ಮೈಸೂರು ವಾರಿಯರ್ಸ್-ಕಲಿಸು ಫೌಂಡೇಶನ್ ಸಹಯೋಗದಲ್ಲಿ 6ನೇ ಜ್ಞಾನಾಲಯ

ಮೈಸೂರು: ಎನ್‍ಆರ್ ಸಮೂ ಹದ ಒಡೆತನದ ಕೆಪಿಎಲ್ ತಂಡವಾಗಿ ರುವ ಮೈಸೂರು ವಾರಿಯರ್ಸ್, ಕಲಿಸು ಫೌಂಡೇಶನ್ ಸಹಯೋಗದೊಂದಿಗೆ ಹುಡ್ಕೊ ಬನ್ನಿಮಂಟಪ ಶಾಲೆಯಲ್ಲಿ ಆರನೇ ಜ್ಞಾನಾಲಯ ಆರಂಭಿಸಿದೆ.

ಈ ಜ್ಞಾನಾಲಯದ ಪರಿಕಲ್ಪನೆಯಲ್ಲಿ ಮೈಸೂರು ವಾರಿಯರ್ಸ್ ತಂಡದೊಂ ದಿಗೆ ಕಲಿಸು ಫೌಂಡೇಶನ್ ಕೂಡ ಪ್ರಮುಖ ಪಾತ್ರ ವಹಿಸಿದೆ. ನೂತನ ಜ್ಞಾನ ಕೇಂದ್ರ ವನ್ನು ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಮೈಸೂರು ವಾರಿಯರ್ಸ್‍ನ ಮಾಲೀಕರೂ ಆದ ಎನ್‍ಆರ್ ಸಮೂ ಹದ ಪಾಲುದಾರ ಪವನ್‍ರಂಗ ಉದ್ಘಾ ಟಿಸಿದರು. ಕಲಿಸು ಫೌಂಡೇಶನ್ ಸಿಇಒ ನಿಖಿಲೇಶ ಎಂ.ಎಂ. ಅವರು ನೂತನ ಕೇಂದ್ರವನ್ನು ಬಿಇಒ ಉದಯ್‍ಕುಮಾರ್ ಸಮ್ಮುಖದಲ್ಲಿ ಶಾಲಾ ಪ್ರಾಚಾರ್ಯೆ ಶಾರದಾ ಕೆ.ಆರ್. ಅವರಿಗೆ ಹಸ್ತಾಂತ ರಿಸಿದರು. ಕಾರ್ಯಕ್ರಮದಲ್ಲಿ ಶಿಕ್ಷಕರು ಮತ್ತು ಸಿಬ್ಬಂದಿ ಹಾಜರಿದ್ದರು.

ಈ ಸಂದರ್ಭ ಮಾತನಾಡಿದ ಯದು ವೀರ ಕೃಷ್ಣದತ್ತ ಚಾಮರಾಜ ಒಡೆಯರ್, “ಮೈಸೂರು ವಾರಿಯರ್ಸ್ ಮತ್ತು ಎನ್.ಆರ್ ಸಮೂಹ ಜೊತೆಯಾಗಿ ಈಗಾಗಲೇ ಐದು ಜ್ಞಾನಾಲಯಗಳನ್ನು ಸ್ಥಾಪಿಸಿವೆ. ಬಡ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಒತ್ತು ನೀಡುವ ನಿಟ್ಟಿನಲ್ಲಿ ಸಮಾಜಮುಖಿ ಉಪಕ್ರಮಗಳನ್ನು ನಡೆಸುತ್ತಿರುವ ಕಲಿಸು ಫೌಂಡೇಶನ್ ಮತ್ತು ಮೈಸೂರು ವಾರಿ ಯರ್ಸ್ ತಂಡಗಳನ್ನು ಅಭಿನಂದಿಸುತ್ತೇನೆ” ಎಂದರು. “ಸಮಾಜದ ಒಟ್ಟಾರೆ ಬೆಳವಣಿಗೆ ಮತ್ತು ಅಭಿವೃದ್ಧಿಯಲ್ಲಿ ಶಿಕ್ಷಣ ಬಹಳ ಮುಖ್ಯ ಪಾತ್ರವನ್ನು ವಹಿಸುತ್ತದೆ. ಆದ್ದರಿಂದ ಜ್ಞಾನ ಮತ್ತು ಕಲಿಕೆಗೆ ಪೂರಕವಾದ ಉಪಕ್ರಮ ಗಳನ್ನು ನಾವು ಹೆಚ್ಚು ಬೆಂಬಲಿಸುತ್ತೇವೆ ಎಂದು ಪವನ್‍ರಂಗ ಹೇಳಿದರು.