ಕರೆ ಮಾಡಿದರೆ ಮತದಾರರ ಪಟ್ಟಿಯಲ್ಲಿನ ಹೆಸರು, ವಿಳಾಸ, ಮತಗಟ್ಟೆ ಮಾಹಿತಿ ಕ್ಷಣಾರ್ಧದಲ್ಲಿ ಲಭ್ಯ

ಮೈಸೂರು: ಮತದಾರರ ಪಟ್ಟಿಯಲ್ಲಿ ಹೆಸರು, ವಿಳಾಸ ಹಾಗೂ ಮತಗಟ್ಟೆಯ ಬಗ್ಗೆ ಮಾಹಿತಿ ಗಳನ್ನು ಪಡೆಯಲು ಮತದಾರರಿಗೆ ಅನು ಕೂಲವಾಗಲಿ ಎಂಬ ಹಿನ್ನೆಲೆಯಲ್ಲಿ ಭಾರತೀಯ ಚುನಾವಣಾ ಆಯೋಗವು 1950 ಸಂಖ್ಯೆಯ ಉಚಿತ ಸಹಾಯವಾಣಿ ತೆರೆದಿದೆ.

ಇಡೀ ದೇಶದಲ್ಲಿ ಈ ಒಂದು ಸಂಖ್ಯೆಯ ಸಹಾಯವಾಣಿಗೆ ಮತದಾ ರರು ಉಚಿತ ಕರೆ ಮಾಡಿ ಮತದಾರರ ಪಟ್ಟಿಯಲ್ಲಿನ ತಮ್ಮ ಹೆಸರು, ವಿಳಾಸ, ಮತಗಟ್ಟೆಯ ಮಾಹಿತಿ ಪಡೆಯಬಹುದಾಗಿದೆ.

ಎಲ್ಲಾ ಜಿಲ್ಲಾ ಚುನಾವಣಾ ಅಧಿಕಾರಿ ಗಳ ಕಚೇರಿಯಲ್ಲಿ ಇದರ ಕಂಟ್ರೋಲ್ ರೂಂ ಅನ್ನು ತೆರೆಯಲಾಗಿದೆ. ಮತದಾ ರರು ಯಾವ ಜಿಲ್ಲೆಯಿಂದ ಕರೆ ಮಾಡು ತ್ತಾರೋ ಆ ಜಿಲ್ಲಾ ಕೇಂದ್ರ ಕಂಟ್ರೋಲ್ ರೂಂಗೆ ಕರೆ ಹೋಗುವಂತೆ ಮ್ಯಾಪಿಂಗ್ ಮಾಡಲಾಗಿದೆ. ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ನಿಮ್ಮ ಚುನಾ ವಣಾ ಗುರುತಿನ ಕಾರ್ಡ್ ನಂಬರ್ ಹೇಳಿದರೆ ನಿಮ್ಮ ಮತದಾರರ ಪಟ್ಟಿಯಲ್ಲಿ ರುವ ಗೊಂದಲದ ಬಗ್ಗೆ ನೀವು ಕುಳಿತಲ್ಲಿಯೆ ಕ್ಷಣಾರ್ಧದಲ್ಲಿ ಮಾಹಿತಿ ಪಡೆಯಬಹು ದಾಗಿದೆ. ಚುನಾವಣಾ ಆಯೋಗವು ಸಿದ್ದ ಪಡಿಸಿರುವ ಈ ಸಹಾಯವಾಣಿಯ ಮೂಲಕ ನಿಮ್ಮ ಮತಗಟ್ಟೆ ಸಂಖ್ಯೆ ಹಾಗೂ ಮತದಾನ ಮಾಡಬೇಕಾದ ಸ್ಥಳದ ಬಗ್ಗೆಯೂ ನಿಖರ ಮಾಹಿತಿ ಪಡೆಯಬಹುದು.