ಮೈಸೂರು, ಚಾ.ನಗರ ಕಾಂಗ್ರೆಸ್ ಬೂತ್ ಏಜೆಂಟರ ನೇಮಕ: ಧರ್ಮಸೇನಾಗೆ ಜವಾಬ್ದಾರಿ

ಮೈಸೂರು, ಅ.22(ಎಂಟಿವೈ)-ಚುನಾವಣಾ ಆಯೋ ಗದ ಸೂಚನೆ ಮೇರೆಗೆ ಮೈಸೂರು ಮತ್ತು ಚಾಮ ರಾಜನಗರ ಜಿಲ್ಲೆಗಳ 3901 ಮತಗಟ್ಟೆಗೆ ಕಾಂಗ್ರೆಸ್ ನಿಂದ ಅಧಿಕೃತ ಬೂತ್ ಏಜೆಂಟರನ್ನು (ಬಿಎಲ್‍ಒ-2) ನಿಯೋಜಿಸಲು ಕೆಪಿಸಿಸಿ ನನಗೆ ಜವಾಬ್ದಾರಿ ನೀಡಿದೆ. ಈ ಏಜೆಂಟರ ನೇಮಕ ಪ್ರಕ್ರಿಯೆ 15 ದಿನದೊಳಗೆ ಪೂರ್ಣಗೊಳ್ಳಲಿದೆ ಎಂದು ವಿಧಾನ ಪರಿಷತ್ ಸದಸ್ಯ ಆರ್.ಧರ್ಮಸೇನ ತಿಳಿಸಿದರು.

ಮೈಸೂರಿನ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿದ ಅವರು, ಮುಂಬರುವ ಚುನಾ ವಣೆಗಳಲ್ಲಿ ವಿವಿಧ ರಾಜಕೀಯ ಪಕ್ಷಗಳಿಂದ ಎಲ್ಲಾ ಮತಗಟ್ಟೆಗಳಿಗೆ ಅಧಿಕೃತವಾಗಿ ಏಜೆಂಟರನ್ನು ನಿಯೋಜಿ ಸುವ ಸಂಬಂಧ ಕೇಂದ್ರ ಚುನಾವಣಾ ಆಯೋಗ ಹೊಸ ನಿಯಮ ಜಾರಿಗೆ ತಂದಿದೆ. ಈವರೆಗೂ ಮತಗಟ್ಟೆಗಳಲ್ಲಿ ರಾಜಕೀಯ ಪಕ್ಷಗಳು ತಮ್ಮಷ್ಟಕ್ಕೇ ಏಜೆಂಟರನ್ನು ನೇಮಿ ಸುತ್ತಿದ್ದವು. ಮುಂದಿನ ದಿನಗಳಲ್ಲಿ ಎಲ್ಲಾ ಚುನಾವಣೆ ಗಳಲ್ಲೂ ಆಯೋಗದಿಂದ ಅನುಮತಿ ಪಡೆದು ಅಧಿಕೃತ ಏಜೆಂಟರನ್ನೇ ನಿಯೋಜಿಸುವುದು ಕಡ್ಡಾಯ ವಾಗಲಿದೆ ಎಂದರು. ಎರಡೂ ಜಿಲ್ಲೆಗಳ ಬೂತ್‍ಮಟ್ಟದ ಮುಖಂ ಡರು, ಸ್ಥಳೀಯ ಜನಪ್ರತಿನಿಧಿ ಗಳೊಂದಿಗೆ ಸಮಾಲೋಚಿಸಿ ಮತಗಟ್ಟೆ ಏಜೆಂಟರನ್ನು ನೇಮಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದರು.

ಈ ಹಿಂದೆ ನಡೆದಿದ್ದ ಹಲವು ಚುನಾವಣೆ ವೇಳೆ ಏಜೆಂಟ್‍ಗಳ ದಿಢೀರ್ ಬದಲಾವಣೆ, ಏಜೆಂಟ್‍ಗಳ ಖರೀದಿ ಸೇರಿ ದಂತೆ ಚುನಾವಣಾ ಅಕ್ರಮಗಳಿಗೆ ಸಂಬಂಧಿಸಿ ಆಯೋ ಗಕ್ಕೆ ಸಾಕಷ್ಟು ದೂರು ಸಲ್ಲಿಕೆಯಾಗಿದ್ದವು. ಚುನಾವಣೆ ಸಂದರ್ಭ ಆಗುತ್ತಿದ್ದ ಗೊಂದಲ, ಅಕ್ರಮ ತಡೆಗೆ ಕಡ್ಡಾಯ ವಾಗಿ ಏಜೆಂಟರ ನೇಮಕ ಪದ್ಧತಿ ಸಹಕಾರಿಯಾಗಲಿದೆ. ಮೈಸೂರು ಜಿಲ್ಲೆಯಲ್ಲಿ 2921, ಚಾಮರಾಜನಗರ ಜಿಲ್ಲೆಗೆ 980 ಮಂದಿ ಬೂತ್‍ಮಟ್ಟದ ಏಜೆಂಟರನ್ನು ನೇಮಿಸಲಾಗು ತ್ತಿದೆ. ನಿಷ್ಠಾವಂತ ಕಾರ್ಯಕರ್ತರು, ಪಕ್ಷದ ಸ್ಥಳೀಯ ಮುಖಂಡರನ್ನು ಒಳಗೊಂಡಂತೆ ನೇಮಕ ಪ್ರಕ್ರಿಯೆ ನಡೆಯಲಿದೆ ಎಂದು ತಿಳಿಸಿದರು.

ಏಜೆಂಟ್‍ರಾಗಿ ನೇಮಕವಾದವರು ಮುಂದಿನ ದಿನಗಳಲ್ಲಿ ಬೂತ್ ಮಟ್ಟದಲ್ಲಿ ಪಕ್ಷವನ್ನು ಸಂಘಟಿಸುವ ಜವಾಬ್ದಾರಿಯನ್ನೂ ಹೊಂದಿರುತ್ತಾರೆ. ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ನಡೆಯುವ ಸಭೆಗಳು, ಮತದಾ ರರ ಪಟ್ಟಿಯಲ್ಲಿ ಬಿಟ್ಟು ಹೋಗಿರುವ ಹೆಸರುಗಳ ಸೇರ್ಪಡೆ ಹಾಗೂ ಮತದಾರರ ಪಟ್ಟಿಗೆ ಸಂಬಂಧಿಸಿದ ಕೆಲಸಗಳನ್ನು ನಿರ್ವಹಿಸಲಿದ್ದಾರೆ ಎಂದು ತಿಳಿಸಿದರು.

ಸ್ವಯಂಸೇವಕರಿಗೆ ವಿಮಾ ಬಾಂಡ್: ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಿ.ಜೆ.ವಿಜಯ್‍ಕುಮಾರ್ ಮಾತನಾಡಿ, ಕೊರೊನಾ ಸೋಂಕಿತರ ಆರೋಗ್ಯ ಕಾಪಾಡುವುದ ರಲ್ಲಿ ರಾಜ್ಯ ಸರ್ಕಾರ ವಿಫಲವಾಗಿರುವುದರಿಂದ ಕಾಂಗ್ರೆಸ್ ಪಕ್ಷದಿಂದಲೇ ರಾಜ್ಯಾದ್ಯಂತ ನಡೆಸುತ್ತಿರುವ ಆರೋಗ್ಯ ಹಸ್ತ ಕಾರ್ಯಕ್ರಮದಲ್ಲಿ ಕೊರೊನಾ ವಾರಿಯರ್ಸ್‍ಗಳಾಗಿ ಸೇವೆ ಸಲ್ಲಿಸುತ್ತಿರುವ ಕಾಂಗ್ರೆಸ್ ಕಾರ್ಯಕರ್ತರ ಆರೋಗ್ಯ ಕಾಪಾಡಲು ಪಕ್ಷ ಕ್ರಮ ಕೈಗೊಂಡಿದೆ. ಸ್ವಯಂಸೇವರಿಗೆ ಸೋಂಕು ತಗುಲಿ ದರೆ ಚಿಕಿತ್ಸೆಗಾಗಿ ಪಕ್ಷ ಆರ್ಥಿಕ ನೆರವು ನೀಡಲಿದೆ. ತಲಾ ಒಂದು ಲಕ್ಷ ಮೊತ್ತದ ಆರೋಗ್ಯ ವಿಮೆ ಬಾಂಡ್ ನೀಡಲಾಗುತ್ತಿದೆ ಎಂದರು.

ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳಲ್ಲಿ ಕೊರೊನಾ ವಾರಿಯರ್ಸ್‍ಗಳಾಗಿ ಸೇವೆ ಸಲ್ಲಿಸುತ್ತಿರುವ 100 ಮಂದಿ ಕಾಂಗ್ರೆಸ್ ಕಾರ್ಯಕರ್ತರಿಗೆ 1 ಲಕ್ಷ ರೂ. ವಿಮಾ ಬಾಂಡ್ ನೀಡಲಾಗುತ್ತದೆ. ಇದರಿಂದ ಕೊರೊನಾ ವಾರಿಯರ್ಸ್‍ಗಳಾಗಿ ದುಡಿಯುತ್ತಿರುವ ಕಾರ್ಯಕರ್ತರಿಗೆ ಅನಾರೋಗ್ಯ ಸಮಸ್ಯೆ ಉಂಟಾ ದರೆ ಯಾವುದೇ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗಳಲ್ಲಿ ಒಂದು ಲಕ್ಷ ರೂ.ವರೆಗೆ ಉಚಿತವಾಗಿ ಚಿಕಿತ್ಸೆ ಪಡೆ ಯಲು ಅನುಕೂಲವಾಗಲಿದೆ. ಪಕ್ಷದ ಕಾರ್ಯಕರ್ತ ರನ್ನು ಕೇವಲ ಪ್ರಚಾರಕ್ಕೆ, ಪ್ರತಿಭಟನೆಗಳಿಗೆ ಬಳಸಿ ಕೊಳ್ಳಲು ಸೀಮಿತವಾಗದೆ ಅವರ ಆರೋಗ್ಯವೂ ಪಕ್ಷಕ್ಕೆ ಮುಖ್ಯ ಎಂಬ ಕಾರಣಕ್ಕಾಗಿ ಕೆಪಿಸಿಸಿ ಅಧ್ಯಕ್ಷರು ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಯೋಜನೆ ಜಾರಿಗೊಳಿಸಿದ್ದಾರೆ ಎಂದು ವಿವರಿಸಿ ದರು. ಕಾಂಗ್ರೆಸ್ ಮುಖಂಡರಾದ ಹೆಡತಲೆ ಮಂಜುನಾಥ್, ನಗರ ವಕ್ತಾರ ಮಹೇಶ್ ಇನ್ನಿತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.