ಸಿ.ಹೆಚ್.ವಿಜಯಶಂಕರ್ ಪರ ಎಂಕೆಎಸ್ ಮನೆ ಮನೆ ಪ್ರಚಾರ

ಮೈಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಸಿ.ಹೆಚ್.ವಿಜಯಶಂಕರ್ ಪರ ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಮೈಸೂರಿನ ಚಿನ್ನಗಿರಿಕೊಪ್ಪ ಲಿನಲ್ಲಿ ಪಾದಯಾತ್ರೆ ನಡೆಸಿ ಮತಯಾಚಿಸಿದರು.

ಕೆ.ಆರ್.ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಚಿನ್ನಗಿರಿ ಕೊಪ್ಪಲಿ ನಲ್ಲಿ ಜೆಡಿಎಸ್ ಮುಖಂಡರು ಹಾಗೂ ಸ್ತ್ರೀ ಶಕ್ತಿ ಸಂಘ ಗಳ ಸದಸ್ಯೆಯರೊಂದಿಗೆ ಮನೆ ಮನೆಗೆ ತೆರಳಿ ಮೈತ್ರಿ ಅಭ್ಯರ್ಥಿ ಸಿ.ಹೆಚ್.ವಿಜಯಶಂಕರ್ ಅವರಿಗೆ ಮತ ನೀಡು ವಂತೆ ಮನವಿ ಮಾಡಿದರು.

ಚಿನ್ನಗಿರಿಕೊಪ್ಪಲಿನಲ್ಲಿ ಎಲ್ಲಾ ರೀತಿಯ ಮೂಲಭೂತ ಸೌಲಭ್ಯಗಳನ್ನು ನನ್ನ ಅವಧಿ ಯಲ್ಲಿ ಮಾಡಲಾಯಿತು. ಮೂರನೇ ಭಾರಿ ಒಳಚರಂಡಿ ವ್ಯವಸ್ಥೆಯನ್ನು ಸರಿಪಡಿ ಸಲಾಗಿದೆ. ಕಿರಿದಾಗಿದ್ದ ಮಣ್ಣಿನ ರಸ್ತೆಗಳನ್ನು ಕಾಂಕ್ರಿಟ್ ರಸ್ತೆಗಳನ್ನಾಗಿಸಲಾಗಿದೆ. ಈ ಭಾಗದಲ್ಲಿ ಬಿಪಿಎಲ್ ಕಾರ್ಡುದಾರರೇ ಹೆಚ್ಚಾಗಿದ್ದು, ಅನ್ನಭಾಗ್ಯ ಯೋಜನೆ ಯಿಂದ ಉಚಿತ ಅಕ್ಕಿ ಪಡೆದು ನೆಮ್ಮದಿಯಿಂದ ಜೀವನ ಸಾಗಿಸುತ್ತಿದ್ದಾರೆ. ಆದ್ದರಿಂದ ಇಲ್ಲಿನ ಮತದಾರರು ಮತ್ತಷ್ಟು ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸುತ್ತಾರೆ ಎಂಬ ವಿಶ್ವಾಸವಿದೆ ಎಂದರು.

ಚುನಾವಣೆಗೆ ಕೆಲವೇ ದಿನ ಬಾಕಿಯಿದ್ದು, ಕೆ.ಆರ್.ಕ್ಷೇತ್ರ ವ್ಯಾಪ್ತಿಯ ಎಲ್ಲಾ ವಾರ್ಡ್‍ಗಳಲ್ಲಿ ಪ್ರಚಾರ ಮಾಡುತ್ತಿ ದ್ದೇವೆ. ಜನರ ಪ್ರತಿಕ್ರಿಯೆ ಉತ್ತಮವಾಗಿದ್ದು, ಮೈತ್ರಿ ಅಭ್ಯರ್ಥಿ ವಿಜಯಶಂಕರ್ ಗೆಲುವು ನಿಶ್ಚಿತ ಎಂದು ಹೇಳಿದರು.

ನಗರಪಾಲಿಕೆ ಸದಸ್ಯೆ ಶೋಭಾ ಮಾತನಾಡಿ, ಜೆಡಿಎಸ್ ಕಾರ್ಯಕರ್ತರೆಲ್ಲರೂ ಮೈತ್ರಿ ಅಭ್ಯರ್ಥಿ ಪರವಾಗಿದ್ದೇವೆ. ಇಲ್ಲಿನ ಮಹಿಳಾ ಸಂಘಟನೆಗಳು ಮೈತ್ರಿ ಪರವಾಗಿದ್ದು, ಎಲ್ಲರೂ ಒಟ್ಟಾಗೆ ಕೆಲಸಮಾಡುತ್ತಿದ್ದೇವೆ ಎಂದರು. ನಗರಪಾಲಿಕೆ ಮಾಜಿ ಸದಸ್ಯ ಚನ್ನಪ್ಪ, ರವಿ ಕುಮಾರ್, ನಾರಾಯಣ, ಕುಮಾರಿ, ಮಂಜುಳ, ಲೀಲಾವತಿ, ರುಕ್ಮಿಣಿ ಮತ್ತಿತರರು ಹಾಜರಿದ್ದರು.