ಮೈಸೂರು: ಎಕ್ಸೈಡ್ ಲೈಫ್ ಇನ್ಸೂರೆನ್ಸ್ ತನ್ನ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ಕಾರ್ಯಕ್ರಮ ಅಂಗವಾಗಿ ಮೈಸೂರ ನಗರ ಸಂಚಾರ ಪೊಲೀಸರು ಮತ್ತು ಆಯ್ದ ನಗರದ ಶಾಲೆಯ ವಿದ್ಯಾರ್ಥಿಗಳ ಜೊತೆಗೂಡಿ ಹೆಲ್ಮೆಟ್ ಸುರಕ್ಷತೆ ಕುರಿತು ಜಾಗೃತಿ ಅಭಿಯಾನ ನಡೆಸಿತು. ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ನಡೆದ ಹೆಲ್ಮೆಟ್ ಸೇವ್ಸ್ ಚಿಲ್ಡ್ರನ್ಸ್ ಅಭಿಯಾನವು ರಸ್ತೆ ಸುರಕ್ಷತೆ ಕ್ರಮವಾಗಿ ಹೆಲ್ಮೆಟ್ ಧರಿಸುವ ಪ್ರಾಮುಖ್ಯತೆಯನ್ನು ಕುರಿತು ಅರಿವು ಮೂಡಿಸಿತು.
ಜಾಗೃತಿ ಅಭಿಯಾನವನ್ನು ನಗರದ ಸಹಾಯಕ ಪೊಲೀಸ್ ಆಯುಕ್ತ (ಸಂಚಾರ) ಜಿ.ಎನ್.ಮೋಹನ್, ಡಾ.ವಿಕ್ರಂ ಅಮಟೆ ಅವರು ಜಿಎಸ್‍ಎಸ್‍ಎಸ್ ವೃತ್ತದಲ್ಲಿ ಉದ್ಘಾಟಿ ಸಿದ್ದು, ವಿದ್ಯಾರ್ಥಿ ವರ್ಗದಲ್ಲಿ ಅಪಘಾತ ಪ್ರಮಾಣ ಕುಗ್ಗಿಸುವ ಸಂಚಾರ ಪೊಲೀಸರ ಕಾರ್ಯನಿರ್ವಹಣೆಯನ್ನು ಇನ್ನಷ್ಟು ಚುರುಕಾಗಿಸಲು ಒತ್ತು ನೀಡಿದರು.
ವಿದ್ಯಾರ್ಥಿಗಳು ರಸ್ತೆಗಳಲ್ಲಿ ಭಿತ್ತಿಪತ್ರ ಹಿಡಿದು ಮೆರವಣಿಗೆ ಕೈಗೊಂಡಿದ್ದು, ಹೆಲ್ಮೆಟ್ ಧಾರಣೆ ಕುರಿತು ದ್ವಿಚಕ್ರವಾಹನ ಚಾಲಕರಲ್ಲಿ ಅರಿವು ಮೂಡಿಸಲು ಒತ್ತು ನೀಡಿದರು. ಕೇಂದ್ರೀಯ ವಿದ್ಯಾಲಯದ ವಿದ್ಯಾರ್ಥಿಗಳು ಹೆಲ್ಮೆಟ್ ಧರಿಸಿ ಎಕ್ಸೈಡ್ ಲೈಫ್ ಸ್ವಯಂ ಸೇವಕರ ಜೊತೆಗೂಡಿ ಜಿಎಸ್‍ಎಸ್‍ಎಸ್ ವೃತ್ತದಲ್ಲಿ (ಮೈಸೂರು-ಮಳವಳ್ಳಿ ರಸ್ತೆ) ಜಾಗೃತಿ ಮೂಡಿಸಿದ್ದು, ಮಕ್ಕಳನ್ನು ಕರೆದುಕೊಂಡು ವಾಹನದಲ್ಲಿ ಹೋಗುವ ಪೋಷಕರಲ್ಲಿ ಅರಿವು ಮೂಡಿಸಿದರು. ಈ ಸಂದರ್ಭದಲ್ಲಿ ಉಪ ಪೊಲೀಸ್ ಕಮಿಷನರ್ (ಅಪರಾಧ ಮತ್ತು ಸಂಚಾರ) ಡಾ.ವಿಕ್ರಮ್ ಅಮಟೆ ಮಾತನಾಡಿ, ಸಂಚಾರ ಪೊಲೀಸರ ಮುಖ್ಯವಾದ ಹೊಣೆಗಾರಿಕೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಹಾಗೂ ರಸ್ತೆ ಅಪಘಾತಗಳನ್ನು ಕುಗ್ಗಿಸುವುದು. ಸರಿಯಾದ ಹೆಲ್ಮೆಟ್ ಧರಿಸುವುದು ದುರದೃಷ್ಟಕರ ಸಂದರ್ಭದಲ್ಲಿ ನಿಮ್ಮನ್ನು ರಕ್ಷಿಸಲಿದೆ ಎಂದರು.
\