ನಿಫಾ ವೈರಸ್; ಮೈಸೂರು ಜಿಲ್ಲೆ ಜನರಿಗೆ ಆತಂಕ ಬೇಡ

ಮೈಸೂರು: ಕೇರಳ ದಲ್ಲಿ ನಿಫಾ ವೈರಸ್ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲೆಯಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ಜನರು ಆತಂಕಪಡುವ ಅಗತ್ಯವಿಲ್ಲ. ಎಲ್ಲೆಡೆ ಜಾಗೃತಿ ಕಾಯಕ್ರಮ ನಡೆಸುವುದರೊಂದಿಗೆ ಕೇರಳದಿಂದ ಬರುವ ಪ್ರವಾಸಿಗರನ್ನು ತಪಾಸಣೆಗೊಳ ಪಡಿಸಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಆರ್.ವೆಂಕಟೇಶ್ ತಿಳಿಸಿದ್ದಾರೆ.

ಮೈಸೂರಿನ ನಜರ್‍ಬಾದ್‍ನಲ್ಲಿರುವ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾ ಣಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಇದುವರೆಗೂ ನಿಫಾ ವೈರಸ್ ಸೋಂಕಿತರು ಕಂಡು ಬಂದಿಲ್ಲ. ಯಾವುದೇ ಸಂದರ್ಭವನ್ನು ಎದುರಿಸಲು ಇಲಾಖೆ ಸಜ್ಜಾಗಿದೆ. ಕೇರಳದಲ್ಲಿ ಸೋಂಕಿ ತರು ಪತ್ತೆಯಾಗುತ್ತಿದ್ದಂತೆಯೇ ಜಿಲ್ಲೆಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಕೇರಳದಿಂದ ಹೆಚ್.ಡಿ.ಕೋಟೆ, ಕೊಡಗು ಮಾರ್ಗವಾಗಿ ಮೈಸೂರಿಗೆ ಬರುವ ಪ್ರವಾಸಿಗರ ವಾಹನ ತಡೆದು ತಪಾಸಣೆ ನಡೆಸಲಾಗುತ್ತಿದೆ. ಸೋಂಕಿತರಲ್ಲಿರುವ ಲಕ್ಷಣಗಳು ಯಾರಲ್ಲಾ ದರೂ ಕಂಡು ಬಂದರೆ, ಅವರಿಗೆ ರಕ್ತ ಪರೀಕ್ಷೆ ನಡೆಸಲಾಗುತ್ತದೆ. ಅಲ್ಲದೆ ರೋಗ ನಿರೋಧಕ ಶಕ್ತಿ ವೃದ್ಧಿಸುವ ಔಷಧಿ ನೀಡಲಾಗುತ್ತದೆ ಎಂದರು.

ಕೆ.ಆರ್.ಆಸ್ಪತ್ರೆಯಲ್ಲಿ 5 ಹಾಸಿಗೆಗಳನ್ನು ಮೀಸಲಿಡುವಂತೆ ವ್ಯವಸ್ಥೆ ಮಾಡುವ ಜತೆಗೆ ನಿಫಾ ವೈರಸ್ ತಡೆಗೆ ಬೇಕಾದ ಎಲ್ಲಾ ಮುಂಜಾ ಗ್ರತಾ ಕ್ರಮಕ್ಕೂ ಇಲಾಖೆ ಭರದ ತಯಾರಿ ಮಾಡಿಕೊಂಡಿದೆ. ಮೈಸೂರು ಅರಮನೆ, ಚಾಮರಾಜೇಂದ್ರ ಮೃಗಾಲಯ, ಚಾಮುಂಡಿಬೆಟ್ಟ ಸೇರಿ ದಂತೆ ಪ್ರವಾಸಿಗರು ಹೆಚ್ಚು ಭೇಟಿ ನೀಡುವ ಸ್ಥಳಗಳಲ್ಲಿ ತ್ರಿಭಾಷಾದಲ್ಲಿ ಬೃಹತ್ ಹೋಲ್ಡಿಂಗ್ಸ್ ಹಾಕಿ, ಕರಪತ್ರ ವಿತರಿಸಿ ಅರಿವು ಮೂಡಿ ಸುವಂತೆ ಮಾಡಲಾಗುತ್ತದೆ. ಜಿಲ್ಲಾ ಸಾಂಕ್ರಾ ಮಿಕ ವಿಭಾಗ, ತಾಲೂಕು ಆಸ್ಪತ್ರೆಯಲ್ಲಿ ಪ್ರತ್ಯೇಕ ಘಟಕಗಳನ್ನು ತೆರೆಯಲಾಗುತ್ತದೆ. ಸೋಂಕಿತರು ಕಂಡು ಬಂದರೆ ಚಿಕಿತ್ಸೆ ನೀಡಲಾಗುತ್ತದೆ ಎಂದು ತಿಳಿಸಿದರು.

ದೃಢಪಟ್ಟರೆ ಘೋಷಣೆ: ಶಂಕಿತ ನಿಫಾ ವೈರಸ್ ಇದ್ದರೂ ಖಚಿತಪಡದೆ ಘೋಷಣೆ ಮಾಡದಂತೆ ಖಾಸಗಿ ಆಸ್ಪತ್ರೆಗಳಿಗೆ ಕಟ್ಟು ನಿಟ್ಟಿನ ಸೂಚನೆ ನೀಡಲಾಗಿದೆ. ಶಂಕಿತ ವ್ಯಕ್ತಿಯ ರಕ್ತ ತಪಾಸಣೆಯನ್ನು ಪುಣೆಯ ಎನ್‍ಐವಿ ಪ್ರಯೋಗಾಲಯಕ್ಕೆ ಕಳುಹಿಸ ಲಾಗುತ್ತದೆ. ಅಲ್ಲಿ ಪಾಸಿಟಿವ್ ವರದಿ ಬಂದರೆ ಆರೋಗ್ಯ ಇಲಾಖೆಯಿಂದಲೇ ಅಧಿಕೃತ ವಾಗಿ ಸೋಂಕಿತರ ಬಗ್ಗೆ ಮಾಹಿತಿ ನೀಡ ಲಾಗುತ್ತದೆ. ಜನರಲ್ಲಿ ಆತಂಕ ಸೃಷ್ಠಿಸು ವಂತೆ ಪ್ರಯೋಗಾಲಯದ ವರದಿ ಬರುವ ಮುನ್ನವೇ ಖಾಸಗಿ ಆಸ್ಪತ್ರೆಗಳು ನಿಫಾ ವೈರಸ್ ಸೋಂಕಿತರ ಬಗ್ಗೆ ಮಾಹಿತಿ ನೀಡು ವಂತಿಲ್ಲ. ಈಗಾಗಲೇ ಕೆಪಿಎಂಇ ಆಕ್ಟ್ ಪ್ರಕಾರ ಎಲ್ಲಾ ಖಾಸಗಿ ಆಸ್ಪತ್ರೆಗಳಿಗೆ ನಿರ್ದೇ ಶನ ನೀಡಲಾಗಿದೆ. ತಪ್ಪು ಮಾಹಿತಿ ನೀಡಿ ದರೆ ಅಥವಾ ದೃಢಪಡದೆ ಘೋಷಿಸಿದರೆ ಸಾರ್ವಜನಿಕರು ಭಯ ಬೀಳುವ ಆತಂಕ ಇರುತ್ತದೆ. ಅದರ ಬದಲು ಪುಣೆಯಿಂದ ರಕ್ತದ ಮಾದರಿ ಪರೀಕ್ಷೆಯಾಗಿ ವರದಿ ಬರುವ ತನಕ ಕಾಯಬೇಕಿದೆ. ಯಾವುದೇ ವ್ಯಕ್ತಿಯ ಸ್ಯಾಂಪಲ್ ಕಳುಹಿಸಿದ ಎರಡು ದಿನಕ್ಕೆ ವರದಿ ಬರಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ತಾಲೂಕು ಆರೋ ಗ್ಯಾಧಿಕಾರಿ ಡಾ.ರವಿ, ಜಿಲ್ಲಾ ಸರ್ವೇಕ್ಷ ಣಾಧಿಕಾರಿ ಡಾ.ಕುಸುಮ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಡಾ.ಪ್ರಕಾಶ್ ಇದ್ದರು.