ಕೊಡಗು ಜಿಲ್ಲೆಯಲ್ಲೂ ಸಭೆ ಸಮಾರಂಭ ನಡೆಸದಂತೆ ಸೂಚನೆ

ಮಡಿಕೇರಿ,ಮಾ.13-ರಾಜ್ಯದಲ್ಲಿ ಕೋವಿಡ್-19 (ಕೊರೋನಾ) ವೈರಸ್ ನಿಂದ ವ್ಯಕ್ತಿ ಮೃತಪಟ್ಟ ಘಟನೆ ನಡೆದಿರುವ ಹಿನ್ನಲೆಯಲ್ಲಿ ರಾಜ್ಯ ಸರಕಾರ ಒಂದು ವಾರಗಳ ಕಾಲ ಹೆಚ್ಚು ಜನ ಸೇರುವ ಸಭೆ ಸಮಾರಂಭಗಳನ್ನು ನಡೆಸದಂತೆ ಸೂಚನೆ ನೀಡಿದ್ದು, ಕೊಡಗು ಜಿಲ್ಲೆಯಲ್ಲಿ ಈ ಕುರಿತು ಆತಂಕ ಪ್ರಾರಂಭವಾಗಿದೆ.

ರಾಜ್ಯ ಸರಕಾರದ ಸೂಚನೆಯಂತೆ ಜಿಲ್ಲೆ ಯಲ್ಲೂ ಯಾವುದೇ ಸಭೆ ಸಮಾರಂಭ ನಡೆಸುವಂತಿಲ್ಲ. ಆದರೆ ಈಗಾಗಲೇ ಜಿಲ್ಲೆ ಯಲ್ಲಿ ಮದುವೆ, ನಾಮಕರಣ, ನಿಶ್ಚಿ ತಾರ್ಥ, ದೇವರ ಹಬ್ಬಗಳು, ದೇವಾಲಯ ಗಳ ವಾರ್ಷಿಕೋತ್ಸವ ಕೂಡ ನಡೆಯು ತ್ತಿದ್ದು, ಸಮಾರಂಭ ಆಯೋಜಕರು ತ್ರಿಶಂಕು ಸ್ಥಿತಿ ಎದುರಿಸುವಂತಾಗಿದೆ. ಈಗಾಗಲೇ ಮದುವೆ, ನಾಮಕರಣ, ನಿಶ್ಚಿತಾರ್ಥಗಳ ದಿನಗಳನ್ನು ನಿಗಧಿ ಮಾಡಿ ಅದಕ್ಕೆ ತಕ್ಕಂತೆ ಸಮಾರಂಭಗಳ ಹಾಲ್ ಗಳು ಕೂಡ ಬಕ್ಕಿಂಗ್ ಮಾಡಲಾಗಿದೆ. ಇದಕ್ಕೆಂದು ಮುಂಗಡ ಹಣವನ್ನು ಕೂಡ ಕೆಲವರು ಪಾವತಿಸಿದ್ದು, ಆಮಂತ್ರಣ ಪತ್ರ ಗಳನ್ನು ಕೂಡ ಹಂಚಲಾಗಿದ್ದು, ಸಮಾರಂಭ ಆಯೋಜಕರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಸರಕಾರದ ಈ ಆದೇಶ ಕಡ್ಡಾಯ ಅಲ್ಲದಿದ್ದರೂ, ಸೋಂಕು ಹರಡು ವುದನ್ನು ತಪ್ಪಿಸಲು ಈ ಸೂಚನೆಯನ್ನು ಪಾಲಿಸಲೇಬೇಕಾದ ಅನಿವಾರ್ಯತೆ ಮತ್ತು ಜವಾಬ್ದಾರಿಯೂ ಜಿಲ್ಲೆಯ ಜನರ ಮುಂದಿದೆ.

ರಜೆ ಘೋಷಣೆ
ಕೊರೋನಾ ಸೋಂಕಿನಿಂದ ಮಕ್ಕ ಳನ್ನು ರಕ್ಷಿಸುವ ಸಲುವಾಗಿ ಸಾರ್ವ ಜನಿಕ ಶಿಕ್ಷಣ ಇಲಾಖೆ ರಾಜ್ಯದ ಎಲ್ಲಾ ಶಾಲೆಗಳಿಗೆ ರಜೆ ಘೋಷಿಸಿದ್ದು, ಕೊಡಗು ಜಿಲ್ಲೆಯ ಶಾಲೆಗಳು ಕೂಡ ಮಾ.14ರಿಂದ ರಜೆಗೆ ಒಳಪಡಲಿದೆ. ಈಗಾಗಲೇ ನಿಗದಿಯಾಗಿರುವ ಎಸ್‍ಎಸ್‍ಎಲ್‍ಸಿ ಪರೀಕ್ಷೆಗಳು ಎಂದಿ ನಂತೆ ನಡೆಯಲಿದೆ. ಪರೀಕ್ಷಾ ದಿನಗಳನ್ನು ಹೊರತುಪಡಿಸಿ ಉಳಿದ ದಿನಗಳಲ್ಲಿ ಶಾಲಾ ತರಗತಿಗಳನ್ನು ತೆರೆಯದಂತೆ ಸಾರ್ವ ಜನಿಕ ಶಿಕ್ಷಣ ಇಲಾಖೆ ಹೊರಡಿಸಿರುವ ಸುತ್ತೋಲೆಯಲ್ಲಿ ಸೂಚಿಸಲಾಗಿದೆ.