ರಸ್ತೆ ಅಭಿವೃದ್ಧಿಗೆ ಶಾಸಕ ಎಲ್.ನಾಗೇಂದ್ರ ಚಾಲನೆ

ಮೈಸೂರು: ಮೈಸೂರಿನ ತಿಲಕ ನಗರದ ವಾರ್ಡ್ 25ರ ವ್ಯಾಪ್ತಿಯಲ್ಲಿ 30 ಲಕ್ಷ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಎಲ್.ನಾಗೇಂದ್ರ ಸೋಮವಾರ ಗುದ್ದಲಿ ಪೂಜೆ ನೆರವೇರಿಸಿದರು. ಇಲ್ಲಿನ ಸಾಡೇ ಮೆಮೋರಿಯಲ್ ಚರ್ಚ್ (ಸಿಎಸ್‍ಐ ಚರ್ಚ್) ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಡುವೆ ಹಾದು ಹೋಗಿರುವ ರಸ್ತೆ (ಪುಲಕೇಶಿ ರಸ್ತೆಯ ಅಡ್ಡ ರಸ್ತೆ) ಅಭಿವೃದ್ಧಿ ಕಾಮ ಗಾರಿಗೆ ಶಾಸಕರು ಗುದ್ದಲಿ ಪೂಜೆ ನೆರವೇರಿಸಿದರು.

ಬಳಿಕ ಮಾತನಾಡಿದ ಶಾಸಕರು, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ 30 ಲಕ್ಷ ರೂ. ಅನುದಾನದಲ್ಲಿ 270 ಮೀ. ಉದ್ದಕ್ಕೆ ಈ ರಸ್ತೆ ಅಭಿವೃದ್ಧಿಗೊಳಿಸಲಾಗು ತ್ತಿದೆ. ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿ ವೃದ್ಧಿ ನಿಗಮದ (ಕೆಆರ್‍ಐಡಿಎಲ್) ವತಿಯಿಂದ ಕಾಮ ಗಾರಿ ನಡೆಯಲಿದೆ. ಇಲ್ಲಿನ ಸಾಕಷ್ಟು ರಸ್ತೆಗಳನ್ನು ಅಭಿ ವೃದ್ಧಿಗೊಳಿಸುವ ಅಗತ್ಯವಿದ್ದು, ಹಂತ ಹಂತವಾಗಿ ಅಭಿ ವೃದ್ಧಿಗೆ ಚಾಲನೆ ನೀಡಲಾಗುವುದು ಎಂದರು.

ಇದೇ ವೇಳೆ ಸ್ಥಳೀಯರು ಎಲ್.ನಾಗೇಂದ್ರ ಅವ ರನ್ನು ಸನ್ಮಾನಿಸಿದರು. ವಾರ್ಡಿನ ಪಾಲಿಕೆ ಸದಸ್ಯ ರಂಗಸ್ವಾಮಿ, ಉತ್ತರ ವಲಯ ಬಿಇಓ ಉದಯ ಕುಮಾರ್, ಕೆಆರ್‍ಐಡಿಎಲ್ ಸಹಾಯಕ ಅಭಿ ಯಂತರ ಸುರೇಶ್, ವಾರ್ಡಿನ ಬಿಜೆಪಿ ಮುಖಂಡ ರಾದ ವಿನಯ್, ಸ್ವಾಮಿ, ಮಹದೇವು, ಸಂತೋಷ್, ಮುಖಂಡರಾದ ನರಸಿಂಹ, ಮಹೇಶ್, ಪ್ರದೀಪ್ ಮತ್ತಿತರರು ಹಾಜರಿದ್ದರು.

ಕಾಂತರಾಜ ಉದ್ಯಾನ ಅಭಿವೃದ್ಧಿ: ವಾರ್ಡ್ 26ರ ವ್ಯಾಪ್ತಿಯ ಕಾಂತರಾಜ ಉದ್ಯಾನವನದ ಅಭಿವೃದ್ಧಿ ಕಾಮಗಾರಿಗೆ ಸೋಮವಾರ ಶಾಸಕ ಎಲ್.ನಾಗೇಂದ್ರ ಗುದ್ದಲಿ ಪೂಜೆ ನೆರವೇರಿಸಿದರು. ಮೈಸೂರು ನಗರಾ ಭಿವೃದ್ಧಿ ಪ್ರಾಧಿಕಾರದ (ಮುಡಾ) 16.5 ಲಕ್ಷ ರೂ. ವೆಚ್ಚದಲ್ಲಿ ಉದ್ಯಾನವದಲ್ಲಿ ಜೋಪಡಿ, ಮಾರ್ಗಗಳ ನಿರ್ಮಾಣ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿ ಗಳು ನಡೆಯಲಿವೆ. ವಾರ್ಡಿನ ಪಾಲಿಕೆ ಸದಸ್ಯೆ ತಸ್ಲೀಂ, ಮುಡಾ ಎಇಇ ಲಕ್ಷ್ಮೀಶ್, ಪಾಲಿಕೆ ವಲಯ-7ರ ವಲ ಯಾಧಿಕಾರಿ ಮಹೇಶ್ ಮತ್ತಿತರರು ಹಾಜರಿದ್ದರು.