ಒಳ ಚರಂಡಿ ಕಾಮಗಾರಿಗೆ ಶಾಸಕ ರಾಮದಾಸ್ ಗುದ್ದಲಿಪೂಜೆ

ಮೈಸೂರು: ಮೈಸೂ ರಿನ ವಿದ್ಯಾರಣ್ಯಪುರಂ ಅಕ್ಕಮಹಾದೇವಿ ರಸ್ತೆ ಪೆಟ್ರೋಲ್ ಬಂಕ್ ಎದುರು 50 ಲಕ್ಷ ರೂ. ಅಂದಾಜು ವೆಚ್ಚದ ಒಳಚರಂಡಿ ಕಾಮಗಾರಿಗೆ ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಶುಕ್ರವಾರ ಗುದ್ದಲಿಪೂಜೆ ನೆರವೇರಿಸಿದರು.

ಮೈಸೂರು ಮಹಾನಗರಪಾಲಿಕೆ ಒಳಚರಂಡಿ ವಿಭಾಗದ ವತಿಯಿಂದ ನಿರ್ಮಿಸಲಾಗುವ ಕಾಮ ಗಾರಿಯಲ್ಲಿ ವಿದ್ಯಾರಣ್ಯ ಪುರಂ ಅಕ್ಕಮಹಾದೇವಿ ರಸ್ತೆಯಿಂದ ಬಾಂಬೆ ಟಿಫಾನೀಸ್ ಮುಖಾಂತರ 30ನೇ ಅಡ್ಡ ರಸ್ತೆಯಲ್ಲಿರುವ ಮುಖ್ಯ ಒಳ ಚರಂಡಿ ಕೊಳವೆ ಮಾರ್ಗದವರೆಗೆ ಒಳಚರಂಡಿ ಕೊಳವೆ ಮಾರ್ಗವನ್ನು ಅಳವಡಿಸಲಾಗುವುದು ಎಂದು ಶಾಸಕ ಎಸ್.ಎ.ರಾಮದಾಸ್ ಈ ಸಂದರ್ಭದಲ್ಲಿ ತಿಳಿಸಿದರು.

ಕಳೆದ ಹಲವು ವರ್ಷಗಳಿಂದ ಈ ಪ್ರದೇಶದಲ್ಲಿ ಅಪಾರ್ಟ್‍ಮೆಂಟ್, ಕಲ್ಯಾಣ ಮಂಟಪಗಳು ಹೆಚ್ಚಾಗಿದ್ದು ಅಲ್ಲಿ ಹಿಂದೆ ನಿರ್ಮಿಸಿದ್ದ ಒಳ ಚರಂಡಿಗಳು ತುಂಬಿ ಹರಿಯುತ್ತಿದ್ದವು. ಮಳೆ ಬಂದರಂತೂ ಮಳೆ ನೀರು ಚರಂಡಿಯಿಂದ ಉಕ್ಕಿ ಹರಿಯುತ್ತಿತ್ತು. ಇದನ್ನು ಮನಗಂಡು ಇಲ್ಲಿ ಒಳಚರಂಡಿ ಕೊಳವೆ ಮಾರ್ಗ ಅಳವಡಿಸುವ ಕಾಮಗಾರಿಗೆ ಇಂದು ಚಾಲನೆ ನೀಡಲಾಗಿದೆ. ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸು ವಂತೆ ಶಾಸಕರು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ರಸ್ತೆಯ ಎರಡೂ ಕಡೆಯಿಂದ ಚಾಮುಂಡಿ ವನ ಮತ್ತು ರಿಂಗ್ ರಸ್ತೆ ಕಡೆಯಿಂದ ಚರಂಡಿ ಮತ್ತು ರಸ್ತೆಯನ್ನು ಆರು ಕೋಟಿ ರೂ. ಅಂದಾಜು ವೆಚ್ಚದಲ್ಲಿ ಪ್ರಾರಂಭಿಸಲಾಗಿದ್ದು, ಈ ಕಾಮಗಾರಿ ಶೀಘ್ರದಲ್ಲಿ ಆಗಲಿದೆ. ಮಳೆಗಾಲದಲ್ಲಿ ವಿದ್ಯಾರಣ್ಯ ಪುರಂ 28ರಿಂದ 32ನೇ ಕ್ರಾಸ್‍ವರೆಗೆ ಮಳೆ ನೀರಿನ ತೊಂದರೆ ಆಗುತ್ತಿದ್ದ ಹಿನ್ನೆಲೆಯಲ್ಲಿ ಈ ಮಹತ್ವದ ಕಾಮಗಾರಿ ಕೈಗೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ನಗರಪಾಲಿಕೆ ಸದಸ್ಯೆ ಶಾಂತಮ್ಮ ವಡಿವೇಲು, ಒಳಚರಂಡಿ ಎಇಇ ಶಿವಣ್ಣೇಗೌಡ, ಎಇ ಶಿವಣ್ಣ, ಗುತ್ತಿಗೆದಾರ ಬಿ. ನಾಗೇಗೌಡ, ಮುಖಂಡರಾದ ಕಲಿಯಮೂರ್ತಿ, ದೇವರಾಜೇಗೌಡ, ನಾಗೇಂದ್ರ, ಸುರೇಶ್, ಮುರು ಗೇಶ್, ರಾಜಣ್ಣ, ರಾಜು, ಪಾಪಣ್ಣ, ಆದಿ, ಗಿರೀಶ್ ಇನ್ನಿತರರು ಉಪಸ್ಥಿತರಿದ್ದರು.