2ನೇ ವಿಶ್ವ ಯುದ್ಧ ಕುರಿತ ಸ್ಮಾರಕವಾಗಲೀ, ಪುಸ್ತಕವಾಗಲೀ ಪ್ರಕಟವಾಗಿಲ್ಲಪತ್ರಕರ್ತ, ಲೇಖಕ ರಘು ಕಾರ್ನಾಡ್ ಬೇಸರ 

ಮೈಸೂರು,ಜು.14(ಆರ್‍ಕೆಬಿ)- ಭಾರ ತದ ಸಾವಿರಾರು ಸೈನಿಕರು ಹೋರಾಡಿದ್ದ ಎರಡನೇ ವಿಶ್ವ ಯುದ್ಧದ ಬಗ್ಗೆ ನಮ್ಮಲ್ಲಿ ಒಂದು ಸ್ಮಾರಕವಾಗಲಿ, ಹೆಚ್ಚಿನ ಪುಸ್ತಕವಾಗಲಿ ಪ್ರಕಟವಾಗಿಲ್ಲ ಎಂದು ಪತ್ರಕರ್ತÀ, ಲೇಖಕ ರಘು ಕಾರ್ನಾಡ್ ಇಂದಿಲ್ಲಿ ಅಭಿಪ್ರಾಯಪಟ್ಟರು.

ಮೈಸೂರು ಲಿಟರರಿ ಫೋರಂ ಚಾರಿಟಬಲ್ ಟ್ರಸ್ಟ್, ಮೈಸೂರು ಬುಕ್ ಕ್ಲಬ್ಸ್ ಮೈಸೂರಿನ ಸದರನ್ ಸ್ಟಾರ್ ಹೋಟೆಲ್‍ನಲ್ಲಿ ಆಯೋಜಿಸಿದ್ದ ಮೈಸೂರು ಸಾಹಿತ್ಯ ಹಬ್ಬದಲ್ಲಿ ಭಾನು ವಾರ `ಫಾರ್ದೆಸ್ಟ್ ಫೀಲ್ಡ್: ಆನ್ ಇಂಡಿ ಯನ್ ಸ್ಟೋರಿ ಆಫ್ ಸೆಕೆಂಡ್ ವಲ್ರ್ಡ್ ವಾರ್’ ಕುರಿತು ಏರ್ ಮಾರ್ಷಲ್ ನಂದ ಕಾರಿಯಪ್ಪ ಅವರೊಂದಿಗೆ ನಡೆಸಿದ ಸಂವಾದದಲ್ಲಿ ಅವರು ಹೇಳಿದರು.

ಎರಡನೇ ಮಹಾಯುದ್ಧದ ಬಗ್ಗೆ ಅಮೆ ರಿಕ ಸಾಹಿತ್ಯ ವಲಯದಲ್ಲಿ ಸಾಕಷ್ಟು ಚರ್ಚೆ ನಡೆದು, ಆ ಕುರಿತ ಪುಸ್ತಕ, ಸಿನಿಮಾಗಳು ಬಂದಿವೆ. ಆದರೆ ಭಾರತವೂ ಭಾಗವಹಿಸಿದ್ದ ಆ ಯುದ್ಧಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಚರ್ಚೆಗ ಳಾಗಲಿ, ಪುಸ್ತಕಗಳಾಗಲಿ ಪ್ರಕಟಗೊಂಡಿಲ್ಲ ದಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದರು.

ನಮ್ಮಲ್ಲಿ ಮೊದಲ ವಿಶ್ವಯುದ್ಧಕ್ಕೆ ಸಂಬಂಧಿಸಿದ ಸ್ಮಾರಕವಿದೆ. ಎರಡನೇ ವಿಶ್ವಯುದ್ಧದ ಸ್ಮಾರಕ ಇಲ್ಲ. ಎರಡನೇ ವಿಶ್ವಯುದ್ಧದ ಅವಧಿಯಲ್ಲಿ ಭಾರತದಲ್ಲಿ ಸ್ವಾತಂತ್ರ್ಯ ಹೋರಾಟ ಅಂತಿಮ ಘಟ್ಟವನ್ನು ತಲುಪಿತ್ತು ಎಂದರು.

ಪುಸ್ತಕ ಬರೆಯಲು ಮಾಹಿತಿ ಕಲೆ ಹಾಕುವಾಗ ಎದುರಾಗಿದ್ದ ಇತಿಮಿತಿಗಳು ಯಾವುವು ಎಂಬ ಸಭಿಕರೊಬ್ಬರ ಪ್ರಶ್ನೆಗೆ ಉತ್ತರಿಸಿದ ಅವರು, ನಮಗೆ ಗೊತ್ತಿರದ ಒಂದು ವಿಷಯವನ್ನು ಆಳವಾಗಿ ಕೆದಕುತ್ತಾ ಹೋದಾಗ ಸಾಕಷ್ಟು ಸವಾಲುಗಳು ಎದುರಾಗುತ್ತವೆ. ತಾವು ಪುಸ್ತಕ ಬರೆಯು ವುದು ಒಗಟಾಗಿ ಪರಿಣಮಿಸಿತ್ತು. 75 ವರ್ಷಗಳ ಹಳೆಯ ಮಾಹಿತಿ ಕಲೆ ಹಾಕು ವುದು ಸವಾಲಾಗಿತ್ತು. ಎರಡನೇ ವಿಶ್ವ ಯುದ್ಧದ ಕಾಲದಲ್ಲಿ ಜೀವಿಸಿದ್ದವರು ಮತ್ತು ಅವರ ಕುಟುಂಬದ ಸದಸ್ಯರಿಂದ ಮಾಹಿತಿ ಗಳನ್ನು ಕಲೆ ಹಾಕಿದ್ದಾಗಿ ತಿಳಿಸಿದರು.