ಮೈಸೂರು, ಜು.12(ಆರ್‍ಕೆಬಿ)- ಜನರ ನಂಬಿಕೆ ಹುಸಿಗೊಳಿಸದೇ ಅವರ ವಿಶ್ವಾಸ ಗಳಿಸಿ, ಬ್ಯಾಂಕಿನ ಅಭಿವೃದ್ಧಿಗೆ ಶ್ರಮಿಸು ವುದು ಸಹಕಾರ ಬ್ಯಾಂಕ್‍ಗಳ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ ಕರ್ತವ್ಯ ವಾಗಿದೆ ಎಂದು ಕರ್ನಾಟಕ ರಾಜ್ಯ ಸಹ ಕಾರ ಮಹಾಮಂಡಳದ ಅಧ್ಯಕ್ಷ ಎನ್. ಗಂಗಣ್ಣ ಇಂದಿಲ್ಲಿ ಅಭಿಪ್ರಾಯಪಟ್ಟರು.
ಮೈಸೂರು ವಿಭಾಗದ ಪಟ್ಟಣ ಸಹ ಕಾರ ಬ್ಯಾಂಕುಗಳ ಸರ್ವತೋಮುಖ ಅಭಿ ವೃದ್ಧಿಗಾಗಿ ಮುಖ್ಯ ಕಾರ್ಯನಿರ್ವಹಣಾ ಧಿಕಾರಿಗಳು ಮತ್ತು ಹಿರಿಯ ಅಧಿಕಾರಿ ಗಳಿಗೆ ಮೈಸೂರಿನ ಖಾಸಗಿ ಹೋಟೆಲ್ ನಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳ, ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕ್‍ಗಳ ಮಹಾಮಂಡಳ, ಮೈಸೂರು ಜಿಲ್ಲಾ ಸಹಕಾರ ಒಕ್ಕೂಟ, ಸಹಕಾರ ಇಲಾಖೆ ಜಂಟಿಯಾಗಿ ಮೈಸೂರಿನ ಖಾಸಗಿ ಹೋಟೆಲ್‍ನಲ್ಲಿ ಏರ್ಪಡಿಸಿದ್ದ ರಾಜ್ಯಮಟ್ಟದ ವಿಶೇóಷ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ದೇಶದ ಜನರ ಆರ್ಥಿಕ ಸ್ಥಿತಿ ಸುಧಾ ರಣೆ ಆಗಬೇಕು ಎಂಬ ಉದ್ದೇಶದಿಂದ ದೇಶದಲ್ಲಿ 42,000 ಸಹಕಾರ ಸಂಘಗಳು ಗ್ರಾಮೀಣ ಮತ್ತು ಪಟ್ಟಣ ಜನರ ಸೇವೆ ಸಲ್ಲಿಸುತ್ತಿವೆ. ದೇಶದಲ್ಲಿ ಕಾರ್ಯ ನಿರ್ವ ಹಿಸುತ್ತ್ತಿರುವ 1564 ಪಟ್ಟಣ ಸಹಕಾರ ಬ್ಯಾಂಕ್‍ಗಳ ಪೈಕಿ ರಾಜ್ಯದ 264 ಪಟ್ಟಣ ಸಹಕಾರ ಬ್ಯಾಂಕ್‍ಗಳಲ್ಲಿ 32,000 ಕೋಟಿ ಹಣ ಠೇವಣಿ ಇರಿಸಲಾಗಿದೆ. 24,000 ಕೋಟಿ ರೂ. ಮುಂಗಡ ರೂಪದಲ್ಲಿ ನೀಡ ಲಾಗಿದೆ. ಸಹಕಾರ ಇಲಾಖೆ ಮತ್ತು ಆರ್‍ಬಿಐ ಆಗಾಗ್ಗೆ ಹೊರಡಿಸುವ ಕಾನೂನು ತಿದ್ದು ಪಡಿಗಳ ಸಹಕಾರ ಸಂಘಗಳ ಚಟುವಟಿಕೆ ಗಳ ಮೇಲೆ ಉಂಟಾಗುತ್ತಿದೆ. ಬ್ಯಾಂಕ್‍ಗಳ ಆಡಳಿತ ಮಂಡಳಿ ಐದು ವರ್ಷಕ್ಕೊಮ್ಮೆ ಬದಲಾಗುತ್ತಿರುತ್ತವೆ. ಆದರೆ ಸಿಇಓಗಳು ನಿವೃತ್ತಿವರೆಗೂ ಕೆಲಸ ನಿರ್ವಹಿಸುತ್ತಲೇ ಇರುತ್ತಾರೆ. ಆದ್ದರಿಂದ ಕಾನೂನು ವ್ಯಾಪ್ತಿ ಯಲ್ಲಿ ಕೆಲಸ ಮಾಡುವ ಕುರಿತು ಸಿಇಓ ಗಳು ಮತ್ತು ಅಧಿಕಾರಿಗಳು ಬ್ಯಾಂಕಿನ ಆಡಳಿತ ಮಂಡಳಿಗೆ ತಿಳಿಸುವ ಜೊತೆಗೆ ಜನರ ವಿಶ್ವಾಸವನ್ನು ಗಳಿಸಿ ಕೆಲಸ ಮಾಡ ಬೇಕಾಗುತ್ತದೆ ಎಂದು ಹೇಳಿದರು.
ಮಹಾಮಂಡಳದ ಉಪಾಧ್ಯಕ್ಷ ಎನ್. ಚಂದ್ರಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ಸರ್ಕಾರ ಇದೇ ರೀತಿ ಸಾಲಮನ್ನಾ ಯೋಜನೆ ಮಾಡುತ್ತಾ ಹೋದರೆ ಕೃಷಿ ಪತ್ತಿನ ಸಹಕಾರ ಸಂಘಗಳು ಉಳಿಯುವುದೇ ಕಷ್ಟವಾಗುತ್ತದೆ. ಪಟ್ಟಣ ಸಹಕಾರ ಬ್ಯಾಂಕ್ ಗಳು ಸಮರ್ಥವಾಗಿ ನಡೆಯುತ್ತಿವೆ. ಗ್ರಾಹಕರನ್ನು ಕುಟುಂಬದ ಸದಸ್ಯರಂತೆ ಕಾಣಲಾಗುತ್ತಿದೆ. ಪಟ್ಟಣ ಸಹಕಾರ ಬ್ಯಾಂಕ್ ಗಳ ಆಡಳಿತ ಸಹಕಾರಿ ಕಾಯ್ದೆಯನ್ವಯ ಬ್ಯಾಂಕಿಂಗ್ ರೆಗ್ಯುಲೇಟಿಂಗ್ ಕಾಯ್ದೆ ಅನ್ವಯ ಕಾರ್ಯ ನಿರ್ವಹಿಸುತ್ತಿವೆ. ಬ್ಯಾಂಕ್‍ಗಳ ಸಿಇಓಗಳ ಶ್ರಮದಿಂದಾಗಿ ಬ್ಯಾಂಕ್‍ಗಳ ಅಭಿವೃದ್ಧಿ ಸಾಧ್ಯವಾಗುತ್ತಿದೆ ಎಂದರು.
ಆರ್‍ಬಿಐ ಹೊರಡಿಸಿರುವ ಕಾಯ್ದೆಗಳು ಹಾಗೂ ಆಗಾಗ ಆಗುವ ಕಾಯ್ದೆಗಳ ತಿದ್ದು ಪಡಿಗಳನ್ನು ತಿಳಿದು, ಬ್ಯಾಂಕ್‍ಗಳು ಕಾಂiÀರ್i ನಿರ್ವಹಿಸಬೇಕಾಗುತ್ತದೆ. ಇದು ಸಿಇಓಗಳ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಾರ್ಡನ್ ಬ್ಯಾಂಕಿಂಗ್ ಮತ್ತು ಸಹಕಾರ ಕಾಯ್ದೆಯ ಪೂರಕ ನಿಯಮಗಳು, ಇತ್ತೀಚಿನ ತಿದ್ದು ಪಡಿಗಳ ಕುರಿತು ಡಾ.ಸುರೇಶ್‍ಗೌಡ, `ಅಕೌಂಟಿಂಗ್, ಜಿಎಸ್‍ಟಿ, ಟಿಡಿಎಸ್, ಸರ್ವಿಸ್ ಟ್ಯಾಕ್ಸ್, 15(ಜಿ), 15(4)’ ಕುರಿತು ಸನ್ನದ್ದು ಲೆಕ್ಕಿಗ ಪ್ರಸನ್ನ ಶೆಣೈ, `ಸಹಕಾರ ಸಂಘಗಳ ಸಾಲ ವಸೂಲಾತಿ ಪ್ರಕ್ರಿಯೆ ಮತ್ತು ಕಾನೂನಿನ ಅರಿವು’ ಕುರಿತು ಮಂಗ ಳೂರು ಉಪ ವಿಭಾಗದ ಸಹಕಾರ ಸಂಘ ಗಳ ಸಹಾಯಕ ನಿಬಂಧಕ ಎಸ್.ಜಿ. ಮಂಜುನಾಥ್ ಸಿಂಗ್ ಉಪನ್ಯಾಸ ನೀಡಿ ದರು. ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳದ ನಿರ್ದೇಶಕರಾದ ಎ.ಕೆ.ಮನುಮುತ್ತಪ್ಪ, ಎಸ್‍ಬಿಎಂ ಮಂಜು, ವ್ಯವಸ್ಥಾಪಕ ನಿರ್ದೇಶಕ ಎಸ್.ಎನ್.ಅರುಣ್ ಕುಮಾರ್, ಮೈಸೂರು ಜಿಲ್ಲಾ ಸಹಕಾರ ಒಕ್ಕೂಟದ ಸಿಇಓ ಜಿ.ಎಂ.ಚನ್ನಬಸಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.