ಮೈಸೂರು ಪಾಲಿಕೆಯಿಂದ ಪೌರಕಾರ್ಮಿಕರಿಗೆ ಸನ್ಮಾನ

ಮೈಸೂರು: ಸ್ವಚ್ಛ ಸರ್ವೇಕ್ಷಣ-2019ರಲ್ಲಿ `ಮೈಸೂರು’ ದೇಶದ `3ನೇ ಸ್ವಚ್ಛ ನಗರ’ ಹಾಗೂ ತ್ಯಾಜ್ಯ ಮುಕ್ತ ನಗರದಲ್ಲಿ `5 ಸ್ಟಾರ್’ ಬಿರುದು ಪಡೆದ ಹಿನ್ನೆಲೆಯಲ್ಲಿ ಇದಕ್ಕೆ ಪ್ರಮುಖ ಕಾರಣ ಕರ್ತರಾದ ಪೌರಕಾರ್ಮಿಕರನ್ನು ಭಾನು ವಾರ ಮಹಾನಗರ ಪಾಲಿಕೆ ವತಿಯಿಂದ ಅಭಿನಂದಿಸಿ ಔತಣಕೂಟ ನೀಡಲಾಯಿತು.

ಮೈಸೂರಿನ ರಾಜೇಂದ್ರ ಕಲಾಮಂದಿರ ದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಪಾಲಿಕೆಯ 9 ವಲಯ ಕಚೇರಿಗಳ ತಲಾ ಒಬ್ಬರು ಪೌರಕಾರ್ಮಿಕರಂತೆ ಆಯ್ದ 9 ಮಂದಿ ಪೌರಕಾರ್ಮಿಕರನ್ನು ಉನ್ನತ ಶಿಕ್ಷಣ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ, ಶಾಸಕ ಎಲ್.ನಾಗೇಂದ್ರ ಹಾಗೂ ಮೇಯರ್ ಪುಷ್ಪಲತಾ ಜಗ ನ್ನಾಥ್ ಮತ್ತಿತರ ಗಣ್ಯರು ಸನ್ಮಾನಿಸಿದರು.

ವಲಯ ಕಚೇರಿ-1ರ ಜಯಮ್ಮ ಮೂರ್ತಿ, ವಲಯ ಕಚೇರಿ-2ರ ಮಣಿ, ವಲಯ ಕಚೇರಿ-3ರ ಲಕ್ಷ್ಮೀದೇವಮ್ಮ, ವಲಯ ಕಚೇರಿ-4ರ ಸರಸಮ್ಮ, ವಲಯ ಕಚೇರಿ-5ರ ರವಿ, ವಲಯ ಕಚೇರಿ-6ರ ಹನು ಮಂತು, ವಲಯ ಕಚೇರಿ-7ರ ಅಮ್ಜದ್ ಪಾಷಾ, ವಲಯ ಕಚೇರಿ-8ರ ಕೆ. ಸಂತೋಷ್, ವಲಯ ಕಚೇರಿ-9ರ ಆರ್.ವೆಂಕಟೇಶ್ ಸನ್ಮಾನಿತರು. ಜೊತೆಗೆ ಪೌರಕಾರ್ಮಿಕ ಮುಖಂಡ ನಾರಾಯಣ್ ಅವರನ್ನೂ ಸನ್ಮಾನಿಸಲಾಯಿತು. ಅಲ್ಲದೆ, ಪಾಲಿಕೆ ಗುತ್ತಿಗೆದಾರರ ಸಂಘದಿಂದ ಸ್ವಚ್ಛತಾ ಕಾರ್ಯಕ್ಕೆ ವಾಹನ ಸೌಲಭ್ಯ ನೀಡಿದ್ದ ಹಿನ್ನೆಲೆಯಲ್ಲಿ ಸಂಘದ ಅಧ್ಯಕ್ಷ ಚಂದ್ರ ಶೇಖರಯ್ಯ ಅವರಿನ್ನು ಸನ್ಮಾನಿಸಲಾಯಿತು.

ಇದೇ ವೇಳೆ ಮಾತನಾಡಿದ ಸಚಿವ ಜಿ.ಟಿ.ದೇವೇಗೌಡ, ಪ್ರಸಕ್ತ ಸಾಲಿನಲ್ಲಿ ಮೈಸೂರು ದೇಶದ 3ನೇ ಸ್ವಚ್ಛ ನಗರ ಎಂಬ ಹಿರಿಮೆಗೆ ಭಾಜನವಾಗಲು ಪೌರಕಾರ್ಮಿ ಕರ ಶ್ರಮವಿದೆ. ಮುಂದಿನ ಸಾಲಿನಲ್ಲಿ ಮತ್ತೆ ಮೈಸೂರು ಮೊದಲ ಸ್ಥಾನ ಗಳಿಸುವ ನಿಟ್ಟಿನಲ್ಲಿ ನಾವು ಕಾರ್ಯಪ್ರವೃತ್ತರಾಗಬೇಕು ಎಂದು ತಿಳಿಸಿದರು.

ಇದಕ್ಕೂ ಮುನ್ನ ಮಾತನಾಡಿದ ಮಾಜಿ ಮೇಯರ್ ಹಾಗೂ ಪೌರಕಾರ್ಮಿಕರ ಮುಖಂಡ ನಾರಾಯಣ್, ಸ್ವಚ್ಛ ಸರ್ವೇ ಕ್ಷಣ ಹಿನ್ನೆಲೆಯಲ್ಲಿ ತಿಂಗಳ ಕಾಲ 4 ಗಂಟೆ ಹೆಚ್ಚುವರಿ ಕೆಲಸವನ್ನು ಪೌರ ಕಾರ್ಮಿಕರು ಮಾಡಿದ್ದಾರೆ. ದಸರಾ ವೇಳೆ ಪೌರಕಾರ್ಮಿಕರು ಪ್ರತಿಭಟನೆ ನಡೆಸಿದಾಗ ಬೇಡಿಕೆಗಳನ್ನು ಈಡೇರಿಸುವುದಾಗಿ ಸರ್ಕಾರ ಭರವಸೆ ನೀಡಿತ್ತು. ಆದರೆ 4 ತಿಂಗಳು ಕಳೆದರೂ ಯಾವುದೇ ಬೇಡಿಕೆ ಈಡೇರಿಲ್ಲ. ಉಸ್ತುವಾರಿ ಸಚಿವರು ಈ ಸಂಬಂಧ ಸರ್ಕಾರದೊಂದಿಗೆ ಮಾತುಕತೆ ನಡೆಸಬೇಕೆಂದು ಒತ್ತಾಯಿಸಿದರು.

ಪಾಲಿಕೆಯಲ್ಲಿ ಗುತ್ತಿಗೆ ರದ್ದುಪಡಿಸಬೇಕು. ಒಳಚರಂಡಿ ವಿಭಾಗದಲ್ಲಿ ಕೆಲಸ ಮಾಡು ವವರನ್ನೂ ಪೌರಕಾರ್ಮಿಕರು ಎಂದು ಪರಿ ಗಣಿಸಬೇಕು. ಬೆಳಗಿನ ಉಪಹಾರ ನೀಡ ಬೇಕು. 700 ಜನಕ್ಕೆ ಒಬ್ಬ ಪೌರಕಾರ್ಮಿ ಕರು ಎಂಬುದನ್ನು ಕೈಬಿಟ್ಟು 500 ಮಂದಿಗೆ ಒಬ್ಬ ಪೌರಕಾರ್ಮಿಕರು ಎಂದು ಪರಿಗಣಿಸ ಬೇಕೆಂದು ಒತ್ತಾಯಿಸಲಾಗಿತ್ತು. ಈ ಬೇಡಿಕೆ ಗಳನ್ನು ಈಡೇರಿಸಲು ಉಸ್ತುವಾರಿ ಸಚಿವರು ಮುಂದಾಗಬೇಕು ಎಂದು ಆಗ್ರಹಿಸಿದರು.
ಶಾಸಕ ಎಲ್.ನಾಗೇಂದ್ರ ಮಾತನಾಡಿ, ಕಳೆದ 5 ವರ್ಷಗಳಿಂದ ಸ್ವಚ್ಛತೆಯಲ್ಲಿ ಮೈಸೂರು ಒಂದಲ್ಲಾ ಒಂದು ಸ್ಥಾನ ಅಲಂ ಕರಿಸುತ್ತಲೇ ಬಂದಿದೆ. ಇದಕ್ಕೆ ಪೌರಕಾರ್ಮಿ ಕರ ಕೊಡುಗೆ ಅಪಾರವಾಗಿದೆ ಎಂದರು.

ಮೇಯರ್ ಪುಷ್ಪಲತಾ ಜಗನ್ನಾಥ್ ಮಾತ ನಾಡಿ, ಸ್ವಚ್ಛತೆಯಲ್ಲಿ ಕಳೆದ ಬಾರಿ ಮೈಸೂರು 8ನೇ ಸ್ಥಾನಕ್ಕೆ ತೃಪ್ತಿಪಟ್ಟಿತ್ತು. ಇದೀಗ 3ನೇ ಸ್ಥಾನಕ್ಕೆ ಜಿಗಿದಿರುವುದು ಸಂತಸದ ಸಂಗತಿ. ಮುಂದಿನ ಸಾಲಿನಲ್ಲಿ ಪ್ರಥಮ ಸ್ಥಾನ ಪಡೆ ಯಲು ಸತತ ಪ್ರಯತ್ನ ಮಾಡಬೇಕು ಎಂದರು. ಉಪ ಮೇಯರ್ ಷಫಿ ಅಹಮ್ಮದ್, ಮಾಜಿ ಮೇಯರ್ ಆರೀಫ್ ಹುಸೇನ್ ಸೇರಿದಂತೆ ಪಾಲಿಕೆ ಸದಸ್ಯರು ಹಾಗೂ ಅಧಿಕಾರಿಗಳು ಹಾಜರಿದ್ದರು.