ಮೈಸೂರಿನಲ್ಲಿ ವಾರವಿಡೀ ಭಗಿನಿ ರಾಮೋತ್ಸವ ಸಂಗೀತ

ಮೈಸೂರು: ನಗರದ ಭಗಿನಿ ಸೇವಾ ಸಮಾಜದ ವತಿಯಿಂದ ಇಂದಿನಿಂದ ರಾಮೋತ್ಸವ ಸಂಗೀತ ಕಾರ್ಯಕ್ರಮ ಆರಂಭಗೊಂಡಿದೆ. 1923ರಲ್ಲಿ ಸ್ಥಾಪನೆಯಾಗಿ, ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರ ಆಶೀರ್ವಾದದೊಂದಿಗೆ ಮುನ್ನಡೆಯುತ್ತಿದ್ದು, ಈಗ ಒಂದು ವಾರ ಕಾಲ ಭಗಿನಿ ರಾಮೋತ್ಸವ ಸಂಗೀತ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಮೇ 3ರಂದು ಸಮಾರೋಪಗೊಳ್ಳಲಿದೆ.

ಪ್ರತಿ ವóರ್ಷದಂತೆ ಶ್ರೀರಾಮನವಮಿ ಪ್ರಯುಕ್ತ ಈ ವರ್ಷವೂ ಆಯೋಜನೆಗೊಂಡಿ ರುವ ಸಂಗೀತ ಕಾರ್ಯಕ್ರಮದಲ್ಲಿ ಮೈಸೂರು ಮಂಜುನಾಥ್, ಅಶೋಕ್ ಮತ್ತು ಹರಿ ಮೈಸೂರು, ಉಸ್ತಾದ್ ರಫೀಕ್ ಸೇರಿದಂತೆ ಹಲವು ಹೆಸರುವಾಸಿ ಕಲಾವಿದರು ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಕೃಷ್ಣಮೂರ್ತಿಪುರಂನ ಬಲ್ಲಾಳ್ ವೃತ್ತದ ಬಳಿ ಇರುವ ಭಗಿನಿ ಸೇವಾ ಸಮಾಜ ಶಾಲೆ ಆವರಣದಲ್ಲಿ ಪ್ರತಿದಿನ ಸಂಜೆ 6 ಗಂಟೆಗೆ ಕಾರ್ಯಕ್ರಮ ಆರಂಭಗೊಳ್ಳುತ್ತದೆ.

ಏ.28- ಡಾ. ಮೈಸೂರು ಮಂಜುನಾಥ್ ಮತ್ತು ಉಸ್ತಾದ್ ರಫೀಕ್ ಅವರ ಪಿಟೀಲು ಮತ್ತು ಸಿತಾರ್ ಜುಗಲ್‍ಬಂಧಿ. ಪಕ್ಕವಾದ್ಯದಲ್ಲಿ ಪತ್ರಿ ಸತೀಶ್ ಕುಮಾರ್ ಮೃದಂಗ ಮತ್ತು ಪಂಡಿತ್ ರಾಜೇಂದ್ರ ನಾಕೋಡ್ ತಬಲಾ.
ಏ.29- ಚಂದನಬಾಲಾ ಕಲ್ಯಾಣ್ ಸಂಗೀತ ಪ್ರಸ್ತುತಿಗೆ ಕೆ.ಜೆ.ದಿಲೀಪ್ ಪಿಟೀಲು, ಎ.ರಾಧೇಶ್ ಮೃದಂಗ, ಜಯರಾಂ ಘಟದ ಸಹಯೋಗವಿದೆ.
ಏ.30- ಕೆ.ಸತ್ಯನಾರಾಯಣ ಕೀಬೋರ್ಡ್ ಸಂಗೀತ ಪ್ರಸ್ತುತಪಡಿಸಿದರೆ, ವಿಠಲ ರಂಗನ್ ಪಿಟೀಲು, ಅಕ್ಷಯ್ ಆನಂದ್ ಮೃದಂಗ ಹಾಗೂ ಎಸ್.ಮಂಜುನಾಥ್ ಘಟ.
ಮೇ 1- ಚೆನ್ನೈನ ಜಿ.ರವಿಕಿರಣ್ ಸಂಗೀತ ಕಾರ್ಯಕ್ರಮವಿದ್ದು, ಪಿಟೀಲು ಗೋಕುಲ್, ಮೃದುಂಗ ಬಿ.ಸಿ.ಮಂಜುನಾಥ್, ಘಟ ಎಂ.ಆರ್.ಮಂಜುನಾಥ್.
ಮೇ 2- ವಿವೇಕ್ ಮೂಳಿಕುಲನ್ ಗಾಯನ. ಗೋಲುಲ್ ಪಿಟೀಲು, ಹೆಚ್.ಎಲ್.ಶಿವಕುಮಾರ್ ಸ್ವಾಮಿ ಮೃದಂಗ, ವಿ.ಎಸ್.ರಮೇಶ್ ಮೋರ್ಚಿಂಗ್.
ಮೇ 3- ಶೃತಿ ಸಾಗರ್ ಅವರ ಕೊಳಲು ವಾದನ. ಮಥುರ್ ಶ್ರೀನಿಧಿ ಪಿಟೀಲು, ಬಿ.ಸಿ.ಮಂಜುನಾಥ್ ಮೃದಂಗ, ಭಾರ್ಗವ ಹಾಲಂಬಿ ಖಂಜಿರಾ.