ರಾಮನಾಥಪುರದಲ್ಲಿ ನಾಡಪ್ರಭು ಕೆಂಪೇಗೌಡ ಜಯಂತಿಮಹನೀಯರ ತತ್ವಾದರ್ಶ ಅಳವಡಿಸಿಕೊಳ್ಳಲು ಸಲಹೆ

ರಾಮನಾಥಪುರ, ಜು.22- ಮಹನಿ ಯರ ಜಯಂತಿಗಳನ್ನು ಆಚರಿಸುವ ಮೂಲಕ ಅವರ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಜಿಪಂ ಮಾಜಿ ಸದಸ್ಯ ಎಚ್.ಎಸ್. ಶಂಕರ್ ಸಲಹೆ ನೀಡಿದರು.

ನಾಡಪ್ರಭು ಕೆಂಪೇಗೌಡ ಜಯಂತಿ ಆಚರಣಾ ಸಮಿತಿ ವತಿಯಿಂದ ಇಲ್ಲಿನ ಸಂಕ್ರಾಂತಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ 3ನೇ ವರ್ಷದ ನಾಡಪ್ರಭು ಕೆಂಪೇಗೌಡ ಜಯಂತಿಯಲ್ಲಿ ಅವರು ಮಾತನಾಡಿದರು.

ಕೆಂಪೇಗೌಡರ ದೂರದೃಷ್ಟಿ ಫಲವಾಗಿ ಇಂದು ಬೆಂಗಳೂರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿ, ವಿಶ್ವದರ್ಜೆ ನಗರ ಗಳಲ್ಲೊಂದಾಗಿದೆ. ಬೆಂಗಳೂರು ನಗರ ನಿರ್ಮಾಣ ವೇಳೆ ಕೆಂಪೇಗೌಡರು ಎಲ್ಲಾ ವರ್ಗದವರ ಅಭಿವೃದ್ಧಿಗಾಗಿ ಅನೇಕ ಸೌಲಭ್ಯ ಕಲ್ಪಿಸಿ, ಬಡಾವಣೆಗಳನ್ನು ನಿರ್ಮಾಣ ಮಾಡಿದರು. ಅಲ್ಲದೇ ರಾಜ್ಯದ ವಿವಿಧೆಡೆ ಕೆರೆ-ಕಟ್ಟೆಗಳನ್ನು ನಿರ್ಮಿಸಿದರು. ಇವರ ನಾಡಪ್ರೇಮ, ಆದರ್ಶ ಜೀವನ ನಮಗೆ ಮಾದರಿ ಎಂದರು.

ಕೊಣನೂರು ಬಿಎಸ್‍ಎಸ್ ಪೌಢಶಾಲೆ ಮುಖ್ಯ ಶಿಕ್ಷಕ ಹೊನ್ನೇಗೌಡ ಮಾತನಾ ಡಿದರು. ಸಮಾರಂಭದಲ್ಲಿ ರೈತ ಮುಖಂಡರು ಮತ್ತು ಉತ್ತಮ ಅಂಕ ಪಡೆದ ವಿದ್ಯಾರ್ಥಿ ಗಳನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಹಿರಿಯ ರೈತ ಮುಖಂಡ ರಾಜೇಗೌಡ, ಕಾರ್ಗಲ್ ಗೋವಿಂದೇಗೌಡ, ರಾಜೇಗೌಡ, ಅಣ್ಣೇಗೌಡ, ಶ್ರೀನಿವಾಸ, ಕೃಷ್ಣೇಗೌಡ, ಮತ್ತಿಗೋಡು ಕೃಷ್ಣೇಗೌಡ ಮುಂತಾದವರಿದ್ದರು. ಇದಕ್ಕೂ ಮುನ್ನ ಕೆಂಪೇಗೌಡರ ಭಾವಚಿತ್ರವನ್ನು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾ ಯಿತು. ಈ ವೇಳೆ ಉದ್ದೂರು ರವಿ ವೀರಗಾಸೆ ನೃತ್ಯ ನೆರೆದಿದ್ದವರ ಗಮನ ಸೆಳೆಯಿತು.