ಕನಕಗಿರಿಯಲ್ಲಿ ನಡೆದ ಮುಕುಟ ಸಪ್ತಮೀ ಮಹೋತ್ಸವ

ಚಾಮರಾಜನಗರ:  ತಾಲೂಕಿನ ಪ್ರಸಿದ್ಧ ಜೈನ ಕ್ಷೇತ್ರ ಕನಕಗಿರಿಯಲ್ಲಿ ನಿರ್ವಾಣ ಕಲ್ಯಾಣ ಮಹೋತ್ಸದ ಪ್ರಯಕ್ತ ಮುಕುಟ ಸಪ್ತಮೀ ಮಹೋತ್ಸವ ಹಾಗೂ ಮೋಕ್ಷ ಕಲ್ಯಾಣ ಪೂಜೆಯು ಕನಕಗಿರಿಯ ಪರಮಪೂಜ್ಯಾ ಭುವನಕೀರ್ತಿಭಟ್ಟಾರಕ ಸ್ವಾಮೀಜಿ ಸಾನಿಧ್ಯದಲ್ಲಿ ನಡೆಯಿತು.

ಪ್ರಾತಃಕಾಲ ಆಗ್ರೋಧಕ ಆನಯನ ದಿಂದ ಪ್ರಾರಂಭವಾಗಿ ಭಗವಾನ್ ಪಾಶ್ರ್ವ ನಾಥ ತೀರ್ಥಂಕರ ಮೂಲ ಪ್ರತಿಮೆಗೆ ಅಭಿಷೇಕ, ಮಹಾಪೂಜೆ, ಅಷ್ಟ ವಿದಾರ್ಚನೆ ಪೂಜೆ. ಮಾತೆ ಶ್ರೀ ಪದ್ಮಾವತಿ ಅಮ್ಮನ ವರು, ಶ್ರೀ ಜ್ವಾಲಾಮಾಲಿನಿ ಅಮ್ಮನವರಿಗೆ ಹಾಗೂ ಕೂಷ್ಯಾಂಡಿನಿ ಅಮ್ಮನವರಿಗೆ ಮತ್ತು ಶ್ರೀ ಬ್ರಹ್ಮದೇವರಿಗೆ ವಿಶೇಷ ಆಲಂಕಾರ ಗಳೊಂದಿಗೆ ಷೋಢಶೋಪಚಾರ ಪೂಜೆ ಮತ್ತು ಪ್ರವಚನ ನಡೆಯಿತು.

ಕನಕಗಿರಿ ಆತಿಶಯ ಮಹೋತ್ಸವ 2017 ರಲ್ಲಿ ಎರಡು ಸಾವಿರ ವಿದ್ಯಾರ್ಥಿಗಳಿಂದ ರೂಪಿಸಲ್ಪಟ್ಟ ಪೂಜ್ಯಾ ಪಾದಾಚಾರ್ಯರ ಪಾದ ಗಿನ್ನಿಸ್ ದಾಖಲೆಯಲ್ಲಿ ಸೇರಿದ ಪುಸ್ತಕ ವನ್ನು ಶ್ರೀ ಭುವನ ಕೀರ್ತಿ ಭಟ್ಟಾರಕ ಸ್ವಾಮಿ ಗಳವರು ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸ್ವಾಮೀಜಿ ಅವರು, ಕನಕಗಿರಿಯು ಜೈನ ಧರ್ಮದ ಪ್ರವಿತ್ರ ಭೂಮಿಯಾಗಿದ್ದು, ಮಹಾವೀರರು ಧರ್ಮೋಪದೇಶ ನೀಡಿದ ಸಮವಸರಣ ಭೂಮಿಯಾಗಿದೆ. 23ನೇ ತೀರ್ಥಂಕರ ಪಾಶ್ರ್ವ ನಾಥಸ್ವಾಮಿಯು ನೆಲೆಸಿದ ತಪೋಭೂಮಿಯಾ ಗಿದ್ದು, ಕಳೆದ ಒಂದು ವರ್ಷದಲ್ಲಿ ಎರಡು ಲಕ್ಷಕ್ಕೂ ಅಧಿಕ ಜನರು ಬೇಟಿ ನೀಡಿ ಇಲ್ಲಿನ ಜೈನ ಪರಂಪರೆ ಇತಿಹಾಸದ ಬಗ್ಗೆ ತಿಳಿದು ಕೊಂಡಿದ್ದಾರೆ ಎಂದರು.

ಮೈಸೂರಿನ ಜೈನ ಎಜುಕೇಷನ್ ಟ್ರಸ್ಟ್ಟ್‍ವತಿಯಿಂದ 2017-18ನೇ ಸಾಲಿನ ಎಸ್‍ಎಸ್‍ಎಲ್‍ಸಿ ಹಾಗೂ ಪಿಯುಸಿಯಲ್ಲಿ ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಲಾಯಿತು ಹಾಗೂ ಸ್ವಾಧ್ಯಾಯ ಹೇಗಿದೆ. ಹೇಗಿರಬೇಕು ಎಂಬುದರ ಬಗ್ಗೆ ನಡೆದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತ ರಾದವರಿಗೆ ಸ್ವಾಮೀಜಿಗಳು ಗೌರವಿಸಿದರು.

ಕಾರ್ಯಕ್ರಮದಲ್ಲಿ ಚಾಮರಾಜನಗರ ಜೈನ ಸಂಘದ ಅಧ್ಯಕ್ಷ ವರ್ಧಮಾನಯ್ಯ, ಮಲೆಯೂರು ಜೈನ ಸಂಘದ ಅಧ್ಯಕ್ಷ ನಾಗ ರಾಜು, ಡಾ.ನೀರಜಾ ನಾಗೇಂದ್ರ ಕುಮಾರ್, ಕಾರ್ಯಕ್ರಮದ ಸಂಯೋಜಕ ಪದ್ಮಾರಾಜ್, ಭ್ರಮೇಶ್, ಸೇರಿದಂತೆ ರಾಜ್ಯಾದ್ಯಂತ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿದ ಸಮುದಾಯದ ಬಂಧುಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಪುಸ್ತಕ ಓದಿನ ಅಭಿರುಚಿ ಬೆಳೆಸಿಕೊಳ್ಳಲು ವಿದ್ಯಾರ್ಥಿಗಳಿಗೆ ಕರೆ
ಚಾಮರಾಜನಗರ: ಪ್ರತಿಯೊಬ್ಬ ವಿದ್ಯಾರ್ಥಿಯೂ ಪುಸ್ತಕಗಳನ್ನು ಓದುವ ಅಭಿರುಚಿ ಬೆಳೆಸಿಕೊಳ್ಳಬೇಕು ಎಂದು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ.ಎಚ್.ಎಸ್. ಪ್ರೇಮಲತಾ ಕರೆ ನೀಡಿದರು.

ನಗರದ ಜೆಎಸ್‍ಎಸ್ ಮಹಿಳಾ ಕಾಲೇಜಿನ ಕನ್ನಡ ವಿಭಾಗ, ಜಾಣ ಜಾಣೆಯರ ಬಳಗ, ಕನ್ನಡ ಪುಸ್ತಕ ಪ್ರಾಧಿಕಾರದ ಪ್ರಾಯೋಜಕತ್ವದಲ್ಲಿ ಕಾಲೇಜಿನ ಸೆಮಿನಾರ್ ಹಾಲ್‍ನಲ್ಲಿ ಆಯೋಜಿಸಿದ್ದ ನನ್ನ ಮೆಚ್ಚಿನ ಪುಸ್ತಕ ವಿದ್ಯಾರ್ಥಿಗಳ ಅಭಿಪ್ರಾಯ ಮಂಡನೆ ಸ್ಪರ್ಧೆ ಕಾರ್ಯಕ್ರಮದಲ್ಲಿ ಅವರು ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.

ಇಂದಿನ ಆಧುನಿಕ ಶೈಲಿಯ ತಂತ್ರಜ್ಞಾನಗಳ ಬಳಕೆಯಿಂದ ಯುವ ಸಮು ದಾಯದಲ್ಲಿ ಪುಸ್ತಕಗಳನ್ನು ಓದುವ ಅಭಿರುಚಿ ಕಡಿಮೆ ಆಗುತ್ತಿದೆ. ಇದು ಮುಂದುವರೆದರೆ ಅಪಾಯ ಕಟ್ಟಿಟ್ಟ ಬುತ್ತಿ. ಹಾಗಾಗಿ, ಪ್ರತಿಯೊಬ್ಬ ವಿದ್ಯಾರ್ಥಿ ಯು ಓದುವ ಅಭಿರುಚಿ ಬೆಳೆಸಿಕೊಳ್ಳಬೇಕು. ಇದರಿಂದ ಮಾನಸಿಕ ಒತ್ತಡದ ನಿವಾರಣೆ ಆಗುವುದರ ಜೊತೆಗೆ ವಿವೇಕ ಬೆಳೆಯುತ್ತದೆ ಎಂದು ವಿದ್ಯಾರ್ಥಿನಿ ಯರಿಗೆ ಸಲಹೆ ನೀಡಿದರು.

ಯುವ ಸಮುದಾಯ ಹಾಗೂ ವಿದ್ಯಾರ್ಥಿಗಳು ಮೊಬೈಲ್ ಬಳಕೆಗೆ ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ. ಆದರೆ, ಓದಿನ ಬಗ್ಗೆ ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ. ಇದು ಅಪಾಯ. ಇದಕ್ಕೆ ಕಡಿವಾಣ ಹಾಕಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿನಿಯರು ವಿಷಯವಾರು ಅಭಿಪ್ರಾಯ ಮಂಡಿಸಿದರು. ಕಾಲೇಜಿನ ಪ್ರಾಂಶುಪಾಲ ಪ್ರೊ.ಎ.ಜೆ. ಶಿವಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ವಿಭಾಗದ ಮುಖ್ಯಸ್ಥ ಬಿ.ಬಿ.ವರಪ್ರಸಾದ್ ಹಾಜರಿದ್ದರು.