ಮೈಸೂರು: 95ನೇ ವರ್ಷದ ಪ್ರಸಿದ್ಧ ಮೈಸೂರು ಕರಗ ಮಹೋ ತ್ಸವದ ಅಂಗವಾಗಿ ಇಂದು ನಡೆದ 25 ಜೊತೆ ನಾಡ ಕುಸ್ತಿ ಪಂದ್ಯಾವಳಿ ನೋಡುಗರ ಕಣ್ಮನ ಸೆಳೆಯಿತು.
ತೊಡೆ-ತೋಳು ತಟ್ಟಿ, ನಿಂಬೆ ಹಣ್ಣನ್ನು ಎರಡು ಹೋಳಾಗಿಸಿ ಅಖಾಡದ ಮಣ್ಣನ್ನು ಮೈಗೆಲ್ಲಾ ಹಾಕಿ ಕೊಂಡು ಕೈ ಕೈ ಮಿಲಾಯಿಸಿದ ಕುಸ್ತಿ ಪಟು ಗಳು ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಪ್ರೇಕ್ಷಕ ರಿಂದ ಶಿಳ್ಳೆ, ಚಪ್ಪಾಳೆ ಗಿಟ್ಟಿಸಿದರು. ನಗರದ ದಸರಾ ವಸ್ತು ಪ್ರದರ್ಶನ ಪ್ರಾಧಿಕಾರದ ಡಿ.ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂ ಗಣದಲ್ಲಿ ಇಟ್ಟಿಗೆಗೂಡಿನ ಶ್ರೀ ರೇಣುಕಾ ದೇವಿ ಕರಗದ ದೇವಸ್ಥಾನ ಟ್ರಸ್ಟ್ ವತಿ ಯಿಂದ ಮೈಸೂರು ಕರಗ ಮಹೋತ್ಸವದ ಪ್ರಯುಕ್ತ ಆಯೋಜಿಸಿದ್ದ 25 ಜೊತೆ ನಾಡ ಕುಸ್ತಿ ಪಂದ್ಯಾವಳಿಗೆ ಅಪಾರ ಮೆಚ್ಚುಗೆ ವ್ಯಕ್ತವಾಯಿತು. ವಿಧಾನ ಪರಿಷತ್ ಸದಸ್ಯ ಸಂದೇಶ ನಾಗರಾಜ್ ಅಖಾ ಡದ ಅಂಬಾ ತಾಯಿಗೆ ಪೂಜೆ ಸಲ್ಲಿಸುವ ಮೂಲಕ ಪಂದ್ಯಾವಳಿಗೆ ಚಾಲನೆ ನೀಡಿದರು.
ಕುಸ್ತಿ ಪ್ರಿಯರ ಕುತೂಹಲವನ್ನು ಇಮ್ಮಡಿ ಗೊಳಿಸಿದ್ದ ಮೊದಲ ಮಾರ್ಫಿಟ್ ಕುಸ್ತಿ ಪಂದ್ಯ ದಲ್ಲಿ ಹರಿಯಾಣ ವ್ಯಾಯಾಮ ಶಾಲೆ ಪೈಲ್ವಾನ್ ಲಕ್ಕಿ ಅವರನ್ನು ಪೂನ ಸಹ್ಯಾದ್ರಿ ಸಂಕುಲ್ ಪೈಲ್ವಾನ್ ವಿಷ್ಣುಕೋಶೆ ಅವರು ಕೇವಲ 10 ನಿಮಿಷದಲ್ಲಿ ಸೋಲಿಸುವ ಮೂಲಕ ಅಮೋಘ ಜಯಗಳಿಸಿದರು. 2ನೇ ಮಾರ್ಫಿಟ್ ಪಂದ್ಯದಲ್ಲಿ ಹಂಪಾಪುರ ಮಾಸ್ಟರ್ ಮಹದೇವುರವರ ಮಗ ಡಿ.ಧ್ರುವ ಕುಮಾರ್ ಪಟ್ಟ ಶಿಷ್ಯ ಪೈಲ್ವಾನ್ ನಾಗೇಶ್ ಅವರನ್ನು ಮೈಸೂರು ಫಕೀರ್ ಅಹ ಮ್ಮದ್ ಸಾಹೇಬರ ಗರಡಿ ಪೈ.ಮಹದೇವು ಮಗ ಪೈಲ್ವಾನ್ ಪ್ರವೀಣ್ ಚಿಕ್ಕಳ್ಳಿ 40 ನಿಮಿಷ ನಡೆದ ಕಾಳಗದಲ್ಲಿ ಸೋಲಿಸಿದರು.
ನಂತರ ನಡೆದ 1 ಗಂಟೆಯ ಪಂದ್ಯದಲ್ಲಿ ದೆಹಲಿಯ ಪೈ.ನಿತಿನ್ ಅವರನ್ನು ದಾವಣ ಗೆರೆ ಕ್ರೀಡಾನಿಲಯದ ಪೈ.ಕಿರಣ್ ಭದ್ರಾವತಿ ಅವರು ಮಣಿಸಿ ಗೆಲುವು ತಮ್ಮದಾಗಿಸಿ ಕೊಂಡರು. ಮಹಾರಾಷ್ಟ್ರದ ಪೈ. ಓಂಕಾರ ಬಾತ್ ಮಾರೆ ಹಾಗೂ ಭೂತಪ್ಪನ ಗರಡಿ ಕಾಳಿಂಗರವರ ಮಗ ಪೈ.ಯಶ್ವಂತ್ ಅವರ ನಡುವೆ ನಡೆದ 30 ನಿಮಿಷಗಳ ಪಂದ್ಯ ಡ್ರಾನಲ್ಲಿ ಕೊನೆಕೊಂಡಿತ್ತು. ಉಳಿದಂತೆ ತುಮಕೂರು ಪೈ.ಜಯಸಿಂಹ ವಿರುದ್ಧ ಮೆಲ್ಲಹಳ್ಳಿ ಲೋಕೇಶ್ ಪಟ್ಟ ಪೈ.ಯೋಗೇಶ್, ದಾವಣಗೆರೆ ಪೈ. ಹುಚ್ಚಪ್ಪ ವಿರುದ್ಧ ರಮ್ಮನಹಳ್ಳಿ ಪೈ.ರವಿ, ಮಾಗಡಿ ಪೈ.ಶಿವಕುಮಾರ್ ವಿರುದ್ಧ ರಮ್ಮನ ಹಳ್ಳಿ ಪೈ.ರಾಮಚಂದ್ರ, ಪೂನ ಪೈ.ಗೋಪಿ ವಿರುದ್ಧ ಧಾರವಾಡ ಸಾಯಿ ಹಾಸ್ಟೆಲ್ ಪೈ.ಧರಿಯಪ್ಪ, ಹುಣಸೂರು ಪೈ.ಶ್ರೀನಿವಾಸ್ ಮೂರ್ತಿ ವಿರುದ್ಧ ಗಂಜಾಂ ಪೈ.ತೇಜಸ್, ಗೋಪಾಲಸ್ವಾಮಿ ಗರಡಿ ಪೈ.ವಿಶಾಲ್ ವಿರುದ್ಧ ಯಾಂದಳ್ಳಿ ಪೈ.ಸ್ವಾಮಿ, ಈಶ್ವರ ರಾಯರಗರಡಿ ಪೈ.ಶಿವು ವಿರುದ್ಧ ನಜರ್ ಬಾದ್‍ನ ಪೈ.ಚೇತನ್‍ಗೌಡ, ಕಾಳಿಸಿದ್ದನ ಹುಂಡಿ ಪೈ.ಪ್ರಸನ್ನ ವಿರುದ್ಧ ಫಕೀರ ಅ. ಸಾ.ಗರಡಿ ಪೈ.ಪ್ರಮೋದ್, ಯಡಳ್ಳಿ ಪೈ. ಭರತ್ ವಿರುದ್ಧ ಫಕೀರ ಅ.ಸಾ.ಗರಡಿ ಪೈ. ಮೈಕಲ್, ನಗುವಿನಹಳ್ಳಿ ಪೈ.ಕೀರ್ತಿ ವಿರುದ್ಧ ಹೊಸಹುಂಡಿ ಪೈ.ಸುನಿ ಅವರು ಗೆಲುವು ಸಾಧಿಸಿದರು. ಈ ವೇಳೆ ಗೆಲುವಿಗಾಗಿ ಸೆಣ ಸಾಡಿದ ಬಹುತೇಕ ಪಂದ್ಯಗಳು ಪ್ರೇಕ್ಷಕ ರಿಗೆ ಮನರಂಜನೆ ನೀಡಿ ಸಮಬಲ ಸಾಧಿಸುವ ಮೂಲಕ ಅಂತ್ಯಗೊಂಡವು. ಪಾಂಡವಪುರ ಪೈ. ಸುಜೇಂದ್ರ ವಿರುದ್ಧ ಕನಕಪುರ ಪೈ. ಸ್ವರೂಪ್‍ಗೌಡ, ಧಾರವಾಡದ ಸಾಹಿ ಪೈ. ಪ್ರವೀಣ ವಿರುದ್ಧ ರಮ್ಮನಹಳ್ಳಿ ರಾಘು ನಾಯಕ್, ಬೋಗಾದಿ ಪೈ.ರವಿ ವಿರುದ್ಧ ರಮ್ಮನಹಳ್ಳಿ ಪೈ.ರಾಜು, ನಂಜನಗೂಡು ಹಳ್ಳದ ಕೇರಿ ಪೈ.ಶಿವು ವಿರುದ್ಧ ಕುಂಬಾರ ಕೊಪ್ಪಲಿನ ಪೈ.ಮನೋಜ್, ಕ್ಯಾತ ಮಾರನಹಳ್ಳಿ ಪೈ.ಸಚಿನ್ ವಿರುದ್ಧ ಹೊಂಗಳ್ಳಿ ಪೈ.ನಿಶ್ಚಿತ್ ಹಾಗೂ ಶ್ರೀರಂಗಪಟ್ಟಣ ಪೈ.ನಿತಿನ್ ವಿರುದ್ಧ ಕುಂತನಹಳ್ಳಿ ಪೈ.ಚಲುವರಾಜು ಸೆಣ ಸಾಡಿ ಸಮಬಲ ಸಾಧಿಸಿದರು.
ಅಖಾಡಕ್ಕಿಳಿಯದೇ ಗೆದ್ದವರು: ಪ್ರತಿ ಸ್ಪರ್ಧಿ ಭಾಗವಹಿಸದಿದ್ದರಿಂದ ನಂಜನ ಗೂಡಿನ ಪೈ.ಸೂರ್ಯಕಾಂತ ಮತ್ತು ಮೈಸೂರು ಪೈ.ಮಹಮದ್ ರಾಜೀ ಖಾನ್ ಅವರನ್ನು ಜಯಶಾಲಿ ಎಂದು ಘೋಷಣೆ ಮಾಡಲಾಯಿತು.
ಮಕ್ಕಳ ಕುಸ್ತಿ: ಕುಸ್ತಿ ಅಖಾಡದಲ್ಲಿ ಸುಮಾರು 7 ವರ್ಷದ ಬಾಲಕರಾದ ಬೊಕ್ಕಹಳ್ಳಿಯ ಪೈ.ಪವರ್ ಸುಮಂತ್ ವಿರುದ್ಧ ರಮ್ಮನ ಹಳ್ಳಿ ಪೈ.ತರುಣ್ ಸೆಣಸಾಡಿ ಪ್ರೇಕ್ಷಕರಿಗೆ ಮನರಂಜನೆ ನೀಡಿದರು. ಪರಸ್ಪರ ಗೆಲುವಿ ಗಾಗಿ ಇಬ್ಬರು ಸೆಣಸಾಡಿದರಾದರೂ ಪಂದ್ಯವು ಸಮಬಲದಲ್ಲಿ ಸಮಾಪ್ತಿಯಾಯಿತು.
ಮಳೆ ಬಂದರೂ ನಿಲ್ಲದ ಉತ್ಸಾಹ: ತೀವ್ರ ಪೈಪೋಟಿಯಿಂದ ಕೂಡಿದ ಕುಸ್ತಿ ಪಂದ್ಯ ಗಳನ್ನು ಕುಸ್ತಿ ಅಭಿಮಾನಿಗಳು ಜೋರು ಮಳೆ ಯನ್ನು ಲೆಕ್ಕಿಸದೆ ಶಿಳ್ಳೆ-ಚಪ್ಪಾಳೆಗಳ ಮೂಲಕ ಅಖಾಡದಲ್ಲಿದ್ದ ಕುಸ್ತಿ ಪಟುಗಳಿಗೆ ಪ್ರೋತ್ಸಾಹ ನೀಡಿದರು. ಮಾಜಿ ಶಾಸಕ ಎಂ.ಕೆ. ಸೋಮಶೇಖರ್, ದಸರಾ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಬ್ದುಲ್ ಅಜೀಜ್, ಮಾಜಿ ಮೇಯರ್‍ಗಳಾದ ಪುರುಷೋ ತ್ತಮ್, ಸಂದೇಶ್‍ಸ್ವಾಮಿ, ಪಾಲಿಕೆ ಸದಸ್ಯ ಸಾತ್ವಿಕ್, ಮೈಸೂರು ಮಿತ್ರ ಮತ್ತು ಸ್ಟಾರ್ ಆಫ್ ಮೈಸೂರು’ ಪತ್ರಿಕೆ ಪ್ರಧಾನ ಸಂಪಾದಕ ರಾದ ಕೆ.ಬಿ.ಗಣಪತಿ, ಬಿಜೆಪಿ ಮುಖಂಡ ರಘು ಕೌಟಿಲ್ಯ, ಎನ್.ಹೆಚ್ ಆಸ್ಪತ್ರೆಯ ದಿಲೀಪ್, ಇಟ್ಟಿಗೆಗೂಡಿನ ಮುಖಂಡರಾದ ರವಿ, ರಾಘು, ಹರೀಶ್, ಗೋಕುಲ್, ಕೆಂಪೇ ಗೌಡ, ಮಂಜೇಶ್, ವಿಜಯೇಂದ್ರ, ಜಯರಾಂ, ಸಿದ್ದರಾಜು ಮತ್ತಿತರರು ಉಪಸ್ಥಿತರಿದ್ದರು.