ಸಂಗೀತ ಥೆರಪಿಯಿಂದ ರೋಗದ ತೀವ್ರತೆ ಕಡಿಮೆಯಾಗುತ್ತದೆ

ಮೈಸೂರು,ಜು.28(ಎಸ್‍ಪಿಎನ್)-ಕಲಾವಿದನನ್ನು ಸಾಂಸ್ಕøತಿಕ ಲೋಕದಲ್ಲಿ ಜನರು ಗುರುತಿಸಬೇಕಾದರೆ, ಸಮಾಜದ ಕಷ್ಟಗಳನ್ನು ಕಲಾವಿದ ಆಸ್ವಾದಿಸಿದಾಗ ಮಾತ್ರ ಸಾಧ್ಯ ಎಂದು ರಂಗಾಯಣ ನಿವೃತ್ತ ಕಲಾ ವಿದ ಮೈಮ್ ರಮೇಶ್ ಅಭಿಪ್ರಾಯಪಟ್ಟರು.

ಮೈಸೂರು ಜಗನ್ಮೋಹನ ಅರಮನೆ ಯಲ್ಲಿ ದಕ್ಷಿಣ ಕನ್ನಡ ವೈದ್ಯರ ಸಾಂಸ್ಕøತಿಕ ಸಂಘದ ವತಿಯಿಂದ ಆಯೋಜಿಸಿದ್ದ `ನೃತ್ಯ ಮತ್ತು ಸಂಗೀತೋತ್ಸವ’ ಕಾರ್ಯ ಕ್ರಮವನ್ನು ಉದ್ಘಾಟಿಸಿ, ಅವರು ಮಾತ ನಾಡಿದರು. ಸಂಗೀತ ಮತ್ತು ನೃತ್ಯದಿಂದ ರೋಗಿಯ ಮನೋಸ್ಥೈರ್ಯವನ್ನು ಹೆಚ್ಚಿಸಬಹುದು. ರೋಗಿಗಳಿಗೆ ಸಂಗೀತ ದಿಂದ ಥೆರಪಿ ನೀಡಿದರೆ ಶೇ.30 ರಷ್ಟು ರೋಗದ ತೀವ್ರತೆ ಕಡಿಮೆಯಾಗಲಿದೆ ಎಂಬ ಅಂಶವನ್ನು ತಜ್ಞರೇ ಒಪ್ಪಿಕೊಳ್ಳು ತ್ತಾರೆ. ಆದ್ದರಿಂದ ರೋಗಿಗಳಿಗೆ ಸಾಧ್ಯ ವಾದಷ್ಟು ಸಂಗೀತ ಥೆರಪಿ ನೀಡಬೇಕು ಎಂದು ಸಲಹೆ ನೀಡಿದರು.

ಇಂದಿನ ಯುವ ಪೀಳಿಗೆಯನ್ನು ಟಿವಿ ಕಾರ್ಯಕ್ರಮಗಳು ದಾರಿ ತಪ್ಪಿಸುತ್ತಿವೆ. ಅದರಲ್ಲೂ ರಿಯಾಲಿಟಿ ಶೋ, ಧಾರಾವಾಹಿ ಸೇರಿದಂತೆ ಇತರೆ ಕಾರ್ಯ ಕ್ರಮಗಳು ಜನರ ದಾರಿ ತಪ್ಪಿಸುತ್ತಿವೆ. ಇದು ಮಕ್ಕಳ ಮನಸ್ಸಿನ ಮೇಲೆ ಸಾಕಷ್ಟು ಪರಿಣಾಮ ಬೀರುತ್ತಿದೆ. ನಾನು ಸಾಮಾನ್ಯ ಕುಟುಂಬದಿಂದ ಬಂದ ವನು. ನನ್ನ ತಂದೆ ಎಡಪಂಥೀಯ ಸಿದ್ಧಾಂತ ವನ್ನು ಅನುಸರಿಸುತ್ತಿದ್ದರು. ಇದರ ಪರಿಣಾಮ ದಿಂದ ನಾನು ರಂಗಭೂಮಿಯಲ್ಲಿ ಆಸಕ್ತಿ ತಳೆಯಲು ಕಾರಣವಾಯಿತು ಎಂದು ಮೈಮ್ ರಮೇಶ್ ರಂಗಭೂಮಿ ತೊಡಗಿಸಿಕೊಂಡಿದ್ದನ್ನು ನೆನೆದರು.

ಶೇ.90 ರಷ್ಟು ಅಂಕಗಳಿಸಿದವರೆಲ್ಲಾ ಇಂಜಿನಿಯರ್, ಡಾಕ್ಟರ್ ಆಗಬೇಕು ಎಂದು ಬಯಸಿದರೆ, ಇತರೆ ವಿಭಾಗದಲ್ಲಿ ಕೆಲಸಮಾಡುವವರ್ಯಾರು? ಆದ್ದರಿಂದ ಯುವ ಪೀಳಿಗೆ ಮನಸ್ಸಿನಲ್ಲಿರುವ ಸಾಮೂಹಿಕ ಭ್ರಮೆಯಿಂದ ಹೊರತರುವ ಕೆಲಸ ವಾಗಬೇಕಿದೆ. ಈ ಕೆಲಸ ರಂಗ ಭೂಮಿಯಿಂದ ಸಾಧ್ಯವಿದೆ ಎಂದರು. ದಕ್ಷಿಣ ಕನ್ನಡ ಜಿಲ್ಲೆಯ 300ಕ್ಕೂ ಹೆಚ್ಚು ಪ್ರತಿಭಾವಂತ ವೈದ್ಯರು ಮೈಸೂರಿನಲ್ಲಿ ನೆಲೆಸಿದ್ದಾರೆ. ಹಲವು ವರ್ಷಗಳ ಹಿಂದೆ ಅವರೆಲ್ಲಾ ಒಂದೆಡೆ ಸೇರಿ ದಕ್ಷಿಣ ಕನ್ನಡ ವೈದ್ಯರ ಸಾಂಸ್ಕøತಿಕ ಸಂಘ ಕಟ್ಟಿಕೊಂಡು ಸಾಂಸ್ಕøತಿಕ ಚಟುವಟಿಕೆಗಳನ್ನು ಆಯೋ ಜಿಸಿ, ಸುಂದರ ಸಮಾಜ ನಿರ್ಮಾಣ ಮಾಡಲು ತಮ್ಮದೇ ಕೊಡುಗೆ ನೀಡುತ್ತಿದ್ದಾರೆ. ಇದ ರರ್ಥ ಕಲೆಯ ಪ್ರಕಾರಗಳು ವಿಸ್ತಾರವಾ ಗುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಇಂದಿನ ಪೀಳಿಗೆ ವೃತ್ತಿ ಜೊತೆಗೆ ಸಾಧಕರ ಜೀವನ ಚರಿತ್ರೆ ತಿಳಿದುಕೊಳ್ಳ ಬೇಕು. ಮಹಾತ್ಮ ಗಾಂಧೀಜಿ, ಬಸವಣ್ಣ ಹಾಗೂ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಸಾಧನೆಯ ಹಾದಿಯನ್ನು ತಿಳಿದುಕೊಳ್ಳಬೇಕು. ಇದು ರಂಗಭೂಮಿ ಮೂಲಕ ಯುವಕರಿಗೆ ತಿಳಿಸುವುದು ಸುಲಭ ಮಾರ್ಗ ಎಂದರು.

ನಾನು ಡಿಪ್ಲೋಮಾ ಪದವಿ ಮುಗಿಸಿ, ಕೆಲಸವಿಲ್ಲದೆ ಅಲೆಯುತ್ತಿದ್ದಾಗ ನಮ್ಮ ಸಹೋದರರೆಲ್ಲಾ ನನ್ನನ್ನು ಕೆಲಸಕ್ಕೆ ಸೇರುವಂತೆ ಒತ್ತಡ ತರುತ್ತಿದ್ದರು. ನಾನು ಮಾತ್ರ ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಯಕ್ಷಗಾನದಲ್ಲಿ ತೊಡಗಿಸಿಕೊಂಡು ಮುಂದೆ ರಂಗಾಯಣದಲ್ಲಿ ಪೂರ್ಣ ಪ್ರಮಾಣದ ಕಲಾವಿದನಾಗಿ ಮೂಕಾಭಿ ನಯದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವಂತಾಯಿತು ಕಲಾಕ್ಷೇತ್ರದ ಹಾದಿಯನ್ನು ವಿವರಿಸಿದರು.

ಇದೇ ವೇಳೆ ಸಂಗೀತ ಮತ್ತು ನೃತ್ಯ ಕ್ಷೇತ್ರದ ಕಲಾವಿದರಾದ ಗಂಗಾಧರ ಶೆಟ್ಟಿ, ಸ್ಪರ್ಶಾ ಶಣೈ, ಶ್ರೀ ಸನಿಧಿ ರಕ್ಷಾ ಜಿ.ರಾವ್, ದಿಕ್ಷಾ ಜಿ.ರಾವ್, ಡಾ.ಯು.ಜಿ.ಶಣೈ, ಡಾ.ಅಮೃತಾ ಉಪಾಧ್ಯಾಯ, ಡಾ.ಪ್ರೀತಿ ಪ್ರಭು, ಡಾ.ವೇದಾಂತ,ಸೂಕ್ತಿ, ಡಾ.ಯು. ಗಣೇಶ್‍ರಾವ್ ಅವರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ದಕ್ಷಿಣ ಕನ್ನಡ ವೈದ್ಯರ ಸಾಂಸ್ಕøತಿಕ ಸಂಘದ ಅಧ್ಯಕ್ಷ ಡಾ. ಉಮೇಶ್, ಕಾಮತ್, ಡಾ.ಎಂ.ಕೆ.ಶಿವ ಪ್ರಕಾಶ್, ಡಾ.ಯು.ಗಣೇಶ್‍ರಾವ್, ಡಾ.ಚಂದ್ರಶೇಖರ್ ಭಟ್, ಡಾ.ಸಂಜಯ್ ಪೈ, ಡಾ.ಪ್ರಕಾಶ್ ಕೆ.ಪ್ರಭು, ಡಾ.ಕೆ. ಆರ್. ಕಾಮತ್, ಡಾ.ಸತ್ಯಮೂರ್ತಿ ಭಟ್, ಡಾ.ಮೋಹನ್ ದಾಸ್ ಭಟ್, ಡಾ.ಶ್ರೀಧರ ಪುರಾಣಿಕ್, ಡಾ.ಎನ್.ಚಂದ್ರಶೇಖರ್, ಡಾ.ಎಸ್.ಎಸ್. ಮೋಹನ್, ಡಾ.ಪಿ.ಪ್ರಸನ್ನ ಉಪಸ್ಥಿತರಿದ್ದರು.