ್, ಬಾಬು ಜಗಜೀವನ್ ರಾಮ್ ಹಾಗೂ ಶ್ರೀಬಸವೇಶ್ವರ ಜಯಂತಿ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.

ಕಾರ್ಯಕ್ರಮದಲ್ಲಿ ನಗರಸಭೆ ಪೌರಾ ಯುಕ್ತ ರೂಪಾಶೆಟ್ಟಿ, ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕ ಪ್ರಮೋದ್, ನಗರಸಭೆ ಪರಿಸರ ಅಭಿಯಂತರರು ಲೋಕೇ ಶ್ವರಿ, ನಗರಸಭೆ ಕಚೆÉೀರಿ ವ್ಯವಸ್ಥಾಪಕ ಕೆ.ಪಿ. ಪ್ರಕಾಶ್, ಕಂದಾಯ ಅಧಿಕಾರಿ ಸಿ.ಎಸ್. ಪ್ರಕಾಶ್, ಪೌರ ಸೇವಾ ನೌಕರರ ಸೇವಾ ಸಂಘದ ಅಧ್ಯಕ್ಷ ಹೆಚ್.ಆರ್.ಪ್ರವೀಣ್ ಕುಮಾರ್, ಆರೋಗ್ಯ ನಿರೀಕ್ಷಕ ಆದೀಶ್ ಕುಮಾರ್, ಆರೋಗ್ಯ ವಿಭಾಗದ ರಂಜನ್, ಸಮಾಜ ಸೇವಕ ಜಿ.ಓ. ಮಹಾಂತಪ್ಪ, ಪತ್ರಕರ್ತ ಬ್ಯಾಕರವಳ್ಳಿ ವೆಂಕಟೇಶ್, ಮಾದಿಗ ದಂಡೋರದ ಕುಮಾರಸ್ವಾಮಿ, ಪೌರ ಕಾರ್ಮಿಕ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಲೋಕೇಶ್, ಉಪಾಧ್ಯಕ್ಷ ನಲ್ಲಪ್ಪ, ಕಾರ್ಯ ದರ್ಶಿ ಪರಶುರಾಮು, ಸಂಘಟನಾ ಕಾರ್ಯ ದರ್ಶಿ ಮಾರ, ಖಜಾಂಚಿ ಮುನಿಯಪ್ಪ ಇತರರು ಉಪಸ್ಥಿತರಿದ್ದರು. ಭೀಮಗೀತೆ ಯನ್ನು ಲೋಕೇಶ್, ಮಹೇಶ್ ಹಾಗೂ ಗಾಯಿತ್ರಿ ಹಾಡಿದರು.