ನಂದಿಧ್ವಜಕ್ಕೆ ಮುಖ್ಯಮಂತ್ರಿ ಪೂಜೆ

ಮೈಸೂರು: ಅರಮನೆ ಬಲರಾಮ ದ್ವಾರದ ಬಳಿ ಕೋಟೆ ಆಂಜನೇಯಸ್ವಾಮಿ ದೇವಾಲಯ ಆವರಣದಲ್ಲಿ ನಂದಿಧ್ವಜಕ್ಕೆ ಪೂಜೆ ಸಲ್ಲಿ ಸುವ ಮೂಲಕ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಶುಕ್ರವಾರ 408ನೇ ದಸರಾ ಜಂಬೂ ಸವಾರಿ ಮೆರವಣಿಗೆಗೆ ಚಾಲನೆ ನೀಡಿದರು.

ಮಧ್ಯಾಹ್ನ 2.47ರ ವೇಳೆಗೆ ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಮ್ಮ ಸಂಪುಟದ ಹಲವು ಸಹೋದ್ಯೋಗಿ ಗಳೊಡನೆ ಆಗಮಿಸಿದರು. ಶುಭ ಕುಂಭ ಲಗ್ನದಲ್ಲಿ ನಾದಸ್ವರದ ನಡುವೆ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ದಸರಾ ಉದ್ಘಾಟಕಿ ಡಾ.ಸುಧಾಮೂರ್ತಿ, ಸಿಎಂ ಪತ್ನಿ ಅನಿತಾ ಕುಮಾರಸ್ವಾಮಿ, ಮೈಸೂರು ಜಿಲ್ಲಾ ಉಸ್ತು ವಾರಿ ಸಚಿವ ಜಿ.ಟಿ.ದೇವೇಗೌಡ, ಪ್ರವಾ ಸೋದ್ಯಮ ಸಚಿವ ಸಾ.ರಾ.ಮಹೇಶ್, ಕನ್ನಡ ಮತ್ತು ಸಂಸ್ಕøತಿ ಸಚಿವೆ ಜಯ ಮಾಲಾ, ಜಿಪಂ ಅಧ್ಯಕ್ಷೆ ನಯೀಮಾ ಸುಲ್ತಾನಾ ಸೇರಿದಂತೆ ಸ್ಥಳೀಯ ಶಾಸಕರು, ಮುಖಂಡರು ಉಪಸ್ಥಿತರಿದ್ದರು.

ಗೌರಿಶಂಕರನಗರ ನಂದಿಧ್ವಜ ಸಂಘದ ಜೋಡಿ ನಂದಿಧ್ವಜಗಳು ಮೆರವಣಿಗೆ ಯಲ್ಲಿ ಭಾಗವಹಿಸಿದ್ದವು. ಉಡಿಗಾಲದ ಮಹ ದೇವಪ್ಪ ನೇತೃತ್ವದಲ್ಲಿ ಕಳೆದ 55 ವರ್ಷ ಗಳಿಂದಲೂ ನಂದಿಧ್ವಜ ತಂಡ ಭಾಗವಹಿ ಸುತ್ತಾ ಬಂದಿದೆ. ತಂಡದಲ್ಲಿ ಹಲವು ನಂದಿ ಧ್ವಜ ಕಲಾವಿದರು ಭಾಗವಹಿಸಿದ್ದರು.