ಹೈನುಗಾರಿಕೆ ಅವಲಂಬಿಸಲು ಶಾಸಕರ ಸಲಹೆ

ಗುಂಡ್ಲುಪೇಟೆ:  ‘ಉಪ ಕಸುಬಾದ ಹೈನುಗಾರಿಕೆ ಇತ್ತೀಚಿಗೆ ರೈತರಿಗೆ ಪ್ರಧಾನ ಕಸುಬಾಗಿ ಮಾರ್ಪಾ ಡಾಗುತ್ತಿದ್ದು, ಇದನ್ನು ರೈತರ ಅವಲಂಬಿಸಿ ಹೆಚ್ಚಿನ ಲಾಭ ಗಳಿಸಬೇಕು’ ಎಂದು ಶಾಸಕ ಸಿ.ಎಸ್.ನಿರಂಜನಕುಮಾರ್ ಸಲಹೆ ನೀಡಿದರು.
ತಾಲೂಕಿನ ಮಾದಾಪಟ್ಟಣ ಗ್ರಾಮದ ಹಾಲಿನ ಡೇರಿ ಆವರಣದಲ್ಲಿ ನೂತನ ವಾಗಿ ನಿರ್ಮಿಸಿರುವ ಹಾಲು ಶಿಥಿಲೀ ಕರಣ ಘಟಕ ಉದ್ಘಾಟಿಸಿ ಅವರು ಮಾತನಾಡಿದರು.

ತಾಲೂಕಿನಲ್ಲಿ ಸತತ ಮಳೆಯ ಕೊರತೆ ಯಿಂದ ಬೇಸಾಯ ಮಾಡಲಾಗದ ಹೆಚ್ಚಿನ ರೈತರು ಹೈನುಗಾರಿಕೆಯನ್ನೇ ಅವಲಂಬಿ ಸುವಂತಾಗಿದೆ. ಹೈನುಗಾರಿಕೆ ರೈತರ ಜೀವನ ಮಟ್ಟ ಸುಧಾರಿಸಲು ಕಾರಣವಾಗಿದೆ. ಗುಣ ಮಟ್ಟದ ಹಾಲಿಗೆ ಹೆಚ್ಚಿನ ಬೆಲೆ ದೊರಕು ತ್ತಿರುವುದರಿಂದ ಹೈನುಗಾರರು ಇದರ ಲಾಭ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಆಸಕ್ತ ರೈತರಿಗೆ ಮೈಮುಲ್ ವತಿ ಯಿಂದ ಉಚಿತ ತರಬೇತಿ ಹಾಗೂ ಮಾರ್ಗ ದರ್ಶನಗಳನ್ನು ನೀಡಲಾಗುತ್ತಿದೆ. ಬ್ಯಾಂಕ್ ಗಳಿಂದ ಸಾಲ ಪಡೆದು ಹೆಚ್ಚು ಹಾಲು ಕೊಡುವ ಮಿಶ್ರತಳಿಯ ಹಸುಗಳನ್ನು ಖರೀದಿಸಿದ ನಂತರ ಕಡ್ಡಾಯವಾಗಿ ಅವುಗಳಿಗೆ ವಿಮೆ ಮಾಡಿಸಿ ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿ ಪೌಷ್ಠಿಕ ಆಹಾರ ನೀಡಿದರೆ ಗುಣಮಟ್ಟದ ಹಾಲು ಉತ್ಪಾದನೆ ಸಾಧ್ಯವಾಗಿದ್ದು, ಈ ಹಾಲಿಗೆ ಹೆಚ್ಚಿನ ಬೆಲೆ ದೊರಕುವುದರಿಂದ ಹೈನುಗಾರರು ಇದರ ಲಾಭ ಪಡೆದು ಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಮಾದಾಪಟ್ಟಣ ವಿರಕ್ತ ಮಠಾಧ್ಯಕ್ಷರಾದ ಶ್ರೀ ಸದಾಶಿವ ಸ್ವಾಮೀಜಿ, ಚಾಮುಲ್ ನಿರ್ದೇಶಕರಾದ ಎಚ್.ಎಸ್.ನಂಜುಂಡಪ್ರಸಾದ್, ಡಿ.ಮಾದಪ್ಪ, ವ್ಯವಸ್ಥಾಪಕ ನಿರ್ದೇಶಕ ಆನಂದರಾಜು, ಡೇರಿ ಅಧ್ಯಕ್ಷ ಮಹೇಶ್, ಜಿಪಂ ಸದಸ್ಯ ಕೆ.ಎಸ್.ಮಹೇಶ್, ತಾಪಂ ಸದಸ್ಯ ಎಸ್.ಎಸ್. ಮಧುಶಂಕರ್, ಮಂಡಲಾಧ್ಯಕ್ಷ ಎನ್.ಮಲ್ಲೇಶ್, ಮುಖಂಡರಾದ ಶ್ರೀಕಂಠಪ್ಪ, ಕೆ.ಆರ್. ಲೋಕೇಶ್, ಮಹದೇವಪ್ರಸಾದ್, ಎಸ್.ಸಿ. ಮಂಜುನಾಥ್, ಮಲ್ಲಿಕಾರ್ಜುನ್, ರಾಜಶೇಖರಪ್ಪ ಇದ್ದರು.