ಜನರಲ್ ತಿಮ್ಮಯ್ಯ ಸ್ಮಾರಕಕ್ಕೆ ಬಂದಿಳಿದ ಸೇನಾ ಶಸ್ತ್ರಾಸ್ತ್ರಗಳು

ಮಡಿಕೇರಿ: ವೀರ ಯೋಧ ಜನರಲ್ ತಿಮ್ಮಯ್ಯ ಅವರು ಹುಟ್ಟಿ ಬೆಳೆದ ಸನ್ನಿಸೈಡ್ ನಿವಾಸವನ್ನು ‘ಜನರಲ್ ತಿಮ್ಮಯ್ಯ ವಾರ್ ಮೆಮೋರಿಯಲ್’ ಆಗಿ ಪರಿವರ್ತಿಸಲಾಗಿದ್ದು, ದೇಶದ ವಿವಿಧ ಸೇನಾ ಶಸ್ತ್ರಾಸ್ತ್ರಗಳ ಡಿಪೋಗಳಿಂದ ಸಂಗ್ರಹಿಸಲಾದ 25ಕ್ಕೂ ಹೆಚ್ಚು ಆಯುಧಗಳನ್ನು ಮಡಿಕೇರಿಗೆ ತರಲಾಗಿದೆ. ಲೈಟ್ ಮಿಷಿನ್ ಗನ್ ಗಳು, ಮೀಡಿಯಂ ಮಿಷಿನ್ ಗನ್‍ಗಳು, ಸೆಲ್ಫ್ ಲೋಡಿಂಗ್ ರೈಫಲ್‍ಗಳು, 7.62 ಮತ್ತು 303 ಬೋರ್ ರೈಫಲ್‍ಗಳು, ಸೆಮಿಮಿಷಿನ್ ಕಾರ್ಬೈನ್ ಗನ್, ಪಾಯಿಂಟ್ 38 ಎಂ.ಎಂ. ರೈಫಲ್, ಬಝೂಕಾ ರಾಕೇಟ್ ಲಾಂಚರ್‍ಗಳು ಸೇರಿ ದಂತೆ ಹಲವು ಸೇನಾ ಶಸ್ತ್ರಾಸ್ತ್ರಗಳು ಜಿಲ್ಲಾಡಳಿತ ಭವನಕ್ಕೆ ಬಂದಿಳಿದಿವೆ.

ಈ ಶಸ್ತ್ರಾಸ್ತ್ರಗಳನ್ನೆಲ್ಲ ಭಾರತೀಯ ಸೇನೆಯ ಯೋಧರು ವಿವಿಧ ಯುದ್ಧಗಳಲ್ಲಿ ಬಳಸಿದ್ದು, ಇವುಗಳನ್ನು ಮಡಿಕೇರಿಯಲ್ಲಿ ನಿರ್ಮಿಸಲಾಗಿ ರುವ ವೀರ ಯೋಧ ಜನರಲ್ ತಿಮ್ಮಯ್ಯ ಅವರ ವಾರ್ ಮ್ಯೂಸಿಯಂನಲ್ಲಿಡಲು ಮಧ್ಯಪ್ರದೇಶದ ಜಬಲ್‍ಪುರದಿಂದ ತರಲಾಗಿದೆ. ಬಿಡಿಯಾಗಿ ರುವ ಈ ಬಂದೂಕುಗಳನ್ನು ಜೋಡಿಸಿ ಅವು ಗಳನ್ನು ಜನರಲ್ ತಿಮ್ಮಯ್ಯ ವಾರ್ ಮೆಮೋರಿ ಯಲ್‍ನಲ್ಲಿ ಅಳವಡಿಸುವ ಕಾರ್ಯ ಮಾಡಲಾ ಗುತ್ತದೆ. ಯೋಧ ಕೊಡಂದೇರ ಜನರಲ್ ತಿಮ್ಮಯ್ಯ ಅವರ ಬದುಕು, ಸೇನಾ ಇತಿಹಾಸವನ್ನು ಸಮಾ ಜಕ್ಕೆ ಮತ್ತು ಯುವ ಪೀಳಿಗೆಗೆ ಪರಿಚಯಿಸುವ ಕಾರ್ಯ ಮಾಡಲಾಗುತ್ತಿದೆ. ಮಾತ್ರವಲ್ಲದೇ ಮಾತೃ ಭೂಮಿಯ ರಕ್ಷಣೆಗಾಗಿ ತಮ್ಮ ಬದುಕನ್ನೇ ತ್ಯಾಗ ಗೈದ ಸೈನಿಕರಿಗೆ ಈ ಮೂಲಕ ಗೌರವ ಸಮ ರ್ಪಿಸಲಾಗುತ್ತದೆ. ವಿಶೇಷವೆಂದರೆ 1948 ಮತ್ತು 1965ರ ಯುದ್ಧದಲ್ಲಿ ವೀರ ಯೋಧ ಜನರಲ್ ತಿಮ್ಮಯ್ಯ, ಸಮರ ಭೂಮಿಯಲ್ಲಿ ಮುಂಚೂಣಿ ಯಲ್ಲಿ ನಿಂತು ಶತ್ರುಗಳನ್ನು ಸಿಂಹ ಸ್ವಪ್ನವಾಗಿ ಕಾಡಿದ್ದರಲ್ಲದೇ, ಸೋಲಿನ ರುಚಿ ತೋರಿಸಿ ದ್ದರು. ಇಂದು ಕೂಡ ಭಾರತ-ಪಾಕ್ ಗಡಿ ಯಲ್ಲಿ ಯುದ್ಧದ ಉದ್ವಿಗ್ನ ಪರಿಸ್ಥಿಯ ನಡು ವೆಯೇ, ಕೊಡಗಿನ ಸಮರ ವೀರನ ವಾರ್ ಮೆಮೋರಿಯಲ್‍ಗೆ ಯುದ್ಧದ ಆಯುಧಗಳು ಆಗಮಿಸಿರುವುದು ಸೈನಿಕರ ತವರಿಗೆ ಮತ್ತೊಂದು ಗರಿ ಮೂಡಿಸಿದಂತಿದೆ.

ಶಸ್ತ್ರಗಳ ಇತಿಹಾಸ: ಮಡಿಕೇರಿಗೆ ತರಲಾಗಿರುವ ಈ ಶಸ್ತ್ರಗಳು ರಷ್ಯಾ ಮತ್ತು ಬ್ರಿಟಿಷ್ ನಿರ್ಮಿತ ವಾಗಿದ್ದು, ದೇಶದ ಹಲವು ಯುದ್ಧ ಮತ್ತು ಸೈನಿಕ ಕಾರ್ಯಾಚರಣೆಗಳಲ್ಲಿ ಬಳಸಲಾಗಿದೆ. 50 ವರ್ಷ ಹಳೆಯ ಈ ಶಸ್ತ್ರಗಳು ಭಾರತೀಯ ಸೇನೆಯ ವಿವಿಧ ರೆಜಿಮೆಂಟ್‍ಗಳ ಸಾಹಸದ ಯಶೋಗಾಥೆ ಯನ್ನು ಬರೆದಿದ್ದು, ಬಳಕೆಯ ಅವಧಿ ಮುಗಿದ ಹಿನ್ನ ಲೆಯಲ್ಲಿ ಇವುಗಳನ್ನು ಸೇನಾ ಶಸ್ತ್ರ ಕೋಠಿಗಳಲ್ಲಿ ದಾಸ್ತಾನು ಮಾಡಲಾಗಿತ್ತು. ಫೋರಂನ ಬೇಡಿಕೆ ಯಂತೆ ಇನ್ನೂ 20 ವಿವಿಧ ಮಾದರಿಯ ಆಯುಧ ಗಳು ಜಿಲ್ಲೆಗೆ ಬರಲಿದ್ದು, ವಾರ್ ಮ್ಯೂಸಿಯಂನಲ್ಲಿ ಪ್ರದ ರ್ಶನಕ್ಕೆ ಇಡಲಾಗುತ್ತದೆ. ಮಾತ್ರವಲ್ಲದೇ, ಪ್ರತಿ ಸಂದರ್ಶಕರಿಗೂ ಸೇನೆಯ ಬಂದೂಕುಗಳನ್ನು ಕೈಯಲ್ಲಿ ಹಿಡಿದುಕೊಂಡು ಅದರ ಅನುಭವ ಪಡೆ ಯಲು ಕೂಡ ಅನುವು ಮಾಡಿಕೊಡಲಾಗುತ್ತದೆ.

ಶಸ್ತ್ರಗಳ ವಿಶೇಷತೆ: ಮೀಡಿಯಂ ಮಿಷಿನ್ ಗನ್ ಗಳು ಬೆಂಗಾವಲು ಆಯುಧವಾಗಿದ್ದು, ಯುದ್ಧ ಭೂಮಿಯಲ್ಲಿ 2 ಮೈಲು ದೂರದವರೆಗೆ ನಿಖರ ಗುರಿಯಲ್ಲಿ ಶತ್ರುಗಳ ಎದೆಯನ್ನು ಸೀಳುವ ಸಾಮಥ್ರ್ಯ ಹೊಂದಿದ್ದರೆ, ಲೈಟ್ ಮಿಷನ್ ಗನ್ 30 ಯೋಧರ ತಂಡದ ಪ್ಲಟೂನ್ ಶಸ್ತ್ರಗಳಾಗಿ ಶತ್ರು ಪಾಳೆಯದ ಮೇಲೆ ಗುಂಡಿನ ಮಳೆ ಸುರಿಸುತ್ತಿದ್ದವು. ಬಝೂಕ ರಾಕೇಟ್ ಲಾಂಛರ್‍ಗಳು ಶತ್ರುಗಳ ಪೋಸ್ಟ್‍ಗಳು, ವಾಹನಗಳು, ಅಡುಗು ತಾಣಗಳನ್ನು ಪುಡಿಗಟ್ಟು ವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದವು. ಸೆಲ್ಫ್ ಲೋಡಿಂಗ್ ರೈಫಲ್‍ಗಳು, ಸೆಮಿಮಿಷಿನ್ ಕಾರ್ಬೈನ್ ಗನ್‍ಗಳು, ಪಾಯಿಂಟ್ 38 ಮತ್ತು 7.62 ರೈಫಲ್ ಗಳು ಯೋಧರ ವೈಯಕ್ತಿಕ ಆಯುಧಗಳಾಗಿ ಯುದ್ಧ ಭೂಮಿಯಲ್ಲಿ ಸೆಣಸಾಡಲು ಬಳಕೆಯಾಗುತ್ತಿದ್ದವು.

“ಜನರಲ್” ಕೊಡುಗೆ: ಭೂ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಈ ಹಿಂದೆ ಗೋಣಿ ಕೊಪ್ಪಕ್ಕೆ ಬಂದ ಸಂದರ್ಭ ಫೀಲ್ಡ್ ಮಾರ್ಷಲ್ ಕಾರ್ಯಪ್ಪ-ಜನರಲ್ ತಿಮ್ಮಯ್ಯ ಫೋರಂನ ಪ್ರಮು ಖರು ಬಿಪಿನ್ ರಾವತ್ ಅವರಿಗೆ ಮನವಿ ಸಲ್ಲಿಸಿ, ಇನ್ಫೆಂಟ್ರಿ ಶಸ್ತ್ರಾಸ್ತ್ರಗಳನ್ನು ಜನರಲ್ ತಿಮ್ಮಯ್ಯ ವಾರ್ ಮೆಮೋರಿಯಲ್‍ಗೆ ನೀಡುವಂತೆ ಮನವಿ ಸಲ್ಲಿಸಿ ದ್ದರು. ಈ ಮನವಿಯನ್ನು ಪರಿಗಣಿಸಿದ ಜನರಲ್ ಬಿಪಿನ್ ರಾವತ್ ಒಟ್ಟು 1400 ಬಗೆಯ ಆಯುಧ ಗಳ ಪಟ್ಟಿ ನೀಡಿ ತಮಗೆ ಬೇಕಾದನ್ನು ಆಯ್ದು ಕೊಳ್ಳುವಂತೆ ಸೂಚಿಸಿದ್ದರು. ಈ ಪಟ್ಟಿಯಂತೆ ಒಟ್ಟು 45 ಬಗೆಯ ಶಸ್ತ್ರಗಳನ್ನು ಆಯ್ಕೆ ಮಾಡಿಕೊಂಡು ಅದನ್ನು ವಾರ್ ಮೆಮೋರಿಯಲ್‍ಗೆ ನೀಡುವಂತೆ ಫೋರಂ ಪ್ರಮುಖರು ತಿಳಿಸಿದ್ದರು. ಆದರೆ ಪ್ರತಿ ಆಯುಧ ಮತ್ತು ಅದರ ಬಿಡಿ ಭಾಗಗಳು ದೇಶದ ವಿವಿಧ ಶಸ್ತ್ರ ಕೋಠಿಗಳಲ್ಲಿದ್ದ ಕಾರಣ ಸಕಾಲದಲ್ಲಿ ಪಡೆದುಕೊಳ್ಳಲು ಸಾಧ್ಯವಾಗಿರಲಿಲ್ಲ.

ಬಳಿಕ ಫೋರಂನ ಪ್ರಮುಖರು, ರಾಷ್ಟ್ರಪತಿ ಅರವಿಂದ ಕೋವಿಂದ್ ಅವರ ಮಿಲಿಟರಿ ಕಾರ್ಯ ದರ್ಶಿಯಾಗಿರುವ ಮೇಜರ್ ಜನರಲ್ ಕೋದಂಡ ಪಿ.ಕಾರ್ಯಪ್ಪ ಅವರಿಗೆ ಮನವಿ ಸಲ್ಲಿಸಿ, ಆಯು ಧಗಳನ್ನು ಒದಗಿಸಿಕೊಡುವಂತೆ ಮನವಿ ಮಾಡಿ ದ್ದರು. ಮೇಜರ್ ಜನರಲ್ ಪಿ.ಕಾರ್ಯಪ್ಪ ಅವರು, ಹವಾಲ್ದಾರ್ ಸರ್ಜಿತ್ ಸಿಂಗ್ ಮತ್ತು 5 ಮಂದಿ ಯೋಧರ ತಂಡಕ್ಕೆ ಶಸ್ತ್ರಾಸ್ತ್ರಗಳ ಸಂಗ್ರಹಿಸುವ ಹೊಣೆ ವಹಿಸುವ ಮೂಲಕ ಕೇವಲ 7 ದಿನಗ ಳಲ್ಲಿ ಮಡಿಕೇರಿಗೆ ತರುವಲ್ಲಿಯೂ ವಿಶೇಷ ಆಸ್ಥೆ ವಹಿಸಿದ್ದಾರೆ. ಈ ಶಸ್ತ್ರಗಳ ಉಸ್ತುವಾರಿ ಜಿಲ್ಲಾ ಧಿಕಾರಿಗಳ ಮೇಲಿರುವ ಹಿನ್ನಲೆಯಲ್ಲಿ ಅವುಗಳ ಸಾಗಾಟದ ವೆಚ್ಚವನ್ನೂ ಅಂದಿನ ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ನಿಭಾಯಿಸಿದ್ದರು.

ಬೊಫೋರ್ಸ್ ಫಿರಂಗಿ: ಜನರಲ್ ತಿಮ್ಮಯ್ಯ ವಾರ್ ಮೆಮೋರಿಯಲ್ ಆವರಣದಲ್ಲಿ ಬೊಫೋರ್ಸ್ ಫಿರಂಗಿಯನ್ನು ಕೂಡ ಪ್ರದರ್ಶಿಸಲು ಮಾಡಲು ನಿರ್ಧರಿಸಲಾಗಿದ್ದು, ಅದಕ್ಕೂ ಜನರಲ್ ಬಿಪಿನ್ ರಾವತ್ ಒಪ್ಪಿಗೆ ಸೂಚಿಸಿದ್ದಾರೆ. ಈ ಫಿರಂಗಿ ಗಾತ್ರದಲ್ಲಿ ಭಾರೀ ದೊಡ್ಡದಿರುವುದ ರಿಂದ ಅದರ ಸಾಗಾಟ ಮತ್ತು ಅಳವಡಿಕೆ ಕಾರ್ಯ ಸ್ಥಳೀಯಾಡಳಿತ ಹಾಗೂ ಫೋರಂಗೆ ಕಷ್ಟಸಾಧ್ಯವಾಗುವ ಹಿನ್ನೆಲೆಯಲ್ಲಿ ಅದರ ಮೇಲುಸ್ತುವಾರಿಯನ್ನು ಮೆದ್ರಾಸ್ ರೆಜಿ ಮೆಂಟ್‍ನ ಯೋಧರಿಗೆ ವಹಿಸಲಾಗಿದೆ. ಸದ್ಯದಲ್ಲಿಯೇ ಬೊಫೋರ್ಸ್ ಫಿರಂಗಿ ಕೂಡ ಜನರಲ್ ತಿಮ್ಮಯ್ಯ ವಾರ್ ಮೆಮೋರಿಯಲ್‍ಗೆ ಬರಲಿದ್ದು, ಮತ್ತಷ್ಟು ಆಕರ್ಷಕ ತಾಣವಾಗಿ ಸನ್ನಿಸೈಡ್ ರೂಪುಗೊಳ್ಳಲಿದೆ. ಕೊಡಗು ಜಿಲ್ಲೆಯ ಸಹಸ್ರ ಸಂಖ್ಯೆಯ ಯೋಧರು ಇಂದಿಗೂ ಸೇನೆಗಳಲ್ಲಿ ಕರ್ತವ್ಯ ನಿರ್ವಹಿ ಸುತ್ತಿದ್ದು, ಹೊರ ಊರುಗಳ ಪ್ರವಾಸಿಗಳಿಗೆ ಮತ್ತು ಮುಂದಿನ ಯುವ ಪೀಳಿಗೆಗೆ ಸೇನೆಯ ಇತಿಹಾಸದ ಬಗ್ಗೆ ಸಮಗ್ರ ಮಾಹಿತಿ ಒದಗಿ ಸಲಿದೆ. ಆ ಮೂಲಕ ಯುವ ಪೀಳಿಗೆಗೆ ಸೇನೆಯ ಬಗ್ಗೆ ಪ್ರೇರೇಪಣೆ ನೀಡುವಲ್ಲಿಯೂ ವಾರ್ ಮೆಮೋರಿಯಲ್ ಪ್ರಮುಖ ಪಾತ್ರ ವಹಿ ಸಲಿದೆ ಎಂದರೆ ತಪ್ಪಾಗಲಾರದು.