ಮೈಸೂರು,ಆ.3(ಎಂಟಿವೈ)- ಮೈಸೂ ರಿನ ನಂಜರಾಜ ಬಹದ್ದೂರ್ ಛತ್ರದಲ್ಲಿ ಶನಿವಾರ ಆರಂಭವಾದ ಎರಡು ದಿನಗಳ `ಹಲಸಿನ ಹಬ್ಬ’ದಲ್ಲಿ ಹಲಸಿನ ಸುವಾಸನೆ ಪಸರಿಸುತ್ತಿದ್ದು, ವಿವಿಧ ತಳಿಯ ಹಣ್ಣು ಗಳು ಮಾತ್ರವಲ್ಲದೆ, ಹಲಸಿನ ಹಣ್ಣಿನಿಂದ ತಯಾರಿಸಿರುವ ಪಾಯಸ, ಹೋಳಿಗೆ, ಕಬಾಬ್, ಬೋಂಡ, ವಡೆ, ಹಲ್ವ, ಐಸ್‍ಕ್ರೀಂ, ಚಿಪ್ಸ್, ಚಾಕೋಲೆಟ್ ಹಾಗೂ ಇನ್ನಿತರ ತಿನಿಸುಗಳು ಒಂದೇ ಸೂರಿನಡಿ ಲಭ್ಯವಾಗಿ ನಾಲಿಗೆಗೆ ರುಚಿ ನೀಡುತ್ತಿವೆ.
ಸಹಜ ಸಮೃದ್ಧ ಸಂಸ್ಥೆ ಹಾಗೂ ರೋಟರಿ ಕ್ಲಬ್ ಆಫ್ ಮೈಸೂರು ಪಶ್ಚಿಮ ವತಿ ಯಿಂದ ಆಯೋಜಿಸಿರುವ ‘ಹಲಸಿನ ಹಬ್ಬ’ದಲ್ಲಿ ಮೈಸೂರಿನ ಜನತೆ ವಿವಿಧ ಬಗೆಯ ಹಲಸಿನ ಹಣ್ಣು ಹಾಗೂ ಹಲಸಿನ ಖಾದ್ಯಗಳಿಗೆ ಮನಸೋತರು. ಕಾರ್ಯ ಕ್ರಮ ಉದ್ಘಾಟನೆಗೂ ಮುನ್ನವೇ ನಂಜ ರಾಜ ಬಹದ್ದೂರು ಛತ್ರಕ್ಕೆ ಲಗ್ಗೆಯಿಟ್ಟ ಹಲಸು ಪ್ರಿಯರು ತಮಗಿಷ್ಟವಾದ ಹಲಸಿನ ಹಣ್ಣು, ಹಲಸು ಉತ್ಪನ್ನಗಳ ರುಚಿ ಸವಿ ಯಲು ಮುಗಿಬಿದ್ದರು. ಆರಂಭದಲ್ಲಿಯೇ ನಿರೀಕ್ಷೆಗೂ ಮೀರಿ ಹಲಸು ಪ್ರಿಯರು ಮೇಳಕ್ಕೆ ಆಗಮಿಸಿದ್ದರಿಂದ ಮಳಿಗೆ ದಾರರು ಫುಲ್ ಖುಷಿಯಾದರು.
ರಾಜ್ಯದ ವಿವಿಧೆಡೆಯ ಹಲಸು ಬೆಳೆಗಾ ರರು ಮೇಳದಲ್ಲಿ ಪಾಲ್ಗೊಂಡಿದ್ದು, ನೇರವಾಗಿ ಗ್ರಾಹಕರಿಗೆ ಹಣ್ಣು-ಹಣ್ಣಿನ ವಿವಿಧ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದಾರೆ. 13ಕ್ಕೂ ಹೆಚ್ಚು ಮಳಿಗೆಗಳಲ್ಲಿ ಮೈಸೂರು, ಮಂಗಳೂರು ಹಾಗೂ ಉತ್ತರ ಕರ್ನಾಟಕ ಪ್ರದೇಶದ ಹಲಸು ಬೆಳೆಗಾರರು ವಿವಿಧ ಬಗೆಯ ಹಲಸಿನ ಹಣ್ಣನ್ನು ಮಾರಾಟಕ್ಕಿಟ್ಟಿದ್ದಾರೆ. ಹಲಸಿನಲ್ಲಿ ಔಷಧಿ ಗುಣವಿದೆ. ಮಧುಮೇಹಿಗಳಿಗೆ ಹಲಸು ಉತ್ತಮ ಎಂಬ ಸಂದೇಶದಿಂದ ಪ್ರೇರಣೆಗೊಂಡ ಜನ ಕೆಂಪು, ಹಳದಿ ಮತ್ತು ಬಿಳಿ ಹಲ ಸಿನ ಹಣ್ಣುಗಳನ್ನು ತಿನ್ನಲು ಪೈಪೆÇೀಟಿ ನಡೆಸಿದರು. ಇದರಿಂದ ಎಲ್ಲಾ ಮಳಿಗೆಗಳ ಮುಂದೆ ಗ್ರಾಹಕರು ಗುಂಪುಗೂಡಿ ನಿಂತಿದ್ದ ದೃಶ್ಯ ಕಂಡು ಬಂತು.
ಬೇಡಿಕೆ ಹೆಚ್ಚಿಸಿಕೊಂಡ ಐಸ್‍ಕ್ರೀಂ, ಕಬಾಬ್, ಬೋಂಡ : ಹಲಸು ಹಬ್ಬದಲ್ಲಿ ಐಸ್ ಕ್ರೀಂ ಮತ್ತು ಹಲಸಿನ ಕಬಾಬ್, ವಡೆ ಮತ್ತು ಬೋಂಡದ ಮಳಿಗೆಗೆ ಜನರು ಮುಗಿ ಬಿದ್ದರು. ಹಲಸಿನ ಐಸ್‍ಕ್ರೀಂ ಮಳಿಗೆ ಯಲ್ಲಿ ಮಾರಾಟ ಭರ್ಜರಿಯಾಗಿತ್ತು.
ಗಿಡ ಮಾರಾಟ: ವಿವಿಧ ಹಲಸಿನ ತಳಿಗಳ ಗಿಡಗಳನ್ನು ಮಾರಾಟಕ್ಕಿಡಲಾಗಿತ್ತು. ತಳಿ ಆಧಾರದ ಮೇಲೆ ಒಂದು ಸಸಿಗೆ 200, 300 ರೂ.ನಂತೆ ಬೆಲೆ ನಿಗದಿಪಡಿ ಸಲಾಗಿತ್ತು. ಸಿಂಧೂ, ಹೆಜ್ಜೇನು, ಅಂಟು ರಹಿತ, ಬೈರ, ವಿಯಟ್ನಾಂ ಸೂಪರ್ ಅರ್ಲಿ, ಬೆಂಗ್ ಸೂರ್ಯ, ನಾಗಚಂದ್ರ, ರಾಮಚಂದ್ರ, ಕಾಚಳ್ಳಿ ಹಲಸು, ಲಾಲ್ ಬಾಗ್ ಮಧುರ, ಸಿಂಗಾಪುರ ಹಲಸು, ಜೇನು ಬೊಕ್ಕೆ, ಸರ್ವಋತು ಹಲಸು, ರುದ್ರಾಕ್ಷಿ ಬೊಕ್ಕೆ, ಈ-11, ಜೆ-33 ಮುಂತಾದ ತಳಿಯ ಸಸಿಗಳು ಮಾರಾಟ ವಾದವು. ಉದ್ಘಾಟನೆ ಸಮಯಕ್ಕಾಗಲೇ 500 ಸಸಿಗಳು ಮಾರಾಟವಾಗಿದ್ದವು. ಪಾಟ್‍ನಲ್ಲೇ ಬೆಳೆದು ಒಂದು ವರ್ಷ ದೊಳಗೆ ಫಲ ನೀಡುವ ವಿಯಟ್ನಾಂ ಸೂಪರ್ ಹಾಗೂ ಬೈರಾ ಚಂದ್ರದ ಸಸಿಗಳಿಗೆ ಭಾರಿ ಬೇಡಿಕೆ ಕಂಡು ಬಂತು. ಅಲ್ಲದೇ, ಹುಣಸೆ, ಸೀಬೆ, ನೇರಳೆ, ಮಾವಿನ ಸಸಿಗಳನ್ನು ಮಾರಾಟಕ್ಕೆ ಇಡಲಾಗಿತ್ತು.
ಇಂದು ಹಲಸಿನ ಹಣ್ಣು ತಿನ್ನುವ ಸ್ಪರ್ಧೆ : ಆ.4ರಂದು ಮಧ್ಯಾಹ್ನ 12 ಗಂಟೆಗೆ ಹಲಸಿನ ಅಡುಗೆ ಸ್ಪರ್ಧೆ ಮತ್ತು ಹಲಸಿನ ಹಣ್ಣು ತಿನ್ನುವ ಸ್ಪರ್ಧೆ ಮತ್ತು ಹಲಸಿಗೆ ಕಸಿ ಕಟ್ಟುವ ತರಬೇತಿ ಆಯೋಜಿಸಲಾಗಿದೆ.
ಹಲಸಿನ ಚಾಕೋಲೆಟ್, ಬಿಸ್ಕತ್ ತಯಾರಿಸಲು ಕ್ಯಾಂಪ್ಕೊ ಕಂಪನಿ ಆಸಕ್ತಿ
ಮೈಸೂರು:ಹಲಸಿನ ಹಣ್ಣಿನಿಂದ ಚಾಕೋಲೆಟ್ ಹಾಗೂ ಬಿಸ್ಕತ್ ತಯಾರಿಸಲು ಕ್ಯಾಂಪೆÇ್ಕ ಕಂಪನಿ ಆಸಕ್ತಿ ವಹಿಸಿದೆ ಎಂದು ಭಾರತೀಯ ತೋಟಗಾರಿಕೆ ಸಂಶೋಧನೆ ಸಂಸ್ಥೆ ನಿರ್ದೇಶಕ ಡಾ.ಎಂ.ಆರ್.ದಿನೇಶ್ ತಿಳಿಸಿದ್ದಾರೆ.
ಮೈಸೂರಿನ ನಂಜರಾಜ ಬಹದ್ದೂರ್ ಛತ್ರದಲ್ಲಿ ಸಹಜ ಸಮೃದ್ಧ ಮತ್ತು ರೋಟರಿ ಕ್ಲಬ್ ಆಫ್ ಮೈಸೂರು ಪಶ್ಚಿಮದಿಂದ ಆಯೋಜಿಸಿರುವ ಹಲಸಿನ ಹಬ್ಬ ಕಾರ್ಯಕ್ರಮದಲ್ಲಿ `ಹಲಸು ಬಿಡಿಸಿದಾಗ’ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಹಲಸು ಬೆಳೆಗಾರರಿಗೆ ಚೈತನ್ಯ ತುಂಬಲು, ಮೌಲ್ಯವರ್ಧಿತ ಬೆಳೆಯಾಗಿ ಪರಿವರ್ತಿಸಲು ಹಾಗೂ ಉದ್ಯಮ ಕ್ಷೇತ್ರ ದಲ್ಲಿ ಹಲಸನ್ನು ಬಲಪಡಿಸಲು ಕ್ರಮ ಕೈಗೊಳ್ಳಲಾಗಿದೆ. ಹಲಸಿನ ಚಾಕೋಲೆಟ್ ಹಾಗೂ ಬಿಸ್ಕತ್ ತಯಾರಿಕೆ ಕ್ಯಾಂಪೆÇ್ಕ ಕಂಪನಿ ಮುಂದೆ ಬಂದಿದೆ. ಈ ನಿಟ್ಟಿನಲ್ಲಿ ಸಂಸ್ಥೆಯಿಂದಲೂ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳ ಲಾಗಿದೆ. ದೇಶದಲ್ಲಿ ಸಾವಿರಕ್ಕೂ ಹೆಚ್ಚು ಹಲಸಿನ ತಳಿಗಳಿದ್ದು, ರಾಜ್ಯದಲ್ಲಿ 150 ತಳಿಗಳಿವೆ. ಕರ್ನಾಟಕದ ಪಶ್ಚಿಮ ಘಟ್ಟದಲ್ಲಿ ಹಲಸು ಹುಟ್ಟಿದೆ. 170 ಬಗೆಯ ಹಲಸಿನ ತಳಿಗಳು ಸಂರಕ್ಷಣೆ ಮಾಡಿz್ದÉೀವೆ. ತುಮಕೂರಿನಲ್ಲಿ ರೈತನೊಬ್ಬನ ತೋಟದಲ್ಲಿದ್ದ ಅಪರೂಪದ ಹಲಸಿನ ತಳಿ ಗುರುತಿಸಿ ಅದನ್ನು ಕಸಿ ಮಾಡಲಾಗುತ್ತಿದೆ. ಸಿದ್ದು ಹಲಸು ಗಿಡಕ್ಕೆ ಭಾರಿ ಬೇಡಿಕೆ ಬಂದಿದೆ. ಈಗ ಆ ರೈತನಿಗೆ ಸಸಿಗಳಿಂದಲೇ 7-8 ಲಕ್ಷ ರೂ. ಆದಾಯ ಬರುತ್ತಿದೆ ಎಂದು ತಿಳಿಸಿದರು.
ಜಿಲ್ಲಾ ರೋಟರಿ ಗವರ್ನರ್ ರೊಟೇರಿಯನ್ ಜೋಸೆಫ್ ಮ್ಯಾಥ್ಯು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬಡ ವರ ಹಣ್ಣು ಎಂದೇ ಹೆಸರು ಗಳಿಸಿರುವ ಹಲಸು ಔಷಧಿ ಗುಣಗಳಿಂದ ಮುನ್ನೆಲೆಗೆ ಬರುತ್ತಿದೆ. ಬರಗಾಲ ಎದುರಿಸಿ ನಿಲ್ಲುವ ಹಲಸು ರಾಸಾಯನಿಕ ಔಷಧಿ, ಗೊಬ್ಬರ ಯಾವು ದನ್ನೂ ಬೇಡುವುದಿಲ್ಲ. ರೈತರಿಗೆ ಲಾಭದಾಯಕವಾಗಿದೆ ಎಂದರು.
ಸಾವಯವ ಕೃಷಿಕ ಶಿವನಾಪುರದ ರಮೇಶ್, ಜೈವಿಕ್ ಕೃಷಿಕ್ ಸಂಸ್ಥೆಯ ಗೌರವಾಧ್ಯಕ್ಷ ಡಾ.ಕೆ.ರಾಮಕೃಷ್ಣಪ್ಪ, ಸಹಜ ಸಮೃದ್ಧ ಸಂಸ್ಥೆ ಅಧ್ಯಕ್ಷ ಎನ್.ಆರ್.ಶೆಟ್ಟಿ, ಬೆಂಗಳೂರು ಕೃಷಿ ವಿವಿ ಪ್ರಾಧ್ಯಾಪಕಿ ಡಾ.ಎಸ್.ಶ್ಯಾಮಲಾ ರೆಡ್ಡಿ, ‘ಹಲಸು ನೆಟ್ಟು, ಬರ ಅಟ್ಟು’ ಕಾರ್ಯಾಗಾರದಲ್ಲಿ ಹಿರೇಹಳ್ಳಿ ಫಾರಂ ಮುಖ್ಯಸ್ಥ ಡಾ.ಜಿ.ಕರುಣಾಕರನ್, ಕೃಷಿಕ ಹೆಗ್ಗವಾಡಿಪುರದ ಶಿವಕುಮಾರಸ್ವಾಮಿ ಅವರು ಹಲಸಿನ ಮಹತ್ವ , ವಿಶೇಷತೆ ಮತ್ತು ಹಲಸು ಬೆಳೆದರೆ ಹೇಗೆ ಆದಾಯಗಳಿಸಬಹುದು ಎಂಬ ಬಗ್ಗೆ ತಿಳಿಸಿ ಕೊಟ್ಟರು. ರೊಟೇರಿಯನ್ ರಿಜಿನಾಲ್ಡ್ ವೆಸ್ಲಿ, ಸಹಜ ಸಮೃದ್ಧ ನಿರ್ದೇಶಕ ಜಿ.ಕೃಷ್ಣಪ್ರಸಾದ್, ರೊಟೇರಿಯನ್ ಉಲ್ಲಾಸ್ ಪಂಡಿತ್ ಇನ್ನಿತರರು ಇದ್ದರು.