ಎನ್‍ಟಿಎಂ ಶಾಲೆ ಮುಚ್ಚಿಲ್ಲ; ಸ್ಥಳಾಂತರ ಅಷ್ಟೆ

ಮೈಸೂರು, ಫೆ.4(ಆರ್‍ಕೆಬಿ)- ಎನ್‍ಟಿಎಂ ಶಾಲೆ ಎದುರಿನ ಮಹಾರಾಣಿ ಶಿಕ್ಷಕಿಯರ ತರ ಬೇತಿ ಸಂಸ್ಥೆಯ ಕಟ್ಟಡಕ್ಕೆ ಸ್ಥಳಾಂತರ ಗೊಂಡಿದ್ದು, ಮೊದಲ ದಿನ ಶಾಲೆ ಯಲ್ಲಿ ಪಾಠ ಪ್ರವಚನಗಳು ಆರಂಭವಾಗಿದ್ದು, ಒಟ್ಟು 71ರಲ್ಲಿ 55 ಮಕ್ಕಳು ಹಾಜರಾಗಿದ್ದಾರೆ ಎಂದು ಡಿಡಿಪಿಐ ರಾಮಚಂದ್ರರಾಜೇ ಅರಸ್ ತಿಳಿಸಿದರು. ಎನ್‍ಟಿಎಂ ಶಾಲೆ ಸ್ಥಳಾಂ ತರ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಎನ್‍ಟಿಎಂ ಶಾಲೆ ಮೂಲ ಕಟ್ಟಡಕ್ಕೆ ಸ್ಥಳಾಂತರ ಗೊಂಡಿದೆ ಅಷ್ಟೆ. ಅದೇ ಹೆಸರು, ಅವರೇ ಶಿಕ್ಷಕರು, ಆದರೆ, ನೆಲೆ ಮಾತ್ರ ಬದಲಾಗಿದೆ ಅಷ್ಟೆ ಎಂದರು.

ಈ ಶಾಲೆಯ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಚಿವರೊಂದಿಗೆ ಮಾತನಾಡಿದ್ದು, ಇದಕ್ಕಾಗಿ 25ರಿಂದ 30 ಲಕ್ಷ ರೂ. ಕೊಡುವುದಾಗಿ ಭರವಸೆ ನೀಡಿದ್ದಾರೆ. ಇದ ಕ್ಕಾಗಿ ಒಂದು ಸಮಿತಿ ರಚಿಸಿ, ಪೋಷಕರು, ಮಕ್ಕಳು ಮತ್ತು ಶಿಕ್ಷಕರ ಸಲಹೆಗಳನ್ನು ಪಡೆಯ ಲಾಗುವುದು. ಇಲ್ಲಿ ಬೇರೆ ಮಾಧ್ಯಮ ಶಾಲೆ ಬೇಡಿಕೆ ಬಂದರೆ ಅದನ್ನು ಕೊಡುವ ಪ್ರಯತ್ನ ಮಾಡಲಾಗು ವುದು ಎಂದು ಹೇಳಿದರು.

ತಮ್ಮ ಮಕ್ಕಳ ಶಿಕ್ಷಣದ ಬಗ್ಗೆ ಪೋಷಕರು ಆತಂಕ ಪಡುವ ಅಗತ್ಯವಿಲ್ಲ. ಎನ್‍ಟಿಎಂ ಶಾಲೆ ಕಟ್ಟಡದಲ್ಲಿ ಹೇಗೆ ಪಾಠ ಪ್ರವಚನ ಗಳು ನಡೆಯುತ್ತಿದ್ದವೋ ಅದೇ ರೀತಿ ಇಲ್ಲಿಯೂ ಕಲ್ಪಿಸಲಾಗುವುದು. ಪೋಷಕರು ಬೇರೆ ಕಿವಿ ಮಾತುಗಳಿಗೆ ಮನ್ನಣೆ ನೀಡಬಾ ರದು. ಶಾಲೆಯ ಅಭಿವೃದ್ಧಿಗೆ ಹೆಚ್ಚು ಮುತು ವರ್ಜಿ ವಹಿಸಲಾಗುವುದು ಎಂದು ತಿಳಿಸಿದರು.