ಮೈಸೂರು ಜಿಲ್ಲೆಯಲ್ಲಿ 2 ಲಕ್ಷ ಮಂದಿ ನೋಂದಾಯಿಸುವ ಗುರಿ

ಮೈಸೂರು, ಆ.8(ಪಿಎಂ)- ಮೈಸೂರು ಜಿಲ್ಲೆ ಗ್ರಾಮಾಂತರ ಪ್ರದೇಶದಲ್ಲಿ ಬಿಜೆಪಿ ಸದಸ್ಯತ್ವ ನೋಂದಣಿ ಅಭಿಯಾನ ಆರಂ ಭಿಸಿದ್ದು, ಎರಡು ಲಕ್ಷ ಸದಸ್ಯರನ್ನು ನೋಂದಾ ಯಿಸಲು ಉದ್ದೇಶಿಸಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷರೂ ಆದ ಮಾಜಿ ಸಚಿವ ಕೋಟೆ ಎಂ.ಶಿವಣ್ಣ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದ ಅವರು, ಬಿಜೆಪಿ ದೇಶದಾದ್ಯಂತ ಸದಸ್ಯತ್ವ ನೋಂದಣಿ ಅಭಿಯಾನ ಆರಂ ಭಿಸಿದ್ದು, ದೆಹಲಿಯಲ್ಲಿ ಜು.7ರಂದು ಪ್ರಧಾನಿ ನರೇಂದ್ರ ಮೋದಿ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಿದರು. ಅದೇ ರೀತಿ ಮೈಸೂರು ಜಿಲ್ಲೆಯ ಗ್ರಾಮಾಂತರ ಪ್ರದೇಶದ 8 ವಿಧಾನಸಭಾ ಕ್ಷೇತ್ರಗಳಲ್ಲಿಯೂ ಸದಸ್ಯತ್ವ ನೋಂದಣಿ ಅಭಿಯಾನ ಆರಂ ಭಿಸಲಾಗಿದೆ ಎಂದು ಹೇಳಿದರು.

ಜು.6ರಂದು ಜಿಲ್ಲೆಯ ನಂಜನಗೂಡಿನ ಪೌರಕಾರ್ಮಿಕರ ಬಡಾವಣೆಯಲ್ಲಿ ಅಭಿ ಯಾನಕ್ಕೆ ಚಾಲನೆ ನೀಡಿದ್ದು, ಈ ವೇಳೆ 150ಕ್ಕೂ ಹೆಚ್ಚು ಪೌರಕಾರ್ಮಿಕರು ನೋಂದಣಿ ಮಾಡಿಸಿದ್ದಾರೆ. 2 ಲಕ್ಷ ಸದಸ್ಯರನ್ನು ನೋಂದಣಿ ಮಾಡಿಸುವ ಗುರಿ ಹೊಂದಿದ್ದು, ಈಗಾ ಗಲೇ 40 ಸಾವಿರ ಮಂದಿ ನೋಂದಣಿ ಮಾಡಿ ಕೊಂಡಿದ್ದಾರೆ. ಈ ತಿಂಗಳೊಳಗೆ ಉಳಿದ 1 ಲಕ್ಷದ 60 ಸಾವಿರ ಮಂದಿ ನೋಂದಾಯಿ ಸುವ ಗುರಿ ಮುಟ್ಟಲಾಗುವುದು ಎಂದರು.

ಮೈಸೂರು ಗ್ರಾಮಾಂತರದ 8 ವಿಧಾನ ಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ 2,124 ಬೂತ್ ಗಳಿದ್ದು, ಪ್ರತಿ ಬೂತಿಗೂ ತಲಾ ಒಬ್ಬರನ್ನು ಪ್ರಮುಖರನ್ನಾಗಿ ನೇಮಕ ಮಾಡಲಾಗಿದೆ. ಜಿಲ್ಲೆಯಲ್ಲಿ ಪಕ್ಷ ಸಂಘಟಿಸಿ ಮುಂಬರುವ ಜಿಪಂ, ತಾಪಂ ಹಾಗೂ ಇನ್ನಿತರ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಪಕ್ಷಕ್ಕೆ ಹೆಚ್ಚು ಸ್ಥಾನ ಬರುವಂತೆ ಕಾರ್ಯಪ್ರವೃತ್ತರಾಗಿ ದ್ದೇವೆ. ಅಭಿಯಾನದ ಅಂಗವಾಗಿ ಪ್ರತಿ ಬೂತ್‍ನಲ್ಲಿ 5 ಸಸಿ ನೆಡುವ ಕಾರ್ಯಕ್ರಮ ವನ್ನೂ ನಡೆಸಲಾಗುತ್ತಿದೆ. ಪಕ್ಷದ ಸದಸ್ಯ ರಾಗಲು ಇಚ್ಛಿಸುವವರು ಮೊ.ಸಂ. 8980 808080ಗೆ ಮಿಸ್ ಕಾಲ್ ಸಹ ಮಾಡ ಬಹುದು ಎಂದರು. ಬಿಜೆಪಿ ರಾಜ್ಯ ಕಾರ್ಯ ದರ್ಶಿಯೂ ಆದ ಮೈಸೂರು ಹಾಗೂ ದಾವಣಗೆರೆ ವಿಭಾಗದ ಸದಸ್ಯತ್ವ ನೋಂದಣಿ ಸಂಚಾಲಕ ಎಂ.ರಾಜೇಂದ್ರ, ಜಿಲ್ಲಾ ಸದ ಸ್ಯತಾ ಪ್ರಮುಖ್ ಹೇಮಂತ್ ಕುಮಾರ್ ಗೌಡ, ಸಹ ಸದಸ್ಯತಾ ಪ್ರಮುಖ್ ಬಾಲ ಕೃಷ್ಣ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಬಿ.ಪಿ.ಬೋರೇಗೌಡ ಗೋಷ್ಠಿಯಲ್ಲಿದ್ದರು.