ಪತ್ರಕರ್ತರ ಎರಡು ದಿನಗಳ ಕ್ರೀಡಾಕೂಟಕ್ಕೆ ಮೇಯರ್ ಚಾಲನೆ

ಮೈಸೂರು: ಮೈಸೂರು ವಿಶ್ವವಿದ್ಯಾನಿಲಯದ ಹಾಕಿ ಮೈದಾನದಲ್ಲಿ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ಹಮ್ಮಿಕೊಂಡಿರುವ ಎರಡು ದಿನಗಳ `ಪತ್ರಕರ್ತರ ಕ್ರೀಡಾಕೂಟ’ಕ್ಕೆ ಶನಿವಾರ ಚಾಲನೆ ದೊರೆಯಿತು.

ಬ್ಯಾಟ್ ಬೀಸುವ ಮೂಲಕ ಕ್ರೀಡಾ ಕೂಟಕ್ಕೆ ಚಾಲನೆ ನೀಡಿದ ಮೇಯರ್ ಪುಷ್ಪಲತಾ ಜಗನ್ನಾಥ್, ನಂತರ ಮಾತ ನಾಡಿ, ದಿನನಿತ್ಯ ಪೆನ್ನು, ಕ್ಯಾಮರಾ ಗಳೊಂದಿಗೆ ಒತ್ತಡದಲ್ಲಿ ಕಾರ್ಯನಿರ್ವ ಹಿಸುವ ಪತ್ರಕರ್ತರು ಇಂದು ಮೈದಾನ ದಲ್ಲಿ ಕ್ರೀಡಾಕೂಟದಲ್ಲಿ ಭಾಗವಹಿಸಿರು ವುದು ಸಂತಸದ ಸಂಗತಿ. ಕರ್ತವ್ಯದ ಜಂಜಾ ಟದ ನಡುವೆ ಒಂದಿಷ್ಟು ಬಿಡುವು ಮಾಡಿ ಕೊಂಡು ಕುಟುಂಬದವರೊಂದಿಗೆ ಕ್ರೀಡೆ ಯಲ್ಲಿ ಭಾಗವಹಿಸುತ್ತಿರುವುದು ಒಳ್ಳೆಯ ಬೆಳವಣಿಗೆ. ಕ್ರೀಡಾ ಚಟುವಟಿಕೆ ನಮ್ಮ ಆರೋಗ್ಯ ವೃದ್ಧಿಗೆ ಸಹಕಾರಿ ಎಂದು ತಿಳಿಸಿದರು.

ಕರ್ನಾಟಕ ರಾಜ್ಯ ಪೆಟ್ರೋಲ್ ಹಾಗೂ ಡೀಸೆಲ್ ಡೀಲರ್ಸ್ ಅಸೋಸಿಯೇಷನ್‍ನ ರಾಜ್ಯ ಪ್ರಧಾನ ಕಾರ್ಯದರ್ಶಿ ರಂಜಿತ್ ಹೆಗಡೆ ಮಾತನಾಡಿ, ಒತ್ತಡದಲ್ಲಿ ಕರ್ತವ್ಯ ನಿರ್ವಹಿಸುವ ಪತ್ರಕರ್ತರಿಗೆ ಕ್ರೀಡೆ ಉತ್ಸಾಹ ತುಂಬಲು ನೆರವಾಗಲಿದೆ. ಒತ್ತಡ ನಿರ್ವ ಹಿಸಲು ಹಾಗೂ ಆರೋಗ್ಯಕರ ಜೀವನಕ್ಕೆ ಕ್ರೀಡೆ ಸಹಕಾರಿ ಎಂದು ಹೇಳಿದರು.

ಮೈಸೂರು ವಿವಿ ದೈಹಿಕ ಶಿಕ್ಷಣ ವಿಭಾ ಗದ ನಿರ್ದೇಶಕ ಕೃಷ್ಣಯ್ಯ ಮಾತನಾಡಿ, ಸಮಾಜದ ಅಂಕುಡೊಂಕುಗಳ ಮೇಲೆ ಬೆಳಕು ಚೆಲ್ಲುವ ಪತ್ರಕರ್ತರು ಒತ್ತಡಕ್ಕೆ ಸಿಲುಕುವುದು ಸಾಮಾನ್ಯ. ಹೀಗಾಗಿ ಒತ್ತಡ ದಿಂದ ಮುಕ್ತವಾಗಿ ಆರೋಗ್ಯಕರ ಜೀವನ ನಡೆಸಲು ಕ್ರೀಡೆಯಲ್ಲಿ ತೊಡಗುವುದು ಅಗತ್ಯ ಎಂದರು. ಇಂದು ಕ್ರಿಕೆಟ್ ಪಂದ್ಯಾ ವಳಿ ನಡೆದಿದ್ದು, ನಾಳೆ ವಿವಿಧ ಕ್ರೀಡಾ ಚಟುವಟಿಕೆಗಳು ನಡೆಯಲಿವೆ. ಬಳಿಕ ಮಧ್ಯಾಹ್ನ 3ಕ್ಕೆ ಸಮಾರೋಪ ಸಮಾ ರಂಭ ನಡೆಯಲಿದೆ. ರಾಷ್ಟ್ರೀಯ ಶಾಟ್‍ಪುಟ್ ಪಟು ಬಿ.ಮನುಷ್, ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಕೆ.ಮಹೇಂದ್ರ, ಪ್ರಧಾನ ಕಾರ್ಯದರ್ಶಿ ಲೋಕೇಶ್ ಬಾಬು ಮತ್ತಿತರರು ಹಾಜರಿದ್ದರು.