ಅ.7ರಂದು ಮೈಸೂರು ದಸರಾ ಗ್ರಾವೆಲ್ ಉತ್ಸವ

ಮೈಸೂರು: ಮೈಸೂ ರಿನ ಲಲಿತ ಮಹಲ್ ಹೆಲಿಪ್ಯಾಡ್ ಮೈದಾನ ದಲ್ಲಿ ಅಕ್ಟೋಬರ್ 7ರಂದು ದಸರಾ ಗ್ರಾವೆಲ್ ಉತ್ಸವ ಆಯೋಜಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೇಗೌಡರು ತಿಳಿಸಿದ್ದಾರೆ.

ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಸಭಾಂ ಗಣದಲ್ಲಿ ಸುದ್ದಿಗಾರರಿಗೆ ಈ ವಿಷಯ ತಿಳಿ ಸಿದ ಅವರು, ದಸರಾ ಅಂಗವಾಗಿ ಜಿಲ್ಲಾ ಡಳಿತ ಮತ್ತು ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ಆಟೋಮೋಟಿವ್ ಸ್ಪೋಟ್ರ್ಸ್ ಕ್ಲಬ್ ಆಫ್ ಮೈಸೂರು (ಂSಅಔಒ) ಸಂಸ್ಥೆಯು ಅಕ್ಟೋಬರ್ 7ರಂದು ಆಟೋಕ್ರಾಸ್ ಕಾರುಗಳ ರೇಸ್ ಅನ್ನು ಆಯೋಜಿಸಿದೆ ಎಂದರು.

ಸದರಿ ಲಲಿತ ಮಹಲ್ ಹೆಲಿಪ್ಯಾಡ್ ಮೈದಾ ನದ `ಬಿ’ ಖರಾಬು ವ್ಯಾಪ್ತಿಗೆ ಬರುವ ಜಾಗ ದಲ್ಲಿ ಮನು ಎಂಬುವರು ಅತಿಕ್ರಮ ಪ್ರವೇಶ ವಿಲ್ಲ ಎಂದು ಫಲಕ ಅಳವಡಿಸಿದ್ದಾರಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿ ಸಿದ ಸಚಿವರು, ಅದು ಖಾಸಗಿ ಸ್ವತ್ತು ಎಂಬುದಕ್ಕೆ ನ್ಯಾಯಾಲಯ ದಿಂದ ಜಿಲ್ಲಾಡಳಿತಕ್ಕೆ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಯಿಂದಷ್ಟೇ ನಮಗೆ ತಿಳಿದಿದೆ ಎಂದರು.

ಅಷ್ಟಕ್ಕೂ ಸಂಸ್ಥೆಯವರು ತಾತ್ಕಾಲಿಕವಾಗಿ ಜನರಿಗೆ ಮರದ ಹಲಗೆಯಿಂದ ಆಸನಗಳ ವ್ಯವಸ್ಥೆ ಮಾಡುವರೇ ಹೊರತು, ಖಾಯಂ ನಿರ್ಮಾಣ ಮಾಡುವುದಿಲ್ಲ. ರೇಸ್ ಮುಗಿದ ತಕ್ಷಣವೇ ಒಂದೇ ಒಂದು ಕಾಗದದ ಚೂರನ್ನೂ ಬಿಡದಂತೆ ಸ್ವಚ್ಛಗೊಳಿಸುವುದರಿಂದ ಈ ಒಂದು ದಿನದ ಕಾರ್ಯಕ್ರಮಕ್ಕೆ ತೊಂದರೆಯಾಗುವುದಿಲ್ಲ ಎಂದೂ ಜಿ.ಟಿ.ದೇವೇಗೌಡ, ಸಚಿವ ಸಾ.ರಾ.ಮಹೇಶ್ ಮತ್ತು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಮಾಹಿತಿ ನೀಡಿದರು.

ಗ್ರಾವೆಲ್ ಉತ್ಸವದ ಬಗ್ಗೆ ಮಾಹಿತಿ ನೀಡಿದ ಆಟೋ ಮೋಟಿವ್ ಸ್ಪೋಟ್ರ್ಸ್ ಕ್ಲಬ್ ಸದಸ್ಯ ಅರುಣ ವಿ.ಅರಸ್ ಅವರು, ಅಕ್ಟೋಬರ್ 7ರಂದು ಬೆಳಿಗ್ಗೆ 9ರಿಂದ ಸಂಜೆ 6 ಗಂಟೆ ವರೆಗೆ ಕಾರು ರೇಸುಗಳು ನಡೆ ಯಲಿದ್ದು, 1100 ಸಿಸಿ, 1100 ರಿಂದ 1400 ಸಿಸಿ, 1400ರಿಂದ 1650 ಸಿಸಿ, ಇಂಡಿಯನ್ ಓಪನ್ ಕ್ಲಾಸ್, ಅನ್‍ರಿಸ್ಟ್ರಿಕ್ಟೆಡ್ ಕ್ಲಾಸ್, ಲೇಡೀಸ್ ಕ್ಲಾಸ್ ಮತ್ತು ಎಸ್‍ಯುವಿ ಕ್ಲಾಸ್ ಮಾದರಿಯ ಕಾರುಗಳು ಸ್ಪರ್ಧೆಯಲ್ಲಿ ಭಾಗವಹಿಸಲಿವೆ ಎಂದರು. ಸರ್ವೊ ಲೂಬ್ರಿಕೆಂಟ್ಸ್ ಸಂಸ್ಥೆಯು ಅತೀ ವೇಗದ ಚಾಲಕರಿಗೆ 2 ಲಕ್ಷ ರೂ. ನಗದು ಬಹುಮಾನದ ಪ್ರಾಯೋ ಜಕರಾಗಿದ್ದು, ಎಲ್ಲಾ ಕ್ಯಾಟಗರಿಯ ವಿಜೇತರಿಗೆ ನಗದು ಬಹುಮಾನ ಹಾಗೂ ಟ್ರೋಫಿ ನೀಡಲಾಗುವುದು ಎಂದೂ ಅವರು ತಿಳಿಸಿದರು. ಸ್ಪರ್ಧೆಯಲ್ಲಿ ಭಾಗವಹಿಸುವವರಿಗೆ ಪ್ರವೇಶ ಶುಲ್ಕವಿರುತ್ತದೆ. ರೇಸು ನೋಡಲು ಬರುವವರಿಗೆ ಮುಕ್ತ ಪ್ರವೇಶ ಉಂಟು. ಹೆಚ್ಚಿನ ಮಾಹಿತಿಗಾಗಿ ಅರುಣ ವಿ.ಅರಸ್ (7760314123) ಅಥವಾ ಚರಣ್ ಎಸ್.ರಾಜ್ (7899388888)ರನ್ನು ಸಂಪರ್ಕಿಸಬಹುದಾಗಿದೆ.