ನಗರಸಭೆ ಜೆಇ ಎಸಿಬಿ ಬಲೆಗೆ

ಚಾಮರಾಜನಗರ:  ಕಾಮಗಾರಿ ನಡೆಸಿದ ಬಿಲ್‍ಗೆ ಮಂಜೂರಾತಿ ನೀಡಲು 75 ಸಾವಿರ ರೂ. ಲಂಚ ಪಡೆಯುತ್ತಿದ್ದ ನಗರಸಭೆ ಕಿರಿಯ ಇಂಜಿನಿಯರ್ ಓರ್ವರು ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ದ ಪೆÇಲೀಸರ ಬಲೆಗೆ ಸಿಕ್ಕಿಬಿದ್ದಿದ್ದಾರೆ.

ಚಾಮರಾಜನಗರ ನಗರಸಭೆಯ ಕಿರಿಯ ಇಂಜಿನಿ ಯರ್ ಬಸವರಾಜು ಸಿಕ್ಕಿಬಿದ್ದವರಾಗಿದ್ದು, ಇವರಿಗೆ ಸಹಾಯ ಮಾಡಿದ ಆರೋಪದ ಮೇಲೆ ಶಿವಕುಮಾರ್ ಎಂಬ ಖಾಸಗಿ ವ್ಯಕ್ತಿಯ ಮೇಲೆಯೂ ಪ್ರಕರಣ ದಾಖಲಿಸಲಾಗಿದೆ. ಈರ್ವರನ್ನೂ ಪೆÇಲೀಸರು ವಶಕ್ಕೆ ಪಡೆದಿದ್ದು, ಮುಂದಿನ ಕ್ರಮ ಜರುಗಿಸಿದ್ದಾರೆ.

ನಗರಸಭೆ ಜೂನಿಯರ್ ಇಂಜಿನಿಯರ್ ಆಗಿರುವ ಬಸವರಾಜು ಅವರು ನಗರದ ಶಿವಕುಮಾರ್ ಎಂಬ ಗುತ್ತಿಗೆದಾರರಿಗೆ ಕಾಮಗಾರಿ ನಡೆಸಿದ ಬಿಲ್ ಮಂಜೂರು ಮಾಡಲು 75 ಸಾವಿರ ಲಂಚಕ್ಕಾಗಿ ಸತಾಯಿಸಿದ್ದರು. ಇದರಿಂದ ಬೇಸತ್ತ ಶಿವಕುಮಾರ್ ಎಸಿಬಿ ಪೆÇಲೀಸರಿಗೆ ದೂರು ನೀಡಿದ್ದರು. ಸೋಮವಾರ ಮಧ್ಯಾಹ್ನ ನಗರಸಭೆ ಕಚೇರಿಯಲ್ಲಿ ಲಂಚದ ಹಣ ಪಡೆಯುತ್ತಿದ್ದಾಗ ಬಸವರಾಜು ಹಾಗೂ ಶಿವಕುಮಾರ್ ಎಸಿಬಿ ಪೆÇಲೀಸರ ಬಲೆಗೆ ಬಿದ್ದರು. ಎಸಿಬಿ ಎಸ್ಪಿ ಶೇಖರ್ ಅವರ ಮಾರ್ಗ ದರ್ಶನದಲ್ಲಿ ಡಿವೈಎಸ್ಪಿ ಮೋಹನ್ ಮತ್ತು ಸಿಬ್ಬಂದಿ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.