ಸ್ಥಳೀಯ ಸಂಸ್ಥೆ ಚುನಾವಣೆಗೆ ಅಧಿಸೂಚನೆ: ಮೇ 16ರವರೆಗೆ ನಾಮಪತ್ರ ಸಲ್ಲಿಕೆ, 29ಕ್ಕೆ ಮತದಾನ 30ಕ್ಕೆ ಮತ ಎಣಿಕೆ

ಹಾಸನ: ನಗರದ ಸ್ಥಳೀಯ ಸಾರ್ವತ್ರಿಕ ಚುನಾವಣೆ-2019ನ್ನು ರಾಜ್ಯ ಚುನಾವಣಾ ಆಯೋಗವು ಮೇ 2ರಂದು ಘೋಷಿಸಿದ್ದು, ಜಿಲ್ಲಾ ಚುನಾವಣಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಚುನಾವಣಾ ಅಧಿಸೂಚನೆಯನ್ನು ಪ್ರಪತ್ರ-1ರಲ್ಲಿ ಹೊರಡಿಸಿದ್ದಾರೆ.

ಮೇ 16ರವರೆಗೆ ಪಟ್ಟಣ ಪಂಚಾಯಿತಿ ಗಳ ವಾರ್ಡ್‍ಗಳಿಗೆ ನಿಗದಿಪಡಿಸಲಾದ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 3 ಗಂಟೆ ಯವರೆಗೆ ನಾಮಪತ್ರಗಳನ್ನು ಸಲ್ಲಿಸಬಹು ದಾಗಿದ್ದು, ರಾಜ್ಯ ಚುನಾವಣಾ ಆಯೋಗದ ಪತ್ರ

ಸಂಖ್ಯೆ: ರಾಚುಲಿ 76ಇಯುಬಿ 2018, ಮೇ 6ರಂತೆ ಮೇ 11ರ ಎರಡನೇ ಶನಿವಾರ ದಂದು Negotiable Instruments Act, 1881 ಪ್ರಕಾರ ಸಾರ್ವತ್ರಿಕ ರಜಾ ದಿನ ಅಲ್ಲದ ಕಾರಣ ಅಂದು ಚುನಾ ವಣಾಧಿಕಾರಿಗಳು ನಿಗದಿಪಡಿಸಲಾದ ಚುನಾವಣಾಧಿಕಾರಿ ಗಳ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಬಹುದಾಗಿದೆ.

ಚುನಾವಣಾ ವೇಳಾಪಟ್ಟಿ: ಮೇ 16 ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನ. ಮೇ 17 ನಾಮಪತ್ರ ಪರಿಶೀಲನೆ. ಮೇ 20 ಉಮೇದುವಾರಿಕೆ ಹಿಂತೆಗೆದು ಕೊಳ್ಳಲು ಕೊನೆಯ ದಿನ.

ಮೇ 29ರಂದು ಬೆಳಿಗ್ಗೆ 7 ಗಂಟೆ ಯಿಂದ ಸಂಜೆ 5 ಗಂಟೆ ಮತದಾನ, ಮರು ಮತದಾನ ಅವಶ್ಯವಿದ್ದರೆ ಮೇ 30 ರಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ, ಮತದಾನ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಚುನಾವಣಾಧಿ ಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ತಿಳಿಸಿದ್ದಾರೆ.

ಮೇ 29ಕ್ಕೆ ಚುನಾವಣೆ: ಮೇ 29 ರಂದು ಜಿಲ್ಲೆಯ 2 ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಮತದಾನ ನಡೆಯಲಿದ್ದು, ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆ ಯವರೆಗೆ ಮತದಾರರು ಮತಚಲಾಯಿಸ ಬಹುದಾಗಿರುತ್ತದೆ. ಮತ ಎಣಿಕೆ ಕಾರ್ಯ ವನ್ನು ಮೇ 31ರಂದು ನಡೆಸುವಂತೆ ನಿರ್ದೇಶಲಾಗಿದೆ. ಹಾಗಾಗಿ, ಅಂದು ಆಯಾ ತಾಲೂಕು ಕೇಂದ್ರಗಳಲ್ಲಿ ಬೆಳಿಗ್ಗೆ 8 ಗಂಟೆಯಿಂದ ಮತ ಎಣಿಕೆ ಕಾರ್ಯವು ಪ್ರಾರಂಭಗೊಳ್ಳಲಿದೆ.