ಚಾಮರಾಜನಗರ: ಕಾಮಗಾರಿ ನಡೆಸಿದ ಬಿಲ್ಗೆ ಮಂಜೂರಾತಿ ನೀಡಲು 75 ಸಾವಿರ ರೂ. ಲಂಚ ಪಡೆಯುತ್ತಿದ್ದ ನಗರಸಭೆ ಕಿರಿಯ ಇಂಜಿನಿಯರ್ ಓರ್ವರು ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ದ ಪೆÇಲೀಸರ ಬಲೆಗೆ ಸಿಕ್ಕಿಬಿದ್ದಿದ್ದಾರೆ. ಚಾಮರಾಜನಗರ ನಗರಸಭೆಯ ಕಿರಿಯ ಇಂಜಿನಿ ಯರ್ ಬಸವರಾಜು ಸಿಕ್ಕಿಬಿದ್ದವರಾಗಿದ್ದು, ಇವರಿಗೆ ಸಹಾಯ ಮಾಡಿದ ಆರೋಪದ ಮೇಲೆ ಶಿವಕುಮಾರ್ ಎಂಬ ಖಾಸಗಿ ವ್ಯಕ್ತಿಯ ಮೇಲೆಯೂ ಪ್ರಕರಣ ದಾಖಲಿಸಲಾಗಿದೆ. ಈರ್ವರನ್ನೂ ಪೆÇಲೀಸರು ವಶಕ್ಕೆ ಪಡೆದಿದ್ದು, ಮುಂದಿನ ಕ್ರಮ ಜರುಗಿಸಿದ್ದಾರೆ. ನಗರಸಭೆ ಜೂನಿಯರ್ ಇಂಜಿನಿಯರ್ ಆಗಿರುವ ಬಸವರಾಜು ಅವರು ನಗರದ ಶಿವಕುಮಾರ್…