ಮೈಸೂರು: ಮೈಸೂರಿನ ಕೇಂದ್ರೀಯ ಆಹಾರ ತಾಂತ್ರಿಕ ಸಂಶೋ ಧನಾ ಸಂಸ್ಥೆ (ಸಿಎಫ್‍ಟಿಆರ್‍ಐ)ಯಲ್ಲಿ ಇಂದು ರಾಷ್ಟ್ರೀಯ ತಂತ್ರಜ್ಞಾನ ದಿನವನ್ನು ಆಚರಿಸಲಾಯಿತು. `ಜನರಿಗಾಗಿ ವಿಜ್ಞಾನ ಮತ್ತು ವಿಜ್ಞಾನಕ್ಕಾಗಿ ಜನರು’ ಘೋಷ ದೊಂದಿಗೆ ಸಿಎಸ್‍ಐಆರ್-ಸಿಎಫ್‍ಟಿ ಆರ್‍ಐ ಆವರಣದ ಐಎಫ್‍ಟಿಟಿಸಿ ಸಭಾಂ ಗಣದಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ತಂತ್ರ ಜ್ಞಾನ ದಿನಾಚರಣೆ ಕಾರ್ಯಕ್ರಮವನ್ನು ಎನ್‍ಐಇ ವಿಶ್ವವಿದ್ಯಾನಿಲಯದ ಕುಲಪತಿ ಡಿ.ಎ.ಪ್ರಸನ್ನ ಉದ್ಘಾಟಿಸಿದರು.
ವಿಜ್ಞಾನಿಗಳು ಹಾಗೂ ಸಿಎಫ್‍ಟಿಆರ್‍ಐ ಸಂಶೋಧಕರನ್ನುದ್ದೇಶಿಸಿ ಮಾತನಾಡಿದ ಅವರು, ಆಹಾರ ಸಂಶೋಧನೆಗೆ ಉತ್ತಮ ಪ್ರಯೋಗಾಲಯ, ಶಿಕ್ಷಣ ತಜ್ಞರು ಹಾಗೂ ಮೂಲ ಸೌಲಭ್ಯಗಳ ಅಗತ್ಯವಿದೆ. ಬೇಸಿಗೆ ರೀಸರ್ಚ್, ಅಪ್ಲೈಡ್ ರೀಸರ್ಚ್ ಹಾಗೂ ಸೊಸೈಟಲ್ ಇಂಪ್ಯಾಕ್ಟ್‍ನಂತಹ ಅಂಶ ಗಳೂ ಯಾವುದೇ ಸಂಸ್ಥೆಯ ಬೆಳವಣ ಗೆಗೆ ಪ್ರಮುಖವಾಗುತ್ತಿವೆ ಎಂದರು.
ನಮ್ಮ ಸಂಶೋಧನೆಗಳು ಹೇಗೆ ಸಮಾ ಜಕ್ಕೆ ಮಾರಕ ಹಾಗೂ ಪೂರಕವಾಗುತ್ತವೆ ಎಂಬುದಕ್ಕೆ ಉದಾಹರಣೆ ನೀಡಿದ ಪ್ರಸನ್ನ ಅವರು, ಫುಟ್‍ಪಾತ್ ಮೇಲೆ ತಯಾರು ಮಾಡುವ ರುಚಿಕರ ಬೋಂಡ ಸೇವಿಸಿ ದರೆ ಜನರು ಅನಾರೋಗ್ಯಕ್ಕೆ ತುತ್ತಾಗು ತ್ತಾರೆ. ಏಕೆಂದರೆ ಅಲ್ಲಿ ಬಳಸುವ ಎಣ್ಣೆ ಕೆಲ ಹೋಟೆಲುಗಳಲ್ಲಿ ತಿಂಡಿ ಕರಿದು ಉಳಿದಿ ರುವುದು. ಸಿಎಫ್‍ಟಿಆರ್‍ಐನ ಡಾ. ಸೋಮ ಸುಂದರಂ ಹಾಗೂ ತಂಡದ ವಿಜ್ಞಾನಿಗಳು ಆ ಕರಿದ ಎಣ್ಣೆಯನ್ನು ಬಳಸಿ ಅದರಿಂದ ಬಯೋ ಡೀಸೆಲ್ ಉತ್ಪಾದಿಸುವ ತಂತ್ರ ಜ್ಞಾನವನ್ನು ಕಂಡುಹಿಡಿದರು. ನಮ್ಮ ಸಂಶೋಧನೆಗಳು ಈ ರೀತಿ ಸಮಾಜದ ಅಭಿ ವೃದ್ಧಿಗೆ ಪೂರಕವಾಗಿರಬೇಕು ಎಂದರು.
ಗೌರವ ಅತಿಥಿಗಳಾಗಿ ಪಾಲ್ಗೊಂಡಿದ್ದ ಬೆಂಗಳೂರಿನ ಶ್ರೀ ತತ್ವ ಸಂಸ್ಥೆಯ ನಿರ್ವ ಹಣಾ ನಿರ್ದೇಶಕ ಅರವಿಂದ ವರ್ಚಸ್ವೀ ಅವರು, ಆರೋಗ್ಯವನ್ನು ಸುಸ್ಥಿರವಾಗಿಟ್ಟು ಕೊಳ್ಳಲು ಆಹಾರವನ್ನು ಯಾವಾಗ ಹೇಗೆ, ಸೇವಿಸಬೇಕೆಂಬುದನ್ನು ಅರಿತಿರ ಬೇಕು ಎಂದರು.
ಯೋಗ, ಧ್ಯಾನ, ಆಯುರ್ವೇದವನ್ನು ನಿತ್ಯ ಕರ್ಮವಾಗಿಸಿಕೊಂಡು ಶಿಸ್ತುಬದ್ಧ ಜೀವನ ನಡೆಸಿದಲ್ಲಿ ಉತ್ತಮ ಆರೋಗ್ಯ ನಿರ್ವಹಿಸಬಹುದು. ಅದಕ್ಕೆ ಸಂಶೋಧನೆ, ತಂತ್ರಜ್ಞಾನ ಹಾಗೂ ಶಿಕ್ಷಣ ನೀತಿಗಳೂ ಸಹ ಗುಣಾತ್ಮಕ ಆಹಾರ ಸುರಕ್ಷತೆ ಒದ ಗಿಸಲು ಸಹಕಾರಿಯಾಗಲಿವೆ ಎಂದೂ ಅಭಿಪ್ರಾಯಪಟ್ಟರು.
ಸಿಎಫ್‍ಟಿಆರ್‍ಐನಲ್ಲಿ ಉತ್ತಮ ಸಾಧನೆ ಮಾಡಿದ ಟೆಕ್ನಾಲಜಿ ಟ್ರಾನ್ಸ್‍ಫರ್, ಫ್ಲೋರ್ ಮಿಲ್ಲಿಂಗ್, ಸ್ಟೈಸನ್- ಫ್ಲೇವರ್ಸ್, ಫ್ರೂಟ್ಸ್ ಅಂಡ್ ವೆಜಿಟೆಬಲ್ ಟೆಕ್ನಾಲಜಿ, ಇಂಡಸ್ಟ್ರಿ ಪ್ರಾಡಕ್ಟ್, ಫುಡ್ ಪ್ರೊಸೆಸಿಂಗ್ ಟೆಕ್ನಾಲಜಿ, ಫುಡ್ ಸೇಫ್ಟಿ ಅಂಡ್ ಅನಾಲಿಟಿಕಲ್ ಟೆಕ್ನಾಲಜಿ ವಿಭಾಗಗಳ ಮುಖ್ಯಸ್ಥರು ಹಾಗೂ ವಿಜ್ಞಾನಿಗಳಿಗೆ ಗಣ್ಯರು ಇದೇ ವೇಳೆ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು.
ಮಾಲ್ನೂಟ್ರೀಷನ್ ಕುರಿತು ಕರ್ನಾಟಕ ಹೆಲ್ತ್ ಪ್ರಮೋಷನ್ ಟ್ರಸ್ಟ್(ಏಊPಖಿ)ನ ಮೋಹನ ಹಾಗೂ ಸಿಎಫ್‍ಟಿಆರ್‍ಐ ನಿರ್ದೇ ಶಕ ಡಾ.ಕೆ.ಎಸ್‍ಎಂಎಸ್ ರಾಘವರಾವ್ ಅವರು ಒಡಂಬಡಿಕೆ(ಒಔU)ಗೆ ಇದೇ ವೇಳೆ ಸಮಾರಂಭದಲ್ಲಿ ಸಹಿ ಹಾಕಿದರು.
ಸಂಸ್ಥೆಯ ಹಿರಿಯ ವಿಜ್ಞಾನಿ ಸುರೇಶ ಡಿ.ಸಕ್ಕರೆ, ಫುಡ್ ಪ್ಯಾಕೇಜಿಂಗ್ ವಿಭಾಗದ ಮುಖ್ಯಸ್ಥ ಹೆಚ್.ಎಸ್. ಸುರೇಶ ಕಾರ್ಯ ಕ್ರಮದಲ್ಲಿ ಉಪಸ್ಥಿತರಿದ್ದರು.