ಬೇರೆಯವರ ಸಾಹಿತ್ಯ ಕಾಪಿ ಹೊಡೆಯುವ ಢೋಂಗಿ ಸಾಹಿತಿಗಳ ಬಗ್ಗೆ ಎಚ್ಚರ ಅಗತ್ಯ ಸಾಹಿತಿ ಹೆತ್ತೂರು ನಾಗರಾಜು

ಆಲೂರು: ಕೆಲವು ವ್ಯಕ್ತಿಗಳು ಬೇರೆಯವರ ಸಾಹಿತ್ಯವನ್ನು ಕಾಪಿ ಹೊಡೆದು ಸಾಹಿತ್ಯವನ್ನು ರಾಜಕೀಯಕರಣಗೊಳಿ ಸುತ್ತಿದ್ದಾರೆ. ಇಂತಹ ಢೋಂಗಿ ಸಾಹಿತಿಗಳ ಬಗ್ಗೆ ಎಚ್ಚರದಿಂದಿರಬೇಕು ಎಂದು ಸಾಹಿತಿ ಹೆತ್ತೂರು ನಾಗರಾಜು ಹೇಳಿದರು.

ಪಟ್ಟಣದ ಬಿಲಿವರ್ಸ್ ಚರ್ಚ್‍ನಲ್ಲಿ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ವತಿ ಯಿಂದ ಹಮ್ಮಿಕೊಳ್ಳಲಾಗಿದ್ದ ತಾಲೂಕು ಮಟ್ಟದ ಪದಗ್ರಹಣ ಹಾಗೂ ಜಿಲ್ಲಾ ಮಟ್ಟದ ಕವಿಗೋಷ್ಠಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಎಲೆಮರೆ ಕಾಯಿಯಂತಿರುವ ಯುವ ಕವಿಗಳನ್ನು ಹೊರ ತೆಗೆಯುವ ಕೆಲಸ ವನ್ನು ಕೊಟ್ರೇಶ್ ಎಸ್.ಉಪ್ಪಾರ್ ಹಾಗೂ ವಾಸು ಸಮುದ್ರವಳ್ಳಿಯವರ ನಾಯಕತ್ವ ದಲ್ಲಿ ಈ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಮಾಡುತ್ತಿದೆ ಎಂದು ಸಂತೋಷ ವ್ಯಕ್ತ ಪಡಿಸಿದರು. ಸಾಹಿತ್ಯ ಲೋಕದಲ್ಲಿ ನಾನು ಸಾಹಿತಿ ಎಂದು ಹೇಳಿಕೊಂಡು ಇನ್ನೊ ಬ್ಬರ ಸಾಹಿತ್ಯಗಳನ್ನು ಕಾಪಿ ಹೊಡೆಯು ತ್ತಿರುವುದರಿಂದ ನಿಜವಾದ ಸಾಹಿತಿಗಳಿಗೆ ಗೌರವ ಕಡಿಮೆಯಾಗುತ್ತಿದೆ. ಜೊತೆಗೆ ಇಂತಹ ಢೋಂಗಿ ಸಾಹಿತಿಗಳ ಬಗ್ಗೆ ಎಚ್ಚರ ದಿಂದಿರಬೇಕು ಎಂದು ತಿಳಿಸಿದರು.

ತಾಲೂಕು ಪಂಚಾಯಿತಿ ಸದಸ್ಯ ನಟರಾಜು ನಾಕಲಗೂಡು ಮಾತನಾಡಿ, ಸಾಹಿತ್ಯಕ್ಕೆ ಅಧ್ಯಯನ ಅತಿಮುಖ್ಯ. ಸಾಹಿತ್ಯ ಎಂಬುದು ಎಲ್ಲರಿಗೂ ಒಲಿಯು ವಂತದ್ದಲ್ಲ. ಸಾಹಿತ್ಯದೊಳಗೆ ತನ್ನನ್ನು ತಾನು ತೊಡಗಿಸಿಕೊಂಡಾಗ ಮಾತ್ರ ಒಲಿ ಯುವಂತಹದ್ದು. ಆದ್ದರಿಂದ ನಮ್ಮಂತಹ ರಾಜಕಾರಣಿಗಳು ಸಾಹಿತ್ಯದಲ್ಲಿ ಹೆಚ್ಚು ಆಸಕ್ತಿ ಇರುವವರನ್ನು ಗುರುತಿಸಿ ಅವರಿಗೆ ಸಹಕಾರ ನೀಡುವುದಷ್ಟೇ ನಮ್ಮ ಕರ್ತವ್ಯ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಕೊಟ್ರೇಶ್ ಎಸ್.ಉಪ್ಪಾರ್ ಮಾತ ನಾಡಿ, ಕೇಂದ್ರ ಕನ್ನಡ ಸಾಹಿತ್ಯ ವೇದಿ ಕೆಯ ಮುಖ್ಯ ಧ್ಯೇಯ ಎಲೆಮರೆ ಕಾಯಿ ಯಂತಿರುವ ಸಾಹಿತಿಗಳನ್ನು ಗುರುತಿಸಿ ಮುಖ್ಯವಾಹಿನಿಗೆ ತರುವುದಾಗಿದೆ. ಅದ ರಲ್ಲೂ ಯುವ ಪ್ರತಿಭೆಗಳ ಅನಾವರಣ, ಸಾಹಿತ್ಯಿ, ಶೈಕ್ಷಣಿಕ, ಸಾಂಸ್ಕøತಿಕವಾಗಿ ಬೆಳಕು ಚೆಲ್ಲುವುದು ಇಲ್ಲಿಯ ಪ್ರಮುಖ ಗುರಿಯಾ ಗಿದೆ. ಒಂದು ಸಂಘಟನೆ ಅಥವಾ ಒಬ್ಬ ಸಾಹಿತಿಯ ಬೆಳವಣಿಗೆಯಲ್ಲಿ ಮಾಧ್ಯಮಗಳ ಪಾತ್ರ ಮಹತ್ವದ್ದು. ಇಲ್ಲವಾದರೆ ಯಾವುದೂ ಬೆಳಕಿಗೆ ಬರಲು ಸಾಧ್ಯವಿಲ್ಲ ಎಂದರು.

ಪದಗ್ರಹಣ: ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ತಾಲೂಕು ಘಟಕದ ಅಧ್ಯಕ್ಷ ರಾಗಿ ಸಾಹಿತಿ ರಘು ಕೆ.ಸಿ.ಹೊಸೂರು ಅಧಿಕಾರ ಸ್ವೀಕರಿಸಿದರು.

ಕಾರ್ಯಕ್ರಮದಲ್ಲಿ ಕೇಂದ್ರ ಸಾಹಿತ್ಯ ವೇದಿಕೆಯ ಗೌರವ ಅಧ್ಯಕ್ಷ ಕುಮಾರ್ ಛಲವಾದಿ, ಜಿಲ್ಲಾಧ್ಯಕ್ಷ ವಾಸು ಸಮುದ್ರ ವಳ್ಳಿ, ತಾಲೂಕು ಅಧ್ಯಕ್ಷ ರಘು ಕೆ.ಸಿ. ಹೊಸೂರು, ಜಿಲ್ಲಾ ಉಪಾಧ್ಯಕ್ಷರಾದ ಎಚ್.ವೇದಶ್ರೀ ರಾಜ್, ಹೇಮರಾಗ, ಗಂಜಲಗೂಡು ಗೋಪಾಲೇಗೌಡ, ತಾಲೂಕು ಕೋಶಾಧ್ಯಕ್ಷ ಧರ್ಮ ಕೆರಲೂರು, ಖಜಾಂಚಿ ಧರ್ಮ, ತಾಲೂಕು ಕಾರ್ಯದರ್ಶಿ ಕೆ.ಸಿ. ಗೀತಾ, ಸಹಕಾರ್ಯದರ್ಶಿ ಲಕ್ಷ್ಮಣ್, ಚರ್ಚ್ ಫಾದರ್ ಬಸವರಾಜ್, ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನ ಗೌರವಾಧ್ಯಕ್ಷ ಎಚ್.ಎಸ್. ವೆಂಕಟೇಶ್, ಗ್ರಂಥಪಾಲಕ ಟಿ.ಕೆ.ನಾಗ ರಾಜ್, ಬ್ಯಾಕರವಳ್ಳಿ ವೆಂಕಟೇಶ್, ಎಚ್.ಡಿ.ಪ್ರದೀಪ್, ಟಿ.ಎಂ.ಸತೀಶ್, ಟಿ.ಕೆ. ಕುಮಾರಸ್ವಾಮಿ, ಆದಿಲ್ ಪಾಷ, ಸಲೀಂ ಮುಂತಾದವರು ಉಪಸ್ಥಿತರಿದ್ದರು.