ಅಧ್ಯಕ್ಷರ ವಿರುದ್ಧ ಸ್ವಪಕ್ಷೀಯರಿಂದಲೇ ಟೀಕಾ ಪ್ರಹಾರ

ಮೈಸೂರು: ಒಪ್ಪಂದದಂತೆ ಅಧ್ಯಕ್ಷಗಾದಿ ಬಿಟ್ಟುಕೊಡದ ಹಿನ್ನೆಲೆಯಲ್ಲಿ ಅಧ್ಯಕ್ಷರೂ ಹಾಗೂ ಸದ ಸ್ಯರ ನಡುವೆ ಮುನಿಸು ಮುಂದುವರೆ ದಿದ್ದು, ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ಸ್ವಪಕ್ಷದ ಸದಸ್ಯರೇ ಅಧ್ಯಕ್ಷರ ಹಾಗೂ ತಾ.ಪಂನ ಮೂರು ವರ್ಷದ ಆಡಳಿತಾವಧಿಯನ್ನು ತೀಕ್ಷ್ಣವಾಗಿ ಟೀಕಿಸಿದರು.

ಮೈಸೂರಿನ ನಜóರ್‍ಬಾದ್‍ನಲ್ಲಿರುವ ಮಿನಿ ವಿಧಾನಸೌಧ ಮೈಸೂರು ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ತಾಪಂ ಅಧ್ಯಕ್ಷೆ ಕಾಳಮ್ಮ ಕೆಂಪರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆ ಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ಸದಸ್ಯರು ಅಧ್ಯಕ್ಷರು ಕಳೆದ ಮೂರು ವರ್ಷದಿಂದ ಸಮರ್ಪಕವಾಗಿ ಆಡಳಿತ ನಡೆಸಲು ವಿಫಲರಾಗಿದ್ದಾರೆ. ಯಾವುದೇ ವಿಷಯ ಪ್ರಸ್ತಾಪಿಸಿದರೂ ಅಸಮರ್ಪಕವಾಗಿ ಉತ್ತರಿಸುತ್ತೀರಿ ಎಂದು ಮುಗಿಬಿದ್ದರೆ, ಅಧ್ಯಕ್ಷೆ ಕಾಳಮ್ಮ ಕೆಂಪರಾಮಯ್ಯ ಪ್ರತಿಕ್ರಿಯಿಸಿ ಸಭೆಗೆ ಗೈರು ಹಾಜರಾಗುವ ಮೂಲಕ ಅಭಿವೃದ್ಧಿ ಕುಂಠಿತಗೊಳ್ಳಲು ನೀವು ಕಾರಣರಾಗಿದ್ದೀರಿ. ನನ್ನ ಆಡಳಿತಾ ವಧಿಯಲ್ಲಿ ಯಾವುದಕ್ಕೆ ಪ್ರಾತಿನಿಧ್ಯ ನೀಡ ಬೇಕೆಂಬ ಅರಿವು ಇಟ್ಟುಕೊಂಡು ಕೆಲಸ ಮಾಡಿದ್ದೇನೆ. ಕೆಲಸ ನಡೆದೇ ಇಲ್ಲ ಎನ್ನ ಬೇಡಿ ಎಂದು ತಿರುಗೇಟು ನೀಡಿದರು.

ಸಭೆ ಆರಂಭವಾಗುತ್ತಿದ್ದಂತೆ ಕೆಲವು ಸದ ಸ್ಯರು ಗ್ರಾಮೀಣ ಪ್ರದೇಶಗಳಲ್ಲಿ ರುದ್ರಭೂಮಿಗೆ ಭೂಮಿ ಮಂಜೂರು ಮಾಡುವಂತೆ ಕ್ರಮ ಕೈಗೊಳ್ಳಲು ಆಗ್ರಹಿಸುತ್ತಿದ್ದರು. ಅಲ್ಲದೆ, ಕೆಲವು ನಡಾವಳಿಗೆ ಅನುಮೋಧನೆ ನೀಡಿರುವ ಬಗ್ಗೆ ಆಕ್ಷೇಪಿಸುತ್ತಿದ್ದರು. ಈ ವೇಳೆ ಸದಸ್ಯ ಶ್ರೀನಿ ವಾಸ್ ಮಾತನಾಡಿ, ನಮ್ಮ ಆಡಳಿತಾವಧಿ 3 ವರ್ಷ ಪೂರೈಸಿದೆ. ಆರಂಭದಿಂದಲೂ ನೀವು ಅಧ್ಯಕ್ಷರಾಗಿದ್ದೀರಿ. ಇದುವರೆಗೆ 12 ಸಭೆ ನಡೆಸಿದ್ದೀರಿ. ಈ ಅವಧಿಯಲ್ಲಿ ಎಷ್ಟು ಅಭಿವೃದ್ಧಿ ಕೆಲಸ ಆಗಿದೆ ಎಂದು ಆತ್ಮಾವ ಲೋಕನ ಮಾಡಿಕೊಳ್ಳಬೇಕು. ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಸಭೆ ಕರೆಯು ತ್ತೀರಿ. ಕೇಳಿದ ಪ್ರಶ್ನೆಗಳಿಗೆ ಅಸಮರ್ಪಕ ಉತ್ತರ ನೀಡುತ್ತೀರಿ. ಇದರಿಂದ ಆಡಳಿತ ಸತ್ತಂ ತಾಗಿದೆ. ಜನರ ಕೆಲಸ ಮಾಡಿಕೊಡುವುದಕ್ಕೆ ಸದಸ್ಯರಿಂದ ಸಾಧ್ಯವಾಗದ ಪರಿಸ್ಥಿತಿ ಉಂಟಾ ಗಿದೆ ಎಂದು ಅಸಮಧಾನ ವ್ಯಕ್ತಪಡಿಸಿ ದರು. ಇದಕ್ಕೆ ಸದಸ್ಯರಾದ ಹನುಮಂತು, ರಾಣಿ, ತುಳಸಿ ಸೇರಿದಂತೆ ಇನ್ನಿತರರು ಧ್ವನಿಗೂಡಿಸಿ ಅಧ್ಯಕ್ಷರ ಕಾರ್ಯವೈಖರಿ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಗೈರು ಹಾಜರಾದ ಸದಸ್ಯರೇ ಕಾರಣ: ಸ್ವಪಕ್ಷದ ಸದಸ್ಯರು ಮಾಡಿದ ಆರೋಪಕ್ಕೆ ಪ್ರತ್ಯುತ್ತರ ನೀಡಿದ ಅಧ್ಯಕ್ಷೆ ಕಾಳಮ್ಮ ಕೆಂಪ ರಾಮಯ್ಯ, ನನ್ನ ಆಡಳಿತಾವಧಿಯಲ್ಲಿ ಆಗಬೇಕಾದ ಅಭಿವೃದ್ಧಿ ಕಾರ್ಯ ನಡೆ ದಿದೆ. ಕೆಲಸ ಮಾಡೇ ಇಲ್ಲ ಎನ್ನುವುದು ಸರಿಯಲ್ಲ. ಹಲವು ಸಭೆಗಳಿಗೆ ಉದ್ದೇಶ ಪೂರ್ವಕವಾಗಿ ಗೈರು ಹಾಜರಾಗುವ ಮೂಲಕ ಅಭಿವೃದ್ಧಿ ಕಾರ್ಯಕ್ಕೆ ಅಡ್ಡಿಪಡಿ ಸಿದ್ದು ನೀವು ಎಂದು ಆರೋಪ ಮಾಡಿದ ಸದಸ್ಯರಿಗೆ ತಿರುಗೇಟು ನೀಡಿದರಲ್ಲದೆ, ಇಂದು ಇಷ್ಟೊಂದು ಸಮಸ್ಯೆ ಇದೆ ಎಂದು ಸಭೆಯಲ್ಲಿ ಹೇಳುತ್ತಿದ್ದೀರಿ. ಯಾಕೆ ನನ್ನ ಗಮನಕ್ಕೆ ತಂದಿಲ್ಲ ಎಂಬು ಪ್ರಶ್ನಿಸಿದರು.

ಸದಸ್ಯ ಮಹದೇವು ಮಾತನಾಡಿ, ಗ್ರಾಮ ಪಂಚಾಯಿತಿಗಳಲ್ಲಿ ಭಾರಿ ಅವ್ಯವಹಾರ ನಡೆಯುತ್ತಿದೆ. ಶಿಸ್ತು ಬದ್ಧವಾಗಿ ಗ್ರಾಪಂ ಗಳು ಕಾರ್ಯನಿರ್ವಹಿಸುತ್ತಿಲ್ಲ. ರಾಜಾ ರೋಷವಾಗಿ ಭ್ರಷ್ಟಾಚಾರ ನಡೆಯುತ್ತಿದೆ. ಇದಕ್ಕೆ ಕಡಿವಾಣ ಇಲ್ಲದಂತಾಗಿದೆ. ಪಿಡಿಓಗಳು ಹಾಗೂ ಜನಪ್ರತಿನಿಧಿಗಳು ನಿಯಮ ಗಳನ್ನು ಗಾಳಿಗೆ ತೂರುತ್ತಿದ್ದಾರೆ. ಭೂಮಿ ಒತ್ತುವರಿ, ಚರಂಡಿ ಸಮಸ್ಯೆ, 11ಬಿ ಮುಂತಾದ ವಿಚಾರಗಳಲ್ಲಿ ಭ್ರಷ್ಟಾಚಾರ ನಡೆಸಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.

ಗ್ರಾ.ಪಂ ಪರಿಶೀಲನೆಗೆ ಸಮಿತಿ ರಚನೆ : ಗ್ರಾ.ಪಂಗಳ ಬಗ್ಗೆ ಸದಸ್ಯರು ಮಾಡಿದ ಆರೋಪವನ್ನು ಗಂಭೀರವಾಗಿ ಪರಿಗಣಿ ಸಿದ ಅಧ್ಯಕ್ಷೆ ಕಾಳಮ್ಮ ಹಾಗೂ ಇಒ ಲಿಂಗರಾಜಯ್ಯ ಎಲ್ಲಾ ತಾ.ಪಂ ಸದಸ್ಯರ ಒಪ್ಪಿಗೆ ಮೇಲೆ ಮೂರು ಸಮಿತಿ ರಚಿಸಿ, ಒಂದೊಂದು ಸಮತಿ ಕೆಲವು ಗ್ರಾ.ಪಂಗಳಿಗೆ ಭೇಟಿ ನೀಡಿ ಪರಿಶೀಲಿಸುವುದಕ್ಕೆ ನಿರ್ಧರಿ ಸಲಾಯಿತು. ಅಧ್ಯಕ್ಷೆ ಕಾಳಮ್ಮ, ಉಪಾಧ್ಯಕ್ಷ ಎನ್.ಬಿ.ಮಂಜು, ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಶಂಕರ್, ಇಒ ಕೆ.ಎನ್.ಲಿಂಗಾ ರಾಜಯ್ಯ ನೇತೃತ್ವ ದಲ್ಲಿ ಮೂರು ಸಮಿತಿ ರಚನೆಗೆ ನಿರ್ಣಯ ಕೈಗೊಳ್ಳಲಾಯಿತು.

ಕೆರೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳಿ: ಸದಸ್ಯ ಕನ್ನೇಗೌಡ ಮಾತನಾಡಿ, ತಾಲೂಕು ಪಂಚಾಯಿತಿ ವ್ಯಾಪ್ತಿಯಲ್ಲಿರುವ ಮರಿಯ ಪ್ಪನ ಕಟ್ಟೆ (ಬೋಗಾದಿ ಕೆರೆ), ಲಿಂಗರಾಜ ಕಟ್ಟೆ ಸೇರಿದಂತೆ ಹಲವು ಕೆರೆಗಳು ವಿನಾಶ ದಂಚಿನಲ್ಲಿವೆ. ಬೋಗಾದಿ ಕೆರೆ ತುಂಬಿ ಲಿಂಗಾಂಬುಧಿ ಕೆರೆ ನೀರು ಹರಿಯುತ್ತಿತ್ತು. ಈಗ ಬೋಗಾದಿ ಕೆರೆ ಪರಿಸ್ಥಿತಿ ಶೋಚ ನೀಯವಾಗಿದೆ. ಮೂರು ವರ್ಷದಿಂದ ಕೆರೆ ಅಭಿವೃದ್ಧಿ ಮಾಡುವಂತೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನ ವಾಗಿಲ್ಲ. ಕೆರೆ ಕಟ್ಟೆಯನ್ನು ನಿರ್ಲಕ್ಷಿಸಿದರೆ ಜಲಕ್ಷಾಮ ತೀವ್ರಗೊಳ್ಳುತ್ತದೆ. ತಾಪಂ ಕರೆ ಕಟ್ಟೆ ಅಭಿವೃದ್ಧಿಗೆ ಗಮನ ಹರಿಸಬೇಕು ಎಂದು ಸದಸ್ಯ ಕನ್ನೇಗೌಡ ಆಗ್ರಹಿಸಿದರು.

ರುದ್ರಭೂಮಿ ರಕ್ಷಣೆ: ತಾಪಂ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ಸ್ಮಶಾನವೇ ಇಲ್ಲ. ಹಲವೆಡೆ ಸ್ಮಶಾನದ ಜಾಗ ಒತ್ತುವರಿಯಾ ಗುತ್ತಿದೆ. ಇದನ್ನು ಸರ್ವೆ ಮಾಡಿಸಿ ಸ್ಮಶಾನ ಒತ್ತುವರಿ ತೆರವುಗೊಳಿಸಿ, ಸ್ಮಶಾನಕ್ಕೆ ಜಾಗ ಗುರುತಿಸಿ ಹಲವು ಸಭೆಗಳಲ್ಲಿ ಹಾಗೂ ಹಲವು ಬಾರಿ ಮನವಿ ಮಾಡಿದ್ದರು. ಕೆಲಸವೇ ಆಗಿಲ್ಲ. ಸ್ಮಶಾನ ಗುರುತಿಸಲು ಮೂರು ವರ್ಷಗಳು ಬೇಕೆ? ಎಂದು ಕೆಲವು ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ತಹಸೀಲ್ದಾರ್ ಮಹೇಶ್, ಚುನಾವಣೆ ಸಮಯದಲ್ಲಿ ನಾನು ಅಧಿ ಕಾರ ವಹಿಸಿಕೊಂಡಿದ್ದೇನೆ. ಆದ್ದರಿಂದ ಮಾಹಿತಿ ಕೊರತೆ ಇದೆ. ಮಾಹಿತಿ ಪಡೆದು ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಮೈಸೂರು ತಾಪಂಗೆ 215.23 ಕೋಟಿ ಬಜೆಟ್
ಮೈಸೂರು,ಜೂ.19(ಎಂಟಿವೈ)-ಮೈಸೂರು ತಾಲೂಕು ಪಂಚಾಯಿತಿಯಲ್ಲಿ 2019-20ನೇ ಸಾಲಿನ 215,23, 80,000 ರೂ ಮೊತ್ತದ ಬಜೆಟ್ ಮಂಡಿಸಲಾಯಿತು.

ಮಿನಿ ವಿಧಾನಸೌಧದಲ್ಲಿರುವ ತಾ.ಪಂ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಸಾಮಾನ್ಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ತಾ.ಪಂನ ಹಣಕಾಸು ಅಧಿಕಾರಿ ಸುಧಾ ಪ್ರಸಕ್ತ ಸಾಲಿನ 215,23,80,000 ಕೋಟಿ ರೂ. ಮೊತ್ತ ಬಜೆಟ್ ಅನ್ನು ಮಂಡಿಸಿ, ಯಾವ ಯಾವ ಇಲಾಖೆಗೆ ಎಷ್ಟೆಷ್ಟು ಅನುದಾನ ಹಂಚಿಕೆ ಮಾಡಿರು ವುದನ್ನು ವಿವರಿಸಿದರು. ಶಿಕ್ಷಣ ಇಲಾಖೆಗೆ 145,43, 37,000 ರೂ, ಆರೋಗ್ಯ ಇಲಾಖೆಗೆ 1,85,98,000 ರೂ., ಆಯುಷ್ ಇಲಾಖೆಗೆ 25.87 ಲಕ್ಷ ರೂ., ನೀರು ಪೂರೈಕೆ ಮತ್ತು ನೈರ್ಮಲ್ಯ 2.28 ಲಕ್ಷ ರೂ., ಪರಿಶಿಷ್ಟ ಜಾತಿ ಕಲ್ಯಾಣ ಇಲಾಖೆಗೆ 17,32,93,000 ರೂ., ಪರಿ ಶಿಷ್ಟ ಪಂಗಡ ಕಲ್ಯಾಣ ಇಲಾಖೆಗೆ 8,58,84,000 ರೂ., ಹಿಂದುಳಿದ ವರ್ಗಗಳ ಕಲ್ಯಾಣ 2,71,47,000 ರೂ., ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ 30,61,80, 000 ರೂ., ಕೃಷಿ, ಸಸ್ಯ ಸಂಗೋಪನೆ, ಭೂಸಾರ ಮತ್ತು ಜಲ ಸಂರಕ್ಷಣೆ 59,05 ಲಕ್ಷ ರೂ., ತೋಟಗಾರಿಕೆ 6.17 ಲಕ್ಷ ರೂ., ಪಶು ಸಂಗೋಪನೆ 3,40 ಕೋಟಿ ರೂ., ಸಹಕಾರಿ 2.50 ಲಕ್ಷ ರೂ., ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮಗಳಿಗೆ 4,23 ಕೋಟಿ ರೂ., ರೇಷ್ಮೆ 1 ಲಕ್ಷ ರೂ. ಹಂಚಿಕೆ ಮಾಡಲಾಗಿದೆ ಎಂದು ತಿಳಿಸಿದರು. ಇದಕ್ಕೆ ಸದಸ್ಯರು ಅನುಮೋದನೆ ನೀಡಿದರು.