ಮಳೆಗಾಲ ಎದುರಿಸಲು ಪಾಲಿಕೆ ಸಜ್ಜು

ಮೈಸೂರು: ಮಳೆಗಾಲ ಆರಂಭವಾಗಿದ್ದು, ನಗರದಲ್ಲಿ ಯಾವುದೇ ಮಳೆ ಅನಾಹುತ ಸಂಭವಿಸದಂತೆ ಎಚ್ಚರ ವಹಿಸಲು ಮೈಸೂರು ನಗರ ಪಾಲಿಕೆ ಮುಂದಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಚರಂಡಿಯಲ್ಲಿ ತುಂಬಿಕೊಂಡಿರುವ ಹೂಳನ್ನು ತೆಗೆಯುವ ಕಾರ್ಯ ಆರಂಭಿಸಿದೆ. ಜತೆಗೆ ಮೂರು ಕ್ಷಿಪ್ರ ಕಾರ್ಯಾಚರಣೆ ಪಡೆಯನ್ನೂ ರಚಿಸಿದೆ.

ಮಳೆಗಾಲದಲ್ಲಿ ಎದುರಾಗುವ ಸಮಸ್ಯೆ, ಸವಾಲು ಗಳನ್ನು ಸಮರ್ಥವಾಗಿ ಎದುರಿಸಲು ಮೈಸೂರು ನಗರ ಪಾಲಿಕೆ ಕೈಗೊಂಡಿರುವ ಕ್ರಮಗಳ ಕುರಿತಂತೆ ಆಯುಕ್ತರಾದ ಶಿಲ್ಪಾನಾಗ್ ‘ಮೈಸೂರು ಮಿತ್ರ’ನೊಂ ದಿಗೆ ಬುಧವಾರ ಮಾತನಾಡಿದರು.

ಈ ಬಾರಿ ನಗರಪಾಲಿಕೆ ಮಳೆಗಾಲದಲ್ಲಿ ಎದು ರಾಗುವ ಸಮಸ್ಯೆಗಳನ್ನು ಎದುರಿಸಲು ಸನ್ನದ್ಧವಾಗಿದೆ. ಕಳೆದ 3 ವರ್ಷದಲ್ಲಿ ಮಳೆಗಾಲದಲ್ಲಿ ಯಾವ ಯಾವ ಪ್ರದೇಶಗಳಲ್ಲಿ ಅನಾಹುತವಾಗಿತ್ತು, ಮಳೆ ನೀರು ಎಲ್ಲೆಲ್ಲಿ ನುಗ್ಗಿತ್ತು ಎನ್ನುವ ಮಾಹಿತಿಯನ್ನು ಕಲೆ ಹಾಕಿ ಅಧ್ಯ ಯನ ಮಾಡಿದ್ದೇವೆ. 3 ವರ್ಷದಲ್ಲಿ ಸಂಭವಿಸಿರುವ ಘಟನೆಯನ್ನು ಅವಲೋಕಿಸಿ ಅವು ಮರುಕಳಿಸದಂತೆ ಎಚ್ಚರವಹಿಸಲಾಗಿದೆ. ಮೈಸೂರಿನ ಎಲ್ಲಾ ಭಾಗದಲ್ಲಿ ರುವ ಮಳೆ ನೀರು ಚರಂಡಿಯನ್ನು ಸ್ವಚ್ಛಗೊಳಿಸಲಾಗು ತ್ತಿದೆ. ಚರಂಡಿಯಲ್ಲಿ ಬೆಳೆದು ನಿಂತಿರುವ ಗಿಡಗಳನ್ನು ತೆಗೆದು ಹಾಕಲಾಗಿದೆ. ಸೇತುವೆಗಳ ಕೆಳಗೆ ಸಿಲುಕಿದ್ದ ಕಸವನ್ನು ತೆಗೆಯಲಾಗುತ್ತಿದೆ. ಮೇ 1ರಿಂದ ಚರಂಡಿ ಸ್ವಚ್ಛ ಗೊಳಿಸುವ ಕಾರ್ಯ ಆರಂಭಿಸಲಾಗಿದ್ದು, ಈ ಕಾರ್ಯ ಮೇ 15ರವರೆಗೆ ನಡೆಯಲಿದೆ. ಎಷ್ಟೇ ಜೋರಾಗಿ ಮಳೆ ಬಂದರೂ ನೀರು ಸರಾಗವಾಗಿ ಹರಿದು ಹೋಗು ವಂತೆ ಕ್ರಮ ಕೈಗೊಳ್ಳಲಾಗಿರುವುದರಿಂದ ಮಳೆ ನೀರು ತಗ್ಗು ಪ್ರದೇಶಕ್ಕೆ ನುಗ್ಗುವ ಸಾಧ್ಯತೆ ಕಡಿಮೆ ಇದೆ ಎಂದರು.

ಕ್ಷಿಪ್ರ ಕಾರ್ಯಾಚರಣೆ ಪಡೆ: ಮೈಸೂರು ನಗರ ಪಾಲಿಕೆ ಅಭಯ ತಂಡ ಈಗಾಗಲೇ ಕಾರ್ಯಾಚರಣೆ ನಡೆಸುತ್ತಿದ್ದು, ಇದರೊಂದಿಗೆ ಮಳೆಗಾಲದ ಪರಿಸ್ಥಿತಿಗೆ ಸ್ಪಂದಿಸಲು 3 ಕ್ಷಿಪ್ರ ಕಾರ್ಯಾಚರಣೆ ಪಡೆಗಳನ್ನು ರಚಿಸಲಾಗಿದೆ. ಈ ತಂಡಗಳು ಕಾರ್ಯಪಾಲಕ ಅಭಿಯಂತರ ನೇತೃತ್ವದಲ್ಲಿ ಕಾರ್ಯ ನಿರ್ವಹಿಸಲಿವೆ. ಈ ತಂಡದಲ್ಲಿ ತೋಟಗಾರಿಕೆ, ಆರೋಗ್ಯ, ಇಂಜಿನಿಯ ರಿಂಗ್ ವಿಭಾಗದ ಅಧಿಕಾರಿಗಳು, ಸಿಬ್ಬಂದಿ ಹಾಗೂ ವಲಯ ಕಚೇರಿಯ ಅಭಿವೃದ್ಧಿ ಅಧಿಕಾರಿಗಳು ಇರು ತ್ತಾರೆ. ಈ ತಂಡ ಯಾವುದಾದರೂ ದೂರು ಬಂದರೆ 15 ನಿಮಿಷದಲ್ಲಿ ಘಟನೆ ನಡೆದ ಸ್ಥಳಕ್ಕೆ ಧಾವಿಸಿ, ರಕ್ಷಣಾ ಕಾರ್ಯದಲ್ಲಿ ತೊಡಗುತ್ತದೆ. ಮೂರು ವಿಧಾನ ಸಭಾ ಕ್ಷೇತ್ರಗಳಲ್ಲೂ ಒಂದೊಂದು ತಂಡ ಕಾರ್ಯ ನಿರ್ವಹಿಸಲಿದೆ ಎಂದು ಶಿಲ್ಪಾನಾಗ್ ವಿವರಿಸಿದರು.

ಮರಗಳ ಕೊಂಬೆ ಕಡಿತ: ಮೈಸೂರಿನ ವಿವಿಧ ರಸ್ತೆ ಯಲ್ಲಿರುವ ಮರಗಳಿಂದ ಜೋತು ಬಿದ್ದಿರುವ ಹಾಗೂ ಒಣಗಿರುವ ಕೊಂಬೆಗಳನ್ನು ಕಡಿಯುವುದಕ್ಕೆ ಕ್ರಮ ಕೈಗೊಳ್ಳಲಾಗಿದೆ. ಕೇವಲ ದುರ್ಬಲವಾದ ಕೊಂಬೆ ಗಳನ್ನೇ ಕಡಿಯಲಾಗುತ್ತಿದೆ. ಈ ಮುನ್ನೆಚ್ಚರಿಕೆ ಕ್ರಮ ದಿಂದ ಕೊಂಬೆಗಳು ಬಿದ್ದು ಸಂಭವಿಸಬಹುದಾದ ಅನಾಹುತವನ್ನು ತಡೆದಂತಾಗಿದೆ ಎಂದರು

ಶಕ್ತಿಮಾನ್‍ಗೆ ಚಾಲನೆ: ಮರಗಳ ಕೊಂಬೆ ಕಡಿಯ ಲೆಂದೇ ಕೋಟಿ ವೆಚ್ಚ ಮಾಡಿ ಖರೀದಿಸಲಾಗಿರುವ `ಶಕ್ತಿಮಾನ್’ ಯಂತ್ರ ಚಾಲಕನಿಲ್ಲದೆ ಮೂಲೆಗೆ ಸೇರಿದೆ ಯಲ್ಲಾ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಶಕ್ತಿ ಮಾನ್ ಯಂತ್ರ ಚಾಲನೆ ಮಾಡುವುದಕ್ಕೆ ಓರ್ವ ಸಿಬ್ಬಂದಿ ನೇಮಿಸಲಾಗಿದ್ದು, ತರಬೇತಿ ನೀಡಲಾಗುತ್ತಿದೆ. ಶೀಘ್ರವೇ ಆ ಯಂತ್ರವನ್ನು ಬಳಸಿಕೊಳ್ಳುತ್ತೇವೆ ಎಂದು ತಿಳಿಸಿದರು.