ಮುಡಾ ವ್ಯಾಪ್ತಿಗಳ ಆಸ್ತಿ ತೆರಿಗೆ ಪಾವತಿಸಲು ನೂಕು ನುಗ್ಗಲು

ಮೈಸೂರು: ನಿವೇಶನ, ಮನೆಗಳ ಕಂದಾಯ ಪಾವತಿಸಲು ಮುಡಾ ಕಚೇರಿಯ ಸ್ಪಂದನಾ ಕೌಂಟರ್ ಹಾಗೂ ವಿಜಯಾ ಬ್ಯಾಂಕ್ ಮುಡಾ ಶಾಖೆಯಲ್ಲಿ ಆಸ್ತಿಗಳ ಮಾಲೀಕರು ಮುಗಿ ಬೀಳುತ್ತಿದ್ದಾರೆ. ವರ್ಷದ ಕಡೇ ತಿಂಗಳಾದ ಕಾರಣ ಜನರು ಮುಡಾ ವ್ಯಾಪ್ತಿಯ ತಮ್ಮ ಆಸ್ತಿಗಳ ತೆರಿಗೆ ಪಾವತಿಸಲು ಮುಂದಾ ಗಿದ್ದಾರೆ. ಈ ಹಿಂದಿನ ವರ್ಷದ ಕಂದಾಯ ಪಾವತಿ ರಶೀದಿ ತೋರಿಸಿ ಮುಡಾ ಕಚೇರಿ ಪ್ರವೇಶದ ಬಳಿ ಇರುವ 4 ಸ್ಪಂದನಾ ಕೌಂಟರ್‍ನಲ್ಲಿ ಪ್ರಸಕ್ತ ವರ್ಷದ ಕಂದಾಯಕ್ಕೆ ಚಲನ್ ಹಾಕಿಸಿಕೊಳ್ಳಬೇಕು.

ತಿಂಗಳ ಕಡೇ ವಾರವಾದ ಕಾರಣ ಚಲನ್ ಬರೆಸಿಕೊಳ್ಳಲು ನೂರಾರು ಮಂದಿ ಸ್ಪಂದನಾ ಕೌಂಟರ್ ಬಳಿ ಜಮಾ ಯಿಸಿದ್ದು, ಪಡೆದ ಚಲನ್ ಮೂಲಕ ಅದೇ ಮುಡಾ ಕಚೇರಿಯಲ್ಲಿರುವ ವಿಜಯಾ ಬ್ಯಾಂಕ್ ಶಾಖೆಯಲ್ಲಿ ಹಣ ಪಾವತಿಸಲು ಸಾಲಾಗಿ ನಿಲ್ಲುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಬೆಳಿಗ್ಗೆ 10ರಿಂದ ಸಂಜೆ 4 ಗಂಟೆವರೆಗೂ ಚಲನ್ ಪಡೆಯಲು ಹಾಗೂ ಹಣ ಪಾವತಿಸಲು ಜನರ ನೂಕು-ನುಗ್ಗಲು ಉಂಟಾಗಿದ್ದು, ಮುಡಾ ಹಾಗೂ ಬ್ಯಾಂಕ್‍ಗಳಲ್ಲಿ ಹೆಚ್ಚು ವರಿ ಕೌಂಟರ್‍ಗಳನ್ನು ತೆರೆಯ ಲಾಗಿದೆ ಎಂದು ಮುಡಾ ಆಯುಕ್ತ ಪಿ.ಎಸ್. ಕಾಂತರಾಜು ತಿಳಿಸಿದ್ದಾರೆ.

ಏಪ್ರಿಲ್ ಹಾಗೂ ಮೇ ಮಾಹೆಯಲ್ಲಿ ಸಹಜವಾಗಿ ಜನರು ಕಂದಾಯ ಪಾವ ತಿಸಲು ಬರುವುದರಿಂದ ನೂಕು-ನುಗ್ಗಲು ಉಂಟಾಗುತ್ತದೆ. ನಗರಾಭಿವೃದ್ಧಿ ಕಾಯ್ದೆ ಯಾದ್ದರಿಂದ ನಾವು ಇದರಲ್ಲಿ ಯಾವುದೇ ವಿನಾಯ್ತಿ ಇಲ್ಲವೆ ರಿಯಾ ಯಿತಿ ನೀಡಲು ಅವಕಾಶವಿಲ್ಲ ಎಂದು ಅವರು ತಿಳಿಸಿದ್ದಾರೆ.