ಜ.19ರಂದು ಮೈಸೂರಲ್ಲಿ ಮೈ ಬಿಜ್ ಬಿಸಿನೆಸ್ ಎಕ್ಸ್‍ಪೋ

ಮೈಸೂರು,ಜ.16(ಆರ್‍ಕೆಬಿ)-ಬಿಎನ್‍ಐ ಮೈಸೂರು ಆಶ್ರಯದಲ್ಲಿ ಜ.19ರಂದು ಬನ್ನಿಮಂಟಪದ ಸೇಂಟ್ ಫಿಲೋಮಿನಾ ಸಭಾಂಗಣದಲ್ಲಿ ಮೈಸೂರು ವಿಭಾಗೀಯ `ಮೈ ಬಿಜ್-2020 ಬಿಸಿನೆಸ್ ಎಕ್ಸ್‍ಪೋ’ ಆಯೋಜಿಸಲಾಗಿದೆ ಎಂದು ಗ್ಲೋಬಲ್ ಮಾರ್ಕೆಟ್ ಟ್ರೈನರ್ ಮುರಳಿ ಶ್ರೀನಿವಾಸನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಅಂದು ಬೆಳಿಗ್ಗೆ 9 ಗಂಟೆಗೆ ಸಂಸದ ಪ್ರತಾಪಸಿಂಹ ಮತ್ತು ಎಕ್ಸೆಲ್ ಸಾಫ್ಟ್ ಟೆಕ್ನಾಲ ಜೀಸ್‍ನ ಸಂಸ್ಥಾಪಕ ಹಾಗೂ ವ್ಯವಸ್ಥಾಪಕ ನಿರ್ದೇಶಕ ಡಿ.ಸುಧನ್ವ `ಮೈ ಬಿಜ್ ಬಿಸಿನೆಸ್ ಎಕ್ಸ್‍ಪೋ’ಗೆ ಚಾಲನೆ ನೀಡಲಿದ್ದಾರೆ ಎಂದರು. ಭಾರತ ಮತ್ತು ವಿಶ್ವದಾದ್ಯಂತ ಅವಕಾಶಗಳನ್ನು ಅನ್ವೇಷಿಸಲು, ವಾಣಿಜ್ಯ ಸಂಸ್ಥೆಗಳ ಮಾಲೀಕರಿಗೆ ತಮ್ಮ ಉತ್ಪನ್ನಗಳು ಮತ್ತು ಸೇವೆಗಳ ಬಗ್ಗೆ ಸಾರ್ವಜನಿಕರಿಗೆ ತಿಳಿಸಿಕೊಡುವುದಕ್ಕೆ ಇದೊಂದು ಉತ್ತಮ ವೇದಿಕೆಯಾಗಲಿದೆ. ಸಾರ್ವಜನಿಕರಿಗೆ ಇದರಲ್ಲಿ ಭಾಗವಹಿಸಲು ಯಾವುದೇ ಶುಲ್ಕವಿಲ್ಲ. ದೇಶದ ವಿವಿಧ ಭಾಗಗಳಿಂದ 2000ಕ್ಕೂ ಹೆಚ್ಚು ಬಿಎನ್‍ಐ ನಿರ್ದೇಶಕರು, ಸದಸ್ಯರು ಭಾಗವಹಿಸಲಿದ್ದಾರೆ ಎಂದರು. ಅಂದು ಬೆಳಿಗ್ಗೆ 10 ಗಂಟೆಗೆ ಬಿಎನ್‍ಐ ಮೈಸೂರು ವಿಭಾ ಗದ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಪ್ರಾದೇಶಿಕ ನಿರ್ದೇಶಕಿ ರೇಣು ಶ್ರೀನಿವಾಸನ್, ತರಬೇತುದಾರ ಅಬ್ದುಲ್ ಖಾದರ್, ನಿರ್ದೇಶಕರಾದ ವಿಶಾಲ್ ಗುಪ್ತ, ಶಿವಕುಮಾರ್ ಉಪಸ್ಥಿತರಿದ್ದರು.