ಮೈಸೂರು: ಮೈಸೂರು ಜಿಲ್ಲೆ ಸೇರಿದಂತೆ ದೇಶದ 10 ಜಿಲ್ಲೆಗಳನ್ನು 2035ರೊಳಗೆ ಕ್ಷಯ ಮುಕ್ತ ಜಿಲ್ಲೆಯಾಗಿ ಮಾಡಲು ಆರ್‍ಎನ್‍ಟಿಸಿಪಿ ಯೋಜನೆಯಡಿ ಕಾರ್ಯಕ್ರಮ ರೂಪಿಸ ಲಾಗುತ್ತಿದ್ದು, ಜಿಲ್ಲೆಯ ಜನತೆ ಆರೋಗ್ಯ ಇಲಾಖೆಯೊಂದಿಗೆ ಕೈಜೋಡಿಸುವಂತೆ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಮನವಿ ಮಾಡಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ಪರಿಷ್ಕøತ ರಾಷ್ಟ್ರೀಯ ಕ್ಷಯ ನಿಯಂತ್ರಣ (ಆರ್‍ಎನ್‍ಟಿಸಿಪಿ) ಕಾರ್ಯ ಕ್ರಮದಡಿ `ಕ್ಷಯ ಮಕ್ತ ಜಿಲ್ಲೆ’ ಯೋಜನೆಗೆ ಕೇಂದ್ರ ಸÀರ್ಕಾರ ಮೈಸೂರು ಜಿಲ್ಲೆ ಸೇರಿ ದಂತೆ ದೇಶದ ಹತ್ತು ಜಿಲ್ಲೆಗಳನ್ನು ಆಯ್ಕೆ ಮಾಡಿದೆ. ಈ ಜಿಲ್ಲೆಗಳಲ್ಲಿ ಕ್ಷಯ ರೋಗ ವನ್ನು ಸಂಪೂರ್ಣವಾಗಿ ನಿಯಂತ್ರಿಸುವು ದಕ್ಕೆ ಹಲವು ಕಾರ್ಯಕ್ರಮ ರೂಪಿಸಲಾಗು ತ್ತಿದೆ. `ಕ್ಷಯ ಮುಕ್ತ ಜಿಲ್ಲೆ’ ಮಾಡಲು ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಕÀಫ ಪರೀಕ್ಷೆ, ಎಕ್ಸ್‍ರೇ ಮಾಡಲು ಸೂಚನೆ ನೀಡಲಾಗಿದೆ. ಕೆಲವು ಖಾಸಗಿ ಆಸ್ಪತ್ರೆಗಳಲ್ಲಿಯೂ ಒಪ್ಪಂದ ಮಾಡಿ ಕೊಂಡು ಉಚಿತ ಪರೀಕ್ಷೆ ನಡೆಸುವಂತೆ ಸೂಚನೆ ನೀಡಲಾಗಿದೆ. ಆ ಮೂಲಕ ಸ್ಯಾಂಪಲ್‍ಗಳನ್ನು ಸಂಗ್ರಹಿಸಿ ರೋಗಿ ಗಳನ್ನು ಪತ್ತೆ ಹಚ್ಚಲಾಗುವುದು. ರೋಗಿ ಗಳಿಗೆ ಮಾಸಿಕವಾಗಿ 500 ರೂ ಧನ ಸಹಾಯ ನೀಡಲಾಗುತ್ತದೆ ಎಂದರು.
ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ.ಪಿ.ಎಸ್.ರವಿ ಮಾತನಾಡಿ, ಸರ್ಕಾರಿ ಆಸ್ಪತ್ರೆಗಳ ಜತೆ ಖಾಸಗಿ ಆಸ್ಪತ್ರೆಯಲ್ಲೂ ಉಚಿತ ಕಫ ಪರೀಕ್ಷೆ ಸೇವೆ ಲಭ್ಯವಿದೆ. ಪ್ರತಿಯೊಬ್ಬರೂ ವರ್ಷಕ್ಕೊಂದು ಬಾರಿ ಟಿಬಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಕೆಮ್ಮು ವುದು, ಸೀನುವಾಗ ಬಾಯಿಗೆ ಅಡ್ಡಲಾಗಿ ಕೈ ಅಥವಾ ಕರ್ಚೀಫ್ ಇಟ್ಟುಕೊಳ್ಳಬೇಕು. ಎಲ್ಲೆಂದರಲ್ಲಿ ಉಗುಳುವುದರಿಂದ ಸೋಂಕು ಗಾಳಿಯಲ್ಲಿ ಹರಡಿ ಬೇರೆಯವರಿಗೂ ತಗು ಲುತ್ತದೆ. ಕಳೆದ ವರ್ಷಕ್ಕೆ ಹೋಲಿಸಿದರೆ 2019ರಲ್ಲಿ ಕ್ಷಯ ರೋಗಿಗಳ ಪ್ರಮಾಣ ದಲ್ಲಿ ಶೇ.70ರಷ್ಟು ಕಡಿಮೆಯಾಗಿದೆ ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೆಂಕಟೇಶ್ ಮಾತ ನಾಡಿ, ಜಿಲ್ಲೆಯ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಉಚಿತವಾಗಿ ಕ್ಷಯ ರೋಗಕ್ಕೆ ಔಷಧಿ ದೊರೆಯುತ್ತಿದೆ. ಪಿಕೆಟಿಬಿ ಮತ್ತು ಕೆಆರ್‍ಎಸ್ ಆಸ್ಪತ್ರೆಯಲ್ಲಿ ಉಚಿವಾಗಿ ಕÀಫ ಪರೀಕ್ಷೆ ಮತ್ತು ಎಕ್ಸ್‍ರೇ ಮಾಡಲಾಗುತ್ತದೆ. 2 ವಾರಕ್ಕಿಂತ ಹೆಚ್ಚು ಕೆಮ್ಮು ಇದ್ದವರು ಪರೀಕ್ಷೆ ಮಾಡಿಸಿಕೊಂಡು ಚಿಕಿತ್ಸೆ ಪಡೆ ಯುವ ಮೂಲಕ ಕ್ಷಯ ಮುಕ್ತ ಜಿಲ್ಲೆಗೆ ಸಹ ಕರಿಸಬೇಕು ಎಂದು ಮನವಿ ಮಾಡಿದರು.
ಆಯುಷ್ಮಾನ್ ಭಾರತ ಕಾರ್ಡ್ ವಿತರಣೆ ಯಲ್ಲಿ ಯಾವುದೇ ಗೊಂದಲವಿಲ್ಲ. ಗುರು ತಿಸಿರುವ 15 ಸರ್ಕಾರಿ ಆಸ್ಪತ್ರೆಗಳು ಮತ್ತು 24 ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗು ತ್ತಿದೆ. ಜಿಲ್ಲೆಯಲ್ಲಿ ಇದುವರೆಗೆ 17 ಸಾವಿರ ಮಂದಿಗೆ ಆಯುಷ್ಮಾನ್ ಭಾರತ ಕಾರ್ಡ್ ನೀಡಲಾಗಿದೆ. ಈ ಕಾರ್ಡ್ ಬಳಸಿಕೊಂಡು ಚಿಕಿತ್ಸೆ ಪಡೆಯಬಹುದು ಎಂದರು.